ಲಂಡನ್: ಕಾಮನ್‍ವೆಲ್ತ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಎಸೆದ ಇನ್‍ಸ್ವಿಂಗ್ ಎಸೆತವೊಂದು ಕ್ರಿಕೆಟ್ ಪ್ರಿಯರ ಮನಗೆದ್ದಿದೆ.
Advertisement
22ನೇ ಕಾಮನ್‍ವೆಲ್ತ್ ಗೇಮ್ಸ್‌ನ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಬಾರ್ಬಡೋಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಶೀಫಾಲಿ ವರ್ಮಾ 43 ರನ್ (26 ಎಸೆತ, 7 ಬೌಂಡರಿ, 1), ಜೆಮಿಮಾ ರಾಡ್ರಿಗಸ್ ಅಜೇಯ 56 ರನ್ (46 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ದೀಪ್ತಿ ಶರ್ಮಾ 34 ರನ್ (28 ಎಸೆತ, 2 ಬೌಂಡರಿ, 1 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್‍ಗಳ ಉತ್ತಮ ಮೊತ್ತ ಕಲೆ ಹಾಕಿತು. ಇದನ್ನೂ ಓದಿ: ಹೈಜಂಪ್‌ನಲ್ಲಿ ತೇಜಸ್ವಿನ್ ತೇಜಸ್ಸು, ವೇಟ್‌ಲಿಫ್ಟಿಂಗ್‌ನಲ್ಲಿ ಗುರ್‌ದೀಪ್ ಪರಾಕ್ರಮ- ಭಾರತಕ್ಕೆ ಮತ್ತೆರಡು ಕಂಚು
Advertisement
Advertisement
163 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಬಾರ್ಬಡೋಸ್ ರೇಣುಕಾ ಸಿಂಗ್ ದಾಳಿಗೆ ತತ್ತರಿಸಿ ಕೇವಲ 62 ರನ್‍ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ತಂಡ 100 ರನ್‍ಗಳ ಭರ್ಜರಿ ಜಯ ದಾಖಲಿಸಿ ಸೆಮಿಫೈನಲ್ ರೇಸ್‌ನಲ್ಲಿದೆ.
Advertisement
ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ ರೇಣುಕಾ ಸಿಂಗ್ 4 ಓವರ್ ಎಸೆದು ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಬಾರ್ಬಡೋಸ್ ತಂಡದ ಬ್ಯಾಟರ್‌ಗಳು ರೇಣುಕಾ ಶರ್ಮಾರ ಸ್ವಿಂಗ್ ದಾಳಿಗೆ ತತ್ತರಿಸಿ ಹೇಳ ಹೆಸರಿಲ್ಲದಂತೆ ಪೆವಿಲಿಯನ್ ಪರೇಡ್ ನಡೆಸಿದರು.
Another four-wicket haul for Renuka Singh Thakur at #B2022 ????
Relive her sensational 4/10 against Barbados ????️ pic.twitter.com/mvXJzanvqm
— ICC (@ICC) August 4, 2022
ಅದರಲ್ಲೂ ಬಾರ್ಬಡೋಸ್ ಆಟಗಾರ್ತಿ ಆಲಿಯಾ ಅಲ್ಲೆನ್ ಬ್ಯಾಟಿಂಗ್‍ಗೆ ಆಗಮಿಸುತ್ತಿದ್ದಂತೆ 5ನೇ ಓವರ್ ಎಸೆಯಲು ಬಂದ ರೇಣುಕಾ ಸಿಂಗ್ ಪ್ರೇಕ್ಷಕರನ್ನು ಮೂಕ ಪ್ರೇಕ್ಷಕರನ್ನಾಗಿಸಿದರು. ರೇಣುಕಾ ಸಿಂಗ್ ಎಸೆದ ಇನ್‍ಸ್ವಿಂಗ್ ಅರಿಯಲು ವಿಫಲವಾದ ಆಲಿಯಾ ಅಲ್ಲೆನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಇತ್ತ ಪ್ರೇಕ್ಷಕರು ರೇಣುಕಾ ಸಿಂಗ್ ಇನ್‍ಸ್ವಿಂಗ್ ಕಂಡು ಬೆರಗಾದರು. ಇದೀಗ ರೇಣುಕಾ ಸಿಂಗ್ ಇನ್‍ಸ್ವಿಂಗ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಟಿ20 ರ್‍ಯಾಕಿಂಗ್: ಜೀವನ ಶ್ರೇಷ್ಠ ಎರಡನೇ ಸ್ಥಾನಕ್ಕೇರಿದ ಸೂರ್ಯ ಕುಮಾರ್ – ಪಾಕ್ ನಾಯಕನಿಗೆ ನಡುಕ
22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹಿಳೆಯ ಕ್ರಿಕೆಟ್ ಸೇರ್ಪಡೆಗೊಳಿಸಲಾಗಿದೆ. ಈಗಾಗಲೇ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.