– ಕಾಂಗ್ರೆಸ್ ಏಜೆಂಟ್ ರೀತಿ ಯತ್ನಾಳ್ ಮಾತಾಡ್ತಿದ್ದಾರೆ
ಬೆಂಗಳೂರು: ಕಾಂಗ್ರೆಸ್ ಏಜೆಂಟ್ ರೀತಿ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಮತನಾಡಿದ್ದು ಬಿಜೆಪಿ ಸೋಲಿಗೆ ಕಾರಣಯಿತು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ (Renukacharya) ಒತ್ತಾಯಿಸಿದರು.
3 ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಇದು ಮುಂದಿನ ಚುನಾವಣೆಗೆ ಜನಾದೇಶವಲ್ಲ. ಹಣ ಬಲ, ಅಧಿಕಾರದ ಬಲದಿಂದ ಕಾಂಗ್ರೆಸ್ ಗೆದ್ದಿದೆ. ಲೋಕಸಭೆ ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ. ಯಾಕೆ ಕಾಂಗ್ರೆಸ್ ಗೆಲ್ಲಲು ಆಗಲಿಲ್ಲ? ಇದು ಮಾನದಂಡವಲ್ಲ. ಕಾರ್ಯಕರ್ತರು, ಮುಖಂಡರಿಗೆ ಆತ್ಮವಿಶ್ವಾಸ ತುಂಬಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡುತ್ತೇವೆ. ನೇರವಾಗಿ ಅನಗತ್ಯವಾಗಿ ಬಿಜೆಪಿಯಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಅಂತ್ಯ ಆಗಬೇಕು. ಯಡಿಯೂರಪ್ಪ ಅವರು ಪ್ರವಾಸ ಮಾಡಿ ಪಕ್ಷ ಕಟ್ಟಿದ್ರು. ಯಡಿಯೂರಪ್ಪ, ಅನಂತ್ ಕುಮಾರ್, ಬಿಬಿ ಶಿವಪ್ಪ ಸೇರಿ ಅನೇಕರು ಪಕ್ಷ ಕಟ್ಟಿದ್ರು. ಪಕ್ಷಕ್ಕೆ ಮೊನ್ನೆ ಮೊನ್ನೆ ಬಂದವರು ಅನಗತ್ಯವಾಗಿ ಗೊಂದಲ ಮಾಡ್ತಿದ್ದಾರೆ. ಸ್ವಯಂ ಘೋಷಿತ ಹಿಂದೂ ನಾಯಕ ಅಂತ ಹೇಳಿಕೊಳ್ತಿದ್ದಾರೆ. ಅವರು ಗೋಮುಖ ವ್ಯಾಘ್ರ. ಸ್ವಾಮೀಜಿಗಳು, ಸದಾನಂದಗೌಡ ಎಲ್ಲರ ವಿರುದ್ಧ ಅವರು ಮಾತಾಡ್ತಾರೆ. ಹೀಗೆ ಮಾತಾಡಿದ್ರೆ ಅವರ ವಿರುದ್ಧ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡ್ತೀವಿ. ನಾಳೆ ದಾವಣಗೆರೆಯ ಸಮಾವೇಶಕ್ಕೆ ದಿನಾಂಕ ಘೋಷಣೆ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಕೂಡಿ ಬಾಳಿದರೆ ಸ್ವರ್ಗ ಸುಖ – ಬಿಜೆಪಿ ಭಿನ್ನಮತಕ್ಕೆ ಛಲವಾದಿ ನಾರಾಯಣಸ್ವಾಮಿ ಅಸಮಾಧಾನ
ನಾವು ಹಾಲಿ ಶಾಸಕರನ್ನ ಕರೆದಿಲ್ಲ. ಮಾಜಿ ಶಾಸಕರನ್ನ ಮಾತ್ರ ಕರೆದಿದ್ದೇವೆ. ಸ್ವಯಂ ಘೋಷಣೆಯ ನಾಯಕ ಅವರು. ಹೈಕಮಾಂಡ್ ನಾಯಕರ ವಿರುದ್ಧ ಮಾತಾಡ್ತಾರೆ. ನಿಮ್ಮದು ಹರಕು ಬಾಯಿ. ನೀವೇನು ಮೊಹಮದ್ ಬಿನ್ ತೊಘಲಕಾ? 2023 ರಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ. ಕಾಂಗ್ರೆಸ್ ಏಜೆಂಟ್ ತರಹ ಮಾತಾಡಿ ಬಿಜೆಪಿ ಸೋಲಿಗೆ ಕಾರಣ ಆಯ್ತು. ಹರಕು ಬಾಯಿ ಮಾತಾಡಿ ಪಕ್ಷಕ್ಕೆ ಸೋಲಾಯ್ತು ಎಂದು ಕಿಡಿಕಾರಿದರು.
ವಕ್ಫ್ ಹೋರಾಟಕ್ಕೆ ಶೋಭಾ ಕರಂದ್ಲಾಜೆ, ಜೋಷಿ ಬಂದಿದ್ದರು. ಹಾಗಂತ ಪರ್ಯಾಯ ನಾಯಕತ್ವ ಸೃಷ್ಟಿ ಮಾಡಿ ಅಂತಾ ಹೇಳಿದ್ದಾರಾ? ನಿಮಗೆ ಪ್ರವಾಸ ಮಾಡಲು ಪಕ್ಷದ ಚಿಹ್ನೆ ಕೊಡಲಾಗಿದೆಯಾ? ವಿನಾಕಾರಣ ಸಂಘರ್ಷ ಮಾಡ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ದೊಡ್ಡ ಒಡಕು ಇದೆ. ಸಿದ್ದರಾಮಯ್ಯ, ಡಿಕೆಶಿ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಹೊರಗೆ ತೋರಿಸುತ್ತಿಲ್ಲ. ನೀವು ಯಾಕೆ ಹೀಗೆ ಮಾತಾಡ್ತಿದ್ದೀರಾ? ನಿಮ್ಮ ನಡವಳಿಕೆ ಬದಲಾವಣೆ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರ ಭೇಟಿ ಮಾಡ್ತೀವಿ. ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸರ್ಕಾರದಿಂದ ಬಿಎಸ್‌ವೈ ವಿರುದ್ಧ ರಾಜಕೀಯ ದ್ವೇಷ: ಅಶ್ವಥ್ ನಾರಾಯಣ್
ಸದಾನಂದಗೌಡರು ಹೇಳಿದ್ದಾರೆ. ಅದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬೀದಿಯಲ್ಲಿ ತಮಟೆ ಹೊಡೆಯುತ್ತಿರೋರು ಯತ್ನಾಳ್ ಟೀಂ. ಸದಾನಂದಗೌಡರ ಬಗ್ಗೆಯೇ ಅವರು ಮಾತಾಡಿದ್ದಾರೆ. ಇದಕ್ಕಾಗಿ ನಾವು ಇವತ್ತು ಸೇರಿದ್ದೇವೆ. ಯತ್ನಾಳ್ ಹರಕು, ಹೊಲಸು ಬಾಯಿ. ಮೋದಿ ಅವರಿಗೇ ಸಲಹೆ ಕೊಡುವಷ್ಟು ದೊಡ್ಡವನಾ ನೀನು. ನಿನ್ನ ಕೊಡುಗೆ ಎನು? ಉಂಡು ಹೋದಾ, ಕೊಂಡು ಹೋದಾ ರೀತಿ ಯತ್ನಾಳ್. ಆತ ಕಾಂಗ್ರೆಸ್ ಏಜೆಂಟ್. ಯಾರು ಕೇಂದ್ರದ ನಾಯಕರು ನಿಮಗೆ ಸಪೋರ್ಟ್ ಮಾಡಿದ್ರು ಮೊದಲು ಹೇಳಿ. ನೀನೇನು ಹಿಟ್ಲರ್ ಹಾ? ಸದ್ದಾಂ ಹುಸೇನಾ? ಸದಾನಂದಗೌಡರದ್ದು ಏನು ಬಿಚ್ಚಿ ಇಡುತ್ತೀರಾ ಇಡು ನೋಡೋಣ. ನಾವು ನಿನ್ನದು ಬಿಚ್ಚಿಡುತ್ತೇವೆ. ಕಾಂಗ್ರೆಸ್ ಅವರು ಯತ್ನಾಳ್‌ಗೂ ಸುಪಾರಿ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಿಜೆಪಿ ಪಕ್ಷ ಗೊಂದಲ ಮೂಡಿಸೋಕೆ ಸುಪಾರಿ ಕೊಟ್ಟಿದ್ದಾರೆ. ಹೀಗಾಗಿ ಯತ್ನಾಳ್ ಕಾಂಗ್ರೆಸ್ ಏಜೆಂಟ್ ರೀತಿ ವರ್ತನೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ


