ಚೆನ್ನೈ: `ಹಸಿರು ಕ್ರಾಂತಿಯ’ ಪಿತಾಮಹ ಮತ್ತು ವಿಶ್ವಸಂಸ್ಥೆಯಿಂದ ಪರಿಸರ `ಆರ್ಥಿಕ ಸಿದ್ಧಾಂತದ ಪಿತಾಮಹ’ ಎಂದು ಶ್ಲಾಘಿಸಲ್ಪಟ್ಟ ಖ್ಯಾತ ಕೃಷಿ ವಿಜ್ಞಾನಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ.ಎಂ.ಎಸ್ ಸ್ವಾಮಿನಾಥನ್ (98) (MS Swaminathan) ಅವರು ಚೆನ್ನೈನಲ್ಲಿ (Chennai) ನಿಧನರಾಗಿದ್ದಾರೆ.
ಪ್ರೊ.ಸ್ವಾಮಿನಾಥನ್ ಅವರು ಪ್ರಸಿದ್ಧ ಕೃಷಿಶಾಸ್ತ್ರಜ್ಞ ಮತ್ತು ಸಸ್ಯ ತಳಿಶಾಸ್ತ್ರಜ್ಞರಾಗಿದ್ದರು. ಅವರ ಕೊಡುಗೆಗಳಿಂದ ದೇಶದ ಕೃಷಿ ಪುನರುಜ್ಜೀವನ ಜಾಗತಿಕವಾಗಿ ಗುರುತಿಸಲ್ಪಟ್ಟಿತು. ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿಯ ತಳಿಗಳನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ತಳಿಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅಮೆರಿಕಾದ ವಿಜ್ಞಾನಿ ನಾರ್ಮನ್ ಬೋರ್ಲಾಗ್ ಅವರೊಂದಿಗೆ ಶ್ರಮಿಸಿದ್ದಾರೆ. ಅವರ ಈ ಕೆಲಸವು 1960ರ ದಶಕದಲ್ಲಿ ಭಾರತವನ್ನು ಕ್ಷಾಮದಿಂದ ರಕ್ಷಿಸಿತ್ತು. ಇದನ್ನೂ ಓದಿ: ಡ್ರಗ್ಸ್ ಕೇಸ್- ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖಯರಾ ಬಂಧನ
Advertisement
Advertisement
ಸುಸ್ಥಿರ ಕೃಷಿಯ ಪ್ರತಿಪಾದನೆಯು ಆಹಾರ ಭದ್ರತೆಯ ಕ್ಷೇತ್ರದಲ್ಲಿ ಅವರನ್ನು ವಿಶ್ವ ನಾಯಕನನ್ನಾಗಿ ಮಾಡಿತು. ಅಲ್ಲದೇ ರೈತ ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರವನ್ನು ಅವರು ವಹಿಸಿದ್ದರು.
Advertisement
ಸ್ವಾಮಿನಾಥನ್ ಅವರು 1971 ರಲ್ಲಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986 ರಲ್ಲಿ ವಿಜ್ಞಾನಕ್ಕಾಗಿ ಆಲ್ಬರ್ಟ್ ಐನ್‍ಸ್ಟೈನ್ ವಲ್ರ್ಡ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 1987 ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಲಾಯಿತು. ಇದನ್ನು ವ್ಯಾಪಕವಾಗಿ ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗುತ್ತದೆ.
Advertisement
1967 ರಲ್ಲಿ ಪದ್ಮಶ್ರೀ, 1972 ರಲ್ಲಿ ಪದ್ಮಭೂಷಣ ಮತ್ತು 1989 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿ, ಯುನೆಸ್ಕೋದ ಮಹಾತ್ಮ ಗಾಂಧಿ ಪ್ರಶಸ್ತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ.
2013 ರಲ್ಲಿ ಸ್ವಾಮಿನಾಥನ್ ಅವರನ್ನು ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 25 ಜಾಗತಿಕ ಭಾರತೀಯ ದಂತಕಥೆಗಳಲ್ಲಿ ಒಬ್ಬರು ಎಂದು ಗೌರವಿಸಿದ್ದರು. ಅವರು 20ನೇ ಶತಮಾನದ ಇಪ್ಪತ್ತು ಅತ್ಯಂತ ಪ್ರಭಾವಶಾಲಿ ಏಷ್ಯನ್ನರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ಈ ಸ್ಥಾನದ ಭಾರತದ ಮೂವರಲ್ಲಿ ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ನಂತರದ ಸ್ಥಾನ ಇವರು ಹೊಂದಿದ್ದಾರೆ.
ಅವರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿದ್ದ ಸೌಮ್ಯಾ ಸ್ವಾಮಿನಾಥನ್, ಮಧುರಾ ಸ್ವಾಮಿನಾಥನ್ (ಅರ್ಥಶಾಸ್ತ್ರಜ್ಞರು), ಮತ್ತು ನಿತ್ಯಾ ಸ್ವಾಮಿನಾಥನ್ (ಲಿಂಗ ಮತ್ತು ಗ್ರಾಮೀಣಾಭಿವೃದ್ಧಿ ವೃತ್ತಿಪರರು) ಎಂಬ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಶಿಕ್ಷಣತಜ್ಞರಾಗಿದ್ದ ಅವರ ಪತ್ನಿ ಮೀನಾ ಸ್ವಾಮಿನಾಥನ್ ಕಳೆದ ವರ್ಷ ಮಾರ್ಚ್‍ನಲ್ಲಿ ನಿಧನರಾಗಿದ್ದರು. ಇದನ್ನೂ ಓದಿ: ಉಜ್ಜಯಿನಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ – ಐವರು ಅರೆಸ್ಟ್
Web Stories