ಈ ಹಿಂದೆ ಬೆಂಗಳೂರಿನ ವಕೀಲೆಯೊಬ್ಬರು 24 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ (Digital Arrest) ಆಗಿದ್ದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಕನ್ನಡದ ಹೆಸರಾಂತ ನಿರ್ದೇಶಕಿ, ನಟಿ ಹಾಗೂ ಬಿಜೆಪಿಯ ಕಾರ್ಯಕರ್ತೆ ರೂಪಾ ಅಯ್ಯರ್ಕೂ (Roopa Iyer) ಡ ಅಂಥದ್ದೇ ಸಂಕಷ್ಟ ಎದುರಿಸಿದ್ದಾರೆ. ಬುಧವಾರ ಮಧ್ಯಾಹ್ನ 2.30ರಿಂದ ಗುರುವಾರ ಬೆಳಗ್ಗೆ 10.30ರವೆಗೂ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು ಎಂದು ಸ್ವತಃ ರೂಪಾ ಅಯ್ಯರ್ ಅವರೇ ಪಬ್ಲಿಕ್ ಟಿವಿ ಡಿಜಿಟಲ್ ಗೆ ಖಚಿತಪಡಿಸಿದ್ದಾರೆ. ಈ ಕುರಿತಂತೆ ದೂರು ಕೂಡ ದಾಖಲಾಗಿದೆ.
Advertisement
ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಕರೆ ಮಾಡಿದ್ದ ಸೈಬರ್ ಕಳ್ಳರು ಒಟ್ಟು 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ರೂಪಾ ಹೇಳಿದರು. ಗುರುವಾರ ಮಧ್ಯಾಹ್ನ ಕಾಲ್ ಮಾಡಿದ್ದ ವ್ಯಕ್ತಿಯೊಬ್ಬ ತಾನು ಟ್ರಾಯ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಮೊಬೈಲ್ ಬ್ಲ್ಯಾಕ್ ಮಾಡಬೇಕು ಎಂದು ಹೆದರಿಸಿದ್ದಾನೆ.
Advertisement
Advertisement
ರೂಪಾ ಅವರ ಆಧಾರ ಕಾರ್ಡ್ ಬಳಸಿಕೊಂಡು ಸಿಮ್ ಖರೀದಿಸಲಾಗಿದೆ. ಅದರಿಂದ ದೇಶದ್ರೋಹದ ಚಟುವಟಿಕೆ ಮಾಡಲಾಗಿದೆ. ಈಗಾಗಲೇ ಈ ಕುರಿತಂತೆ ಮುಂಬೈ ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಗಾಬರಿ ಪಡಿಸಿದ್ದಾರೆ. ಇದರಿಂದ ಆತಂಕಗೊಂಡ ರೂಪಾ, ಅವರು ಹೇಳಿದ್ದಂತೆಲ್ಲ ಕೇಳಿದ್ದಾರೆ. ಸೆಲೆಬ್ರಿಟಿ ಆಗಿರೋದ್ರಿಂದ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
Advertisement
ಈ ಕುರಿತಂತೆ ಮಾತನಾಡಿದ ರೂಪಾ, ಅವರು ಹಣ ಕೇಳೋಕೆ ಶುರು ಮಾಡಿದಾಗ ನನಗೆ ಅನುಮಾನ ಬಂತು. ಬ್ಯಾಂಕ್ ಖಾತೆ ವಿವರ ಕೇಳಿದ್ದಕ್ಕೆ ನಾನು ತಕ್ಷಣವೇ ಎಚ್ಚೆತ್ತುಕೊಂಡೆ. ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನನಗೆ ಗೊತ್ತು ಅಂತೆಲ್ಲ ಹೇಳಿದೆ. ಆಗ ಅವರು ಸುಮ್ಮನಾದರು. ಬಿಜೆಪಿ ವಿರುದ್ಧ ನಿಂದಿಸಿದರು ಎಂದರು.
ಸೈಬರ್ ಕಳ್ಳರು ರೂಪಾ ಅವರನ್ನು ನಂಬಿಸುವುದಕ್ಕಾಗಿ ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕಳುಹಿಸಿದ್ದಾರೆ. ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದಿರುವಂತೆ ವಿಕ್ರಂ ಗೋಸ್ವಾಮಿ ಎನ್ನುವವರ ಹೆಸರಿನಲ್ಲಿ ನಕಲಿ ಸಹಿ ಕೂಡ ಮಾಡಿದ್ದಾರೆ. ಕೂಡಲೇ ಅರೆಸ್ಟ್ ಮಾಡಬೇಕು ಎಂದು ಭಯ ಪಡಿಸಿದ್ದಾರೆ.
ಸದ್ಯ ರೂಪಾ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಹೇಳಿದಂತೆ ನಾನು ಕೇಳಿದ್ದರೆ 30 ಲಕ್ಷ ರೂಪಾಯಿ ಕಳೆದುಕೊಳ್ಳಬೇಕಿತ್ತು ಅಂತಾರೆ.