BollywoodCinemaLatestMain PostNational

ಬಾಲಿವುಡ್ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ನಿಧನ

Advertisements

ಮುಂಬೈ: ಬಾಲಿವುಡ್‍ನಲ್ಲಿ ಹಲವಾರು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದ ಖ್ಯಾತ ಗಾಯಕ ಭೂಪಿಂದರ್ ಸಿಂಗ್(82) ಅವರು ನಿಧನರಾಗಿದ್ದಾರೆ.

ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭೂಪಿಂದರ್ ಸಿಂಗ್ ಅವರಿಗೆ ಒಂದು ವಾರದ ಹಿಂದೆಯಷ್ಟೇ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ 7.45ರ ಸುಮಾರಿಗೆ ಭೂಪಿಂದರ್ ಸಿಂಗ್ ಸಾವನ್ನಪ್ಪಿದ್ದಾರೆ. ಮಂಗಳವಾರ ಅವರ ಅಂತ್ಯಕ್ರಿಯೆಯನ್ನು ನಡೆಸುವುದಾಗಿ ಪತ್ನಿ ಮಿತಾಲಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: 14 ವರ್ಷದ ಥ್ರೋಬ್ಯಾಕ್‌ ಫೋಟೋ ಶೇರ್ ಮಾಡಿ – ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ಸಿಂಡ್ರೆಲಾ

ಪತ್ನಿ ಹಾಗೂ ಮಗನನ್ನು ಅಗಲಿರುವ ಭೂಪಿಂದರ್ ಸಿಂಗ್ ಅವರು ಮೂಲತಃ ಪಂಜಾಬ್‍ನ ಅಮೃತಸಾರದವರಾಗಿದ್ದು, ಆಲ್ ಇಂಡಿಯಾ ರೇಡಿಯೋ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆಲ್ ಇಂಡಿಯಾ ರೇಡಿಯೊ ಪಾರ್ಟಿಯೊಂದರಲ್ಲಿ ಸಂಯೋಜಕ ಮದನ್ ಮೋಹನ್ ಅವರು ಭೂಪಿಂದರ್ ಸಿಂಗ್ ಅವರು ಗಿಟಾರ್ ಬಾರಿಸುತ್ತಿರುವುದನ್ನು ಕೇಳಿ ಮುಂಬೈಗೆ ಬರುವಂತೆ ತಿಳಿಸಿದ್ದರು. ಗುರುತಿಸಿದ ನಂತರ, ಅವರನ್ನು ಮುಂಬೈಗೆ ಕರೆಸಲಾಯಿತು. 1964ರಲ್ಲಿ ಚೇತನ್ ಆನಂದ್ ನಿರ್ದೇಶಿಸಿದ್ದ “ಹಕೀಕತ್” ಸಿನಿಮಾದಲ್ಲಿ ಹೊಕೆ ಮಜ್ಬೂರ್ ಹಾಡನ್ನು ಹಾಡುವಂತೆ ಭೂಪಿಂದರ್ ಸಿಂಗ್ ಅವರಿಗೆ ಮದನ್ ಮೋಹನ್ ಅವರು ಆಫರ್ ನೀಡಿದ್ದರು. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ `ನೀಲಕಂಠ’ ನಟಿ ನಮಿತಾ ಫುಲ್ ಮಿಂಚಿಂಗ್

ನಾಮ್ ಗಮ್ ಜಾಯೆಗಾ.., ಹೋತಾ ಪೆ ಐಸಿ ಬಾತ್.., ಕಭಿ ಕಿಸಿ ಕೋ ಮುಕಮ್ಮಲ್ ಜಹಾ ನಹಿ ಮಿಲ್ತಾ.. ಸೇರಿ ಇನ್ನೂ ಹಲವು ಸೂಪರ್ ಹಿಟ್ ಗೀತೆಗಳು ಭೂಪಿಂದರ್ ಸಿಂಗ್ ಅವರ ಕಂಠದಲ್ಲಿ ಮೂಡಿ ಬಂದಿದೆ. ಗಾಯನವನ್ನು ಹೊರತುಪಡಿಸಿ ಭೂಪಿಂದರ್ ಸಿಂಗ್ ಅವರು “ದಮ್ ಮಾರೋ ದಮ್”, “ಚುರಾ ಲಿಯಾ ಹೈ”, “ಚಿಂಗಾರಿ ಕೋಯಿ ಭಡ್ಕೆ” ಮತ್ತು “ಮೆಹಬೂಬಾ ಓ ಮೆಹಬೂಬಾ” ಸೇರಿದಂತೆ ಹಲವಾರು ಜನಪ್ರಿಯ ಹಾಡುಗಳಿಗೆ ಗಿಟಾರ್ ನುಡಿಸಿದ್ದರು.

ಭೂಪಿಂದರ್ ಸಿಂಗ್ ಅವರ ನಿಧನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂತಾಪ ವ್ಯಕ್ತಪಡಿಸಿದ್ದು, ಅವರ ಧ್ವನಿಯನ್ನು ಲಕ್ಷಾಂತರ ಸಂಗೀತ ಪ್ರೇಮಿಗಳು ಗೌರವಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Live Tv

Leave a Reply

Your email address will not be published.

Back to top button