ಬೆಂಗಳೂರು: ಸರ್ಕಾರದ ವಿರುದ್ಧ 40% ಆರೋಪ ಮಾಡುವವರು ದಾಖಲೆ ಇಟ್ಟು ಆರೋಪ ಮಾಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗುತ್ತಿಗೆದಾರರ ಸಂಘದ ಮೇಲೆ ಆಕ್ರೋಶ ಹೊರಹಾಕಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಂಪಣ್ಣ ಯಾರನ್ನು ಭೇಟಿ ಮಾಡಿ ಆರೋಪ ಮಾಡಿದರು ಗೊತ್ತಿದೆ. ಕೆಂಪಣ್ಣ ಈ ರೀತಿ ಆರೋಪ ಮಾಡೋದು ಕೈಬಿಡಬೇಕು. ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದು ಆರೋಪ ಮಾಡಿದರು.
Advertisement
Advertisement
ರಾಜಕಾರಣಿಗಳು ಎಲ್ಲಾ ಭ್ರಷ್ಟರು ಅಂತಾ ತಿಳಿದಿದ್ದೀರಾ? ಇದು ಸರ್ಕಾರಕ್ಕೆ ಮುಜುಗರ ತರುವ ಕೆಲಸವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾಕೆ ಆರೋಪ ಮಾಡಲಿಲ್ಲ. ಆರೋಪ ಮಾಡಿದ ಕೂಡಲೇ ಎಲ್ಲವೂ ಸತ್ಯವೇ? ಎಲ್ಲಾ ಶಾಸಕರೂ ಭ್ರಷ್ಟರಾ? ಇದು ಕಾಂಗ್ರೆಸ್ ಷಡ್ಯಂತ್ರವಾಗಿದೆ. ಇವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಅಂತ ಸವಾಲ್ ಹಾಕಿದರು. ಈ ಬಗ್ಗೆ ಸಿಎಂಗೆ ತನಿಖೆ ಮಾಡಿ ಅಂತಾ ಹೇಳುತ್ತೇವೆ. ಸಿಎಂ ಈ ಬಗ್ಗೆ ನಿರ್ಧಾರ ಮಾಡ್ತಾರೆ ಎಂದರು.
Advertisement
Advertisement
ಮುನಿರತ್ನ ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಅಂತಾ ಮುನಿರತ್ನ ಹೇಳಿದ್ದಾರೆ. ನರೇಂದ್ರ ಮೋದಿ ಅಂದು 10% ಆರೋಪ ಮಾಡುವಾಗ ಸತ್ಯಾಂಶವನ್ನೇ ಹೇಳಿದ್ದಾರೆ. ಕೆಂಪಣ್ಣ ಆರೋಪದ ಮೇಲೆ ತನಿಖೆ ಮಾಡಿಸುತ್ತೇವೆ. ಬಿಜೆಪಿ ಸರ್ಕಾರ ನಮ್ಮ ಸಿಎಂ ಯಾವ ಸಂದರ್ಭದಲ್ಲಿ ತನಿಖೆ ಮಾಡಿಸಬೇಕೋ ಮಾಡಿಸುತ್ತಾರೆ ಎಂದರು. ಇದನ್ನೂ ಓದಿ: ಕಟ್ಟಡ ಕಟ್ಟಿದ್ದೇವೆ, 1200 ಕೋಟಿ ಬಿಲ್ ಬಿಡುಗಡೆ ಮಾಡಿ – ಗುತ್ತಿಗೆದಾರರಿಂದ ಸರ್ಕಾರಕ್ಕೆ ಪತ್ರ
ಪ್ರತಿ ಬಾರಿ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ 2013-18ವರೆಗೆ ಇತ್ತು. ಆಗ ಯಾಕೆ ಮಾತಾಡಲಿಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿ ಇದೆ. ಉತ್ತಮವಾಗಿ ಕೆಲಸ ಮಾಡ್ತಿದೆ. ಏನೇ ಆರೋಪ ಮಾಡಿದರೂ ದಾಖಲೆ ಕೊಟ್ಟು ಆರೋಪ ಮಾಡಲಿ ಅಂತ ರೇಣುಕಾಚಾರ್ಯ ಆಗ್ರಹ ಮಾಡಿದರು.
ಇಬ್ಬರು ಸಚಿವರು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಅಂತ ತಿಳಿಸಿದರು. ಸರ್ಕಾರದ ಹಣೆಬರಹ ನಿರ್ಧಾರ ಮಾಡೋರು ಜನರು. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ 2023ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಬರೋದು ಅಷ್ಟೇ ಸತ್ಯವಾಗಿದೆ. ಬಿಜೆಪಿಯಲ್ಲಿ ಮೂಲ, ವಲಸಿಗ ಅಂತ ಇಲ್ಲ. ಎಲ್ಲರೂ ಬಿಜೆಪಿ ಅವ್ರೆ. ಯಡಿಯೂರಪ್ಪ ಕೂಡಾ ಪಕ್ಷ ಅಧಿಕಾರಕ್ಕೆ ತರೋದಾಗಿ ಹೇಳಿದ್ದಾರೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದು: ಕೆಂಪಣ್ಣ