ದಾವಣಗೆರೆ: ಬಿಜೆಪಿಯ (BJP) ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (Renukacharya) ಅವರು ಮೂರು ನಾಲ್ಕು ಬಾರಿ ಭೇಟಿ ಮಾಡಿ ಕಾಂಗ್ರೆಸ್ (Congress) ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದರು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ (SS Mallikarjun) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೇಟಿ ವೇಳೆ ನಿನ್ನನ್ನು ಯಾರು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಹೇಳಿ ನಾನೇ ಕಳುಹಿಸಿದ್ದೆ. ವಿಜಯೇಂದ್ರ (Vijayendra) ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ರೇಣುಕಾಚಾರ್ಯ ಇತ್ತ ಸುಳಿಯಲಿಲ್ಲ ಎಂದರು. ಇದನ್ನೂ ಓದಿ: 8 ದಿನದ ಬಳಿಕ ಕಾಳಿ ನದಿಯಿಂದ ದಡ ಸೇರಿದ ಲಾರಿ – ಹೇಗಿತ್ತು ಕಾರ್ಯಾಚರಣೆ?
ಮಾಜಿ ಸಂಸದ ಜಿಎಂ ಸಿದ್ದೇಶ್ವರ್ (Siddeshwara) ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮೇಲೆ ಇಲ್ಲ ಸಲ್ಲದ ಅರೋಪ ಮಾಡುತ್ತಿದ್ದಾರೆ. ಎಸ್ ಎ ರವೀಂದ್ರನಾಥ್ ಮೇಲೆ ಅಪಾರವಾದ ಗೌರವ ಇದೆ. ಅವರು ನಮ್ಮ ಅಣ್ಣ. ಬಿಜೆಪಿ ಪಕ್ಷ ಕಟ್ಟಲು ಹಗಲುರಾತ್ರಿ ಶ್ರಮಿಸಿವಹಿಸಿ ಇಷ್ಟರ ಮಟ್ಟಿಗೆ ತೆಗೆದುಕೊಂಡು ಬಂದಿದ್ದಾರೆ. ಐದಾರು ಜನರು ಸೇರಿ ರಾತ್ರಿಯಿಡಿ ಪ್ಲಾನ್ ಮಾಡಿ ಬೆಳಗ್ಗೆ ಎದ್ದು ಪಕ್ಷ ಸಂಘಟನೆ ಮಾಡಲು ಓಡಾಡಿದವರು. ಅವರ ಬಗ್ಗೆ ಸಿದ್ದೇಶ್ವರ್ ಲಘುವಾಗಿ ಮಾತನಾಡುತ್ತಾರೆ. ಜಿಲ್ಲೆಯಲ್ಲಿ ಅವರ ಅಭಿವೃದ್ದಿ ಕೆಲಸ ಏನ್ ಇದೆ ಎಂದು ಹೇಳಲಿ ಎಂದು ಸಿದ್ದೇಶ್ವರ್ ವಿರುದ್ದ ಮಲ್ಲಿಕಾರ್ಜುನ್ ಅಕ್ರೋಶ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹೊಂದಾಣಿಕೆ ರಾಜಕೀಯ ನಡೆದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ್ ಅವಧಿಯಲ್ಲಿ ಯಾವ ಕೆಲಸ ನಡೆದಿಲ್ಲ. ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು ಅಷ್ಟೇ. ಅವರ ಕಾಮಗಾರಿಗಳಿಂದ ಜನ ರೋಸಿ ಹೋಗಿದ್ದಾರೆ. ಅದಕ್ಕೆ ಅಶೋಕ ರಸ್ತೆಗೆ ಅವರ ಪ್ರತಿಮೆ ಹಾಕಿಸಬೇಕು. ಬೇಕಾದರೆ ಅದಕ್ಕೆ ಹಣ ನಾನು ಕೊಡುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್
ಅಶೋಕ ರಸ್ತೆ ಅಂಡರ್ ಪಾಸ್ ಸರಿಪಡಿಸಲು ಎಂಪಿ ಜೊತೆಗೆ ಮಾತನಾಡಿ ಪ್ಯಾರಲಲ್ ರಸ್ತೆ ಮಾಡುತ್ತೇವೆ. ಇದರ ಬಗ್ಗೆ ಚರ್ಚೆ ಮಾಡಲಾಗುವುದು. ಮಾಜಿ ಸಂಸದರು ಊರು ಉದ್ದಾರ ಮಾಡುವುದನ್ನು ಬಿಟ್ಟು ವೈಯಕ್ತಿಕ ಅಭಿವೃದ್ಧಿಯಾಗಿದ್ದಾರೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವೀಂದ್ರನಾಥ ನನಗೆ ಸಹೋದರರು ಮೊದಲಿನಿಂದಲೂ ಆತ್ಮೀಯರು. ಅವರನ್ನು ಮಾತನಾಡಿಸುವುದು ಬಿಜೆಪಿಯವರಿಗೆ ತಪ್ಪಾಗಿ ಕಂಡರೆ ಏನೂ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.