ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು (Renukaswamy) ಕೊಲೆಗೈದ ಪ್ರಕರಣದಲ್ಲಿ ದರ್ಶನ್ (Darshan) ತಂಡ ಅರೆಸ್ಟ್ ಆಗಿದೆ. ಈಗ ಅರೆಸ್ಟ್ ಆಗಿದ್ದರೂ ಈ ಪ್ರಕರಣದಿಂದ ಪಾರಾಗಲು ದರ್ಶನ್ ಭಾರೀ ಪ್ಲ್ಯಾನ್ ಮಾಡಿದ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೌದು. ರೇಣುಕಾಸ್ವಾಮಿಯನ್ನು ಕೊಲೆಮಾಡಿ ಶವ ವಿಲೇವಾರಿ ಬಳಿಕ ಹಂತಕರಿಗೆ ನಡುಕ ಶುರುವಾಗಿತ್ತು. ಹೀಗಾಗಿ ಮೂವರಲ್ಲಿ ಶರಣಾಗುವಂತೆ ದರ್ಶನ್ ಸೂಚನೆ ನೀಡಿದ್ದರು. ಜೂನ್ 10 ರಂದು ಮೂವರು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿ ನಾವು ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು.
Advertisement
Advertisement
ಕೊಲೆ ಮಾಡಿ ಶರಣಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು (Police) ಮೂವರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿ ಯಾರ ಮಾಹಿತಿ ಮೇರೆಗೆ ಬಂದು ಶರಣಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಸಂಬಂಧವೇ ಇಲ್ಲದ ಒಂದೊಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಮತ್ತೆ ತನಿಖೆಗೆ ಇಳಿದು ಮೊಬೈಲ್ ಪರಿಶೀಲನೆ ನಡೆಸಿದಾಗ ದರ್ಶನ್‌ಗೆ ರಾತ್ರಿಯಿಡಿ ವಾಟ್ಸಪ್ ಕರೆ ಮಾಡಿರುವ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಈ ಪ್ರಕರಣದ ನೈಜ ಹಂತಕರ ಬಗ್ಗೆ ಬಾಯಿಬಿಟ್ಟಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್; ಟೈಮ್‌ಲೈನ್ ಹೀಗಿದೆ ನೋಡಿ..
Advertisement
Advertisement
ಗ್ಯಾಂಗ್‌ನಲ್ಲಿ ಇರಲಿಲ್ಲ:
ಮೊದಲು ಶರಣಾಗತಿಯಾದ ಮೂವರು ಈ ಕೊಲೆ ಪ್ರಕರಣದಲ್ಲೇ ಇರಲಿಲ್ಲ. ಹಲ್ಲೆಯೂ ಮಾಡಿಲ್ಲ, ಕಿಡ್ನ್ಯಾಪ್ ಮಾಡಿಲ್ಲ. ಪೊಲೀಸರ ದಿಕ್ಕು ತಪ್ಪಿಸಲು ದರ್ಶನ್ ಈ ಪ್ಲ್ಯಾನ್ ಮಾಡಿದ್ದರು. ಈ ಮೂವರ ಜೊತೆ ಶವ ವಿಲೇವಾರಿ ಮಾಡಲು 30 ಲಕ್ಷ ರೂ. ಡೀಲ್ ನಡೆದಿತ್ತು. ಈಗ ಸುಳ್ಳು ಆರೋಪಿಗಳಾಗಿ ಶರಣಾಗಿದ್ದಕ್ಕೆ ಪೊಲೀಸರು ಪ್ರತ್ಯೇಕ ಸೆಕ್ಷನ್ ಅಡಿ ಬಂಧಿಸಿದ್ದಾರೆ.