ಕಾಂಗ್ರೆಸ್‍ಗೆ ನಾಚಿಕೆಯಾಗಬೇಕು ಪಕ್ಷದ ಅಧ್ಯಕ್ಷ ಗೂಂಡಾಗಿರಿ ಮಾಡುತ್ತಿದ್ದಾರೆ: ರೇಣುಕಾಚಾರ್ಯ

Public TV
1 Min Read
RENUKACHARYA

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಅವರ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸದನದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

DK SHIVAKUMAR AND ESHWARAPPPA

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಆಡಳಿತ ಪಕ್ಷಕ್ಕೆ ಕಾಂಗ್ರೆಸ್ ಸಲಹೆ ಕೊಡಬಹುದಿತ್ತು. ರಾಜ್ಯಗಳ ಸಮಸ್ಯೆಗಳ ಬಗ್ಗೆ ಸಿಎಂಗೆ ಸಲಹೆ ಕೊಡಲು ಕಾಂಗ್ರೆಸ್‍ಗೆ ಅವಕಾಶವಿತ್ತು. ಆದರೆ ನಿನ್ನೆಯಿಂದ ಸದನ ಕಲಾಪವನ್ನು ಬಲಿ ತೆಗೆದುಕೊಂಡಿದ್ದಾರೆ. ಇದನ್ನೆಲ್ಲಾ ರಾಜ್ಯದ ಜನ ನೋಡುತ್ತಿದ್ದಾರೆ ಮುಂದೆ ತಕ್ಕ ಪಾಠ ಕಲಿಸುತ್ತಾರೆ. ಡಿಕೆಶಿ ನಿನ್ನೆ ಸದನದಲ್ಲಿ ಗೂಂಡಾಗಿರಿ ಮಾಡಿದ್ದಾರೆ. ರಾಜ್ಯದ ಜನ ನಿಮ್ಮನ್ನು ಮುಂದೆ ಸಿಎಂ ಮಾಡಿದ್ರೆ, ಮತ್ತೆ ನೀವು ಗೂಂಡಾಗಿರಿ ಮಾಡ್ತೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಅಂತ ಹೊರಟ ನಮ್ಮ ಪಕ್ಷ ಇವತ್ತು ಬುದ್ಧಿ ಹೇಳಿಸಿಕೊಳ್ಳಬೇಕಾಗಿದೆ: ಮಾಧುಸ್ವಾಮಿ

ಏಕಾಏಕಿ ಈಶ್ವರಪ್ಪ ವಿರುದ್ಧ ಡಿಕೆಶಿ ಗೂಂಡಾಗಿರಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಗೂಂಡಾಗಿರಿ ಮಾಡಿದರೆ ಹೇಗೆ? ಈ ಹಿಂದೆ ಕಾಂಗ್ರೆಸ್ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ನಮ್ಮ ಮೇಲೆ ಗುಂಡು ಹಾರಿಸ್ತಾಯಿದ್ರು. ಹುಬ್ಬಳ್ಳಿಯಲ್ಲಿ ಹಿಂದೂಗಳ ಮೇಲೆ ಗುಂಡು ಹಾರಿಸಿದ್ದರು. ಈಶ್ವರಪ್ಪ ಮೊನ್ನೆ ಕೊಟ್ಟಂತಹ ಹೇಳಿಕೆಯನ್ನು ಕಾಂಗ್ರೆಸ್‍ನವರು ತಿರುಚಿದ್ದಾರೆ. ಇದು ನಿಮಗೆ ಶೋಭೆ ತರಲ್ಲ. ಗೂಂಡಾಗಿರಿ ಮಾಡಿದರೆ ದೇಶದಲ್ಲಿ ನೆಲೆ ಸಿಗುವುದಿಲ್ಲ. 2023ಕ್ಕೆ ಸಂಪೂರ್ಣವಾಗಿ ಜನ ಕಾಂಗ್ರೆಸ್‍ನ್ನು ತಿರಸ್ಕಾರ ಮಾಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

Share This Article
Leave a Comment

Leave a Reply

Your email address will not be published. Required fields are marked *