-ಸ್ಕ್ಯಾನ್ ಮಾಡಿ, ಪೇ ಮಾಡಿದ್ರೆ ಸುಲಭವಾಗಿ ಮೊಬೈಲ್ ಆಕ್ಸಿಸ್
ಬೆಂಗಳೂರು: ಬಾಡಿಗೆಗೆ ಬಾಯ್ ಫ್ರೆಂಡ್ ಸಿಗುತ್ತಾನೆ ಎಂದು ಪೋಸ್ಟರ್ ಅಂಟಿಸಿ, ವಂಚಕರು ಪ್ರೇಮಿಗಳ ದಿನವನ್ನು (Valentines Day) ಅಸ್ತ್ರ ಮಾಡಿಕೊಂಡಿದ್ದಾರೆ.
ನಗರದಲ್ಲಿ ಎಲ್ಲರೂ ಪ್ರೇಮಿಗಳ ದಿನದ ಸಂಭ್ರಮದಲ್ಲಿರುವಾಗ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ವ್ಯಾಲೆಂಟೈನ್ಸ್ ಡೇಗೆ ಬಾಯ್ ಫ್ರೆಂಡ್ ಬೇಕಾ? ಹಾಗಾದ್ರೆ ಜಸ್ಟ್ ಸ್ಕ್ಯಾನ್ ಮಾಡಿ, ಪೇ ಮಾಡಿ ಎಂದಿದ್ದಾರೆ. ಯಾಮಾರಿ ಸ್ಕ್ಯಾನ್ ಮಾಡಿ, ಪೇ ಮಾಡಿದರೆ, ಸಂಪೂರ್ಣವಾಗಿ ನಿಮ್ಮ ಮೊಬೈಲ್ ಆಕ್ಸೆಸ್ ವಂಚಕರ ಕೈಗೆ ತಲುಪಲಿದೆ.ಇದನ್ನೂ ಓದಿ:
ಬಾಡಿಗೆಗೆ ಬಾಯ್ ಫ್ರೆಂಡ್ ಸಿಗುತ್ತಾನೆ ಎಂದು ನಗರದ ಹಲವು ಕಡೆ ಪೋಸ್ಟರ್ ಅಂಟಿಸಿರುವುದು ಬೆಳಕಿಗೆ ಬಂದಿದೆ. ಪೋಸ್ಟರ್‌ನಲ್ಲಿ ಇರುವ ಸ್ಕ್ಯಾನರ್‌ಗೆ ಕೇವಲ 389 ರೂ. ಪೇ ಮಾಡಿದರೆ ಸಾಕು. ಸೆಲೆಬ್ರೇಷನ್‌ಗಾಗಿ ಒಂದು ದಿನಕ್ಕೆ ಬಾಯ ಫ್ರೆಂಡ್ ಲಭ್ಯ ಎಂದು ಉಲ್ಲೇಖಿಸಿದ್ದಾರೆ.
ಇದೀಗ ಜಯನಗರ, ಬನಶಂಕರಿ ಭಾಗದಲ್ಲಿ ಪೋಸ್ಟರ್ ಭಾರೀ ಸದ್ದು ಮಾಡುತ್ತಿದ್ದು, ಜಯನಗರ 8ನೇ ಬ್ಲಾಕ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪೋಸ್ಟರ್ ಅಂಟಿಸಿದ್ದಾರೆ. ರಸ್ತೆ ಹತ್ತಿರದ ಕಾಂಪೌಂಡ್ ಗೋಡೆಗಳ ಮೇಲೆಯೂ ಪೋಸ್ಟರ್ ಹಾಕಿದ್ದಾರೆ.
ವೈರಲ್ ಆಗುತ್ತಿರುವ ಪೋಸ್ಟರ್‌ನಲ್ಲಿ `Rent A Boyfriend For 389, Scan Me’ ಎಂದು ಬರೆದಿದ್ದಾರೆ. ಈ ಪೋಸ್ಟರ್ ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಎಕ್ಸ್‌ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: