ದಾವಣಗೆರೆ: ಜಾತಿಗಣತಿ ವರದಿ (Caste Census) ಬಿಡುಗಡೆ ಮಾಡುತ್ತೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಪೌರುಷ ಈಗ ಎಲ್ಲಿ ಹೋಯ್ತು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M. P. Renukacharya) ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಚುನಾವಣೆ ಸಮಯದಲ್ಲಿ ಎಲ್ಲಿಗೆ ಹೋದ್ರೂ ಜಾತಿ ಜನಗಣತಿ ಬಿಡುಗಡೆ ಮಾಡೇ ಮಾಡ್ತಿನಿ ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದರು. ಆ ಪೌರುಷ ಈಗ ಎಲ್ಲಿ ಹೋಯ್ತು ಎಂದಿದ್ದಾರೆ. ಇದನ್ನೂ ಓದಿ: ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ – ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಬೇಸರ
ಕಾಂತರಾಜ ಆಯೋಗದ ವರದಿ ಅವೈಜ್ಞಾನಿಕ ಎಂದು ಬಿಜೆಪಿ ಮೊದಲೇ ಹೇಳಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಮಾತು ಕೇಳಿ ಸಿದ್ದರಾಮಯ್ಯ ಮರು ಜಾತಿಗಣತಿ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಆಗ ಖರ್ಚು ಮಾಡಿದ್ದ 170 ಕೋಟಿ ರೂ. ಯಾರು ಕೊಡ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ, ಕಾಂತರಾಜ್ ಆಯೋಗಕ್ಕೆ ಖರ್ಚು ಮಾಡಿದ್ದ 170 ಕೋಟಿ ರೂ. ಹಣವನ್ನು ಕಾಂಗ್ರೆಸ್ ಪಕ್ಷವೇ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಅಕ್ಟೋಬರ್ – ನವೆಂಬರ್ ಒಳಗೆ ಸಿಎಂ ಸೀಟು ಅಲ್ಲಾಡುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕೇಂದ್ರ ಜಾತಿಗಣತಿ ಮಾಡೋವಾಗ ರಾಜ್ಯ ಸರ್ಕಾರದಿಂದ ಜಾತಿಗಣತಿ ಬೇಡ: ನಿಖಿಲ್ ಕುಮಾರಸ್ವಾಮಿ