ಯಾದಗಿರಿ: ಕೋಮು ಭಾವನೆಗೆ ಧಕ್ಕೆ ತರುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಕಿರಾತಕ ಯುವಕರಿಬ್ಬರ ಮೇಲೆ ಸೆಕ್ಷನ್ 153, 505/2 ಅಡಿಯಲ್ಲಿ ಕೇಸ್ ದಾಖಲಿಸಿ ಯಾದಗಿರಿ ಪೊಲೀಸರು (Yadgir Police) ಬಂಧಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದು ಯುವಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಯಾದಗಿರಿ ನಗರದ ಅಕ್ಬರ್ ಸೈಯದ್ ಬಹದ್ದೂರ್ (23) ಹಾಗೂ ಎಂಡಿ ಅಯಾಜ್‌ನನ್ನು (21) ಪೊಲೀಸರು ಬಂಧಿಸಿದ್ದಾರೆ.
Advertisement
He is Syed Ali Akbar Jagirdar (syeds_jagirdar_v18), a popular influencer from congress ruled Karnataka, urging his community members to kill Kafirs (non-muslims)
“Behead those who abuse prophet”; “as per Quran only place for Kafirs is hell”; “kill hindu men in interfaith… pic.twitter.com/RF0KvbK7gx
— Ashwini Shrivastava (@AshwiniSahaya) August 8, 2023
Advertisement
ನೀರಜ್ ಅತ್ರಿ ಎಂಬವರು ಈ ಯುವಕರು ಮಾಡಿದ ರೀಲ್ಸ್ ಅನ್ನು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಹಲವು ಮಂದಿ ಕರ್ನಾಟಕ ಡಿಜಿಪಿ ಖಾತೆಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದಾದ ಬಳಿಕ ಇಬ್ಬರು ಯುವಕರ ವಿರುದ್ಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: 4ರ ಬಾಲಕಿ ಮೇಲೆ ಅತ್ಯಾಚಾರ: ಇದು ಮಾನವೀಯತೆ ಮೀರಿದ ಕ್ರೌರ್ಯ, ಕಾಮುಕರಿಗೆ ಕ್ಷಮೆಯಿಲ್ಲವೆಂದ ಸಚಿನ್ ಪೈಲಟ್
Advertisement
ನಾವು ಅಹ್ಲೇ ಸುನ್ನತ್ ಜಮಾತ್‌ನವರಾಗಿದ್ದೇವೆ. ನಮಗೆ ಬಾಲ್ಯದಿಂದ ಇದನ್ನೇ ಕಲಿಸಿಕೊಡಲಾಗಿದೆ ಎಂದಿರುವ ಯುವಕರು, ಜೀವನದಲ್ಲಿ ಎಲ್ಲಾ ಕಷ್ಟವನ್ನು ಎದುರಿಸಿ. ಆದರೆ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದರೆ ಅಂತಹವರ ದೇಹದಿಂದ ರುಂಡವನ್ನು ಬೇರ್ಪಡಿಸಿ ಎಂದು ರೀಲ್ಸ್‌ನಲ್ಲಿ ಹೇಳಿದ್ದಾರೆ.
Advertisement
ಮುಸಲ್ಮಾನರ ಮೇಲೆ ದೌರ್ಜನ್ಯ ಎಸಗುವವರೇ, ಯುವತಿರನ್ನು ಬುಟ್ಟಿಗೆ ಹಾಕಿಕೊಂಡು ಗಂಡಸು ಎಂದುಕೊಳ್ಳುವವರೇ, ಮುಸ್ಲಿಮರನ್ನೇ ಟಾರ್ಗೆಟ್ ಮಾಡುವವರೇ ನೀವು ಗಂಡಸರೇ ಆಗಿದರೆ 15 ನಿಮಿಷ ಮೈದಾನಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಎಷ್ಟು ಹಾರಾಡ್ತೀರಾ ಹಾರಾಡಿ, ಈ ಜಗತ್ತಿನಲ್ಲಿ ಕುರಾನ್ ಬಹಳ ಸ್ಪಷ್ಟವಾಗಿ ಹೇಳುತ್ತಿದೆ, ಕಾಫಿರ್ (ಹಿಂದು) ಕೊನೆಗೆ ನಿಮ್ಮ ಸ್ಥಾನ ನರಕ ಎಂದು ಯುವಕರು ರೀಲ್ಸ್ನಲ್ಲಿ ಹೇಳಿರುವುದು ಕಂಡುಬಂದಿದೆ. ಇದನ್ನೂ ಓದಿ: 200ಕ್ಕೂ ಹೆಚ್ಚು ಮಂದಿ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ – ಪಾಕ್‌ನಲ್ಲಿ ಭುಗಿಲೆದ್ದ ಆಕ್ರೋಶ
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಾದಗಿರಿ ಎಸ್‌ಪಿ ಡಾ.ಸಿಬಿ ವೇದಮೂರ್ತಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವೀಡಿಯೊ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಯುವಕರಿಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೂ ಕೋಮು ಭಾವನೆಗೆ ಧಕ್ಕೆ ತರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
Web Stories