ಮುಂಬೈ: ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ (90) ಇಂದು (ಡಿ.23) ವಿಧಿವಶರಾಗಿದ್ದಾರೆ. ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮುಂಬೈಯಲ್ಲಿರುವ ವೊಕಾರ್ಡ್ ಆಸ್ಪತ್ರೆಯಲ್ಲಿ ಇಂದು ಸಂಜೆ 6:30ಕ್ಕೆ ನಿಧನರಾದರು.
ಶ್ಯಾಮ್ ಬೆನಗಲ್ (Shyam Benegal) ಡಿ. 14 ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದರು.
Advertisement
ಬೆನಗಲ್ ಅವರಿಗೆ ಭಾರತ ಸರ್ಕಾರವು 1976 ರಲ್ಲಿ ಪದ್ಮಶ್ರೀ ಮತ್ತು 1991 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿತ್ತು. ಅವರ ಯಶಸ್ವಿ ಚಲನಚಿತ್ರಗಳಲ್ಲಿ ಮಂಥನ್, ಜುಬೇದಾ ಮತ್ತು ಸರ್ದಾರಿ ಬೇಗಂ ಸೇರಿವೆ.
Advertisement
Advertisement
ಶ್ಯಾಮ್ ಬೆನಗಲ್, ಡಿಸೆಂಬರ್ 14, 1934 ರಂದು ಹೈದರಾಬಾದ್‌ನಲ್ಲಿ ಜನಿಸಿದ್ದರು. ಶ್ಯಾಮ್ ಬೆನಗಲ್ ಅವರ ತಂದೆ ಶ್ರೀಧರ್ ಬೆನಗಲ್ ಕರ್ನಾಟಕದವರು. ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದಿದ್ದ ಇವರು ಛಾಯಾಗ್ರಹಕರಾಗಿದ್ದರು.
Advertisement
ಕೇವಲ 12 ವರ್ಷ ಇದ್ದಾಗ ಶ್ಯಾಮ್ ತನ್ನ ತಂದೆ ಉಡುಗೊರೆಯಾಗಿ ನೀಡಿದ ಕ್ಯಾಮೆರಾವನ್ನು (Camera) ಬಳಸಿಕೊಂಡು ತನ್ನ ಮೊದಲ ಚಲನಚಿತ್ರವನ್ನು ನಿರ್ಮಿಸಿದ್ದರು.
ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಹೈದರಾಬಾದ್ ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಿದ್ದರು.