ಬೆಳಗಾವಿ: ಮೋದಿಯವರನ್ನು (Narendra Modi) ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.
ಪ್ರಧಾನಿಯನ್ನ ಕೆಳಗಿಳಿಸಿ ಬೇರೆಯವರನ್ನು ಪ್ರಧಾನಿ ಮಾಡಿದರೆ ಒಳ್ಳೆಯ ಕೆಲಸ ಮಾಡುತ್ತಾರೆ. ನನಗೆ ಇರುವ ಮಾಹಿತಿ ಪ್ರಕಾರ ಪ್ರಧಾನಿ ಬದಲಾಗುತ್ತಾರೆ. ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ (Nitin Gadkari) ಪೈಕಿ ಒಬ್ಬರು ಪ್ರಧಾನಿಯಾಗುತ್ತಾರೆ ಎಂದರು. ಇದನ್ನೂ ಓದಿ: Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ
Advertisement
Advertisement
ನಾನು ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಮೋದಿಯನ್ನು ಕೆಳಗಿಸಿ ಬೇರೆಯವರನ್ನು ಪ್ರಧಾನಮಂತ್ರಿ ಮಾಡಬೇಕು. ನಿತಿನ್ ಗಡ್ಕರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರಧಾನಿಯನ್ನಾಗಿ ಮಾಡಿ ನಾನೇ ಬುದ್ಧಿವಂತ, ವಿಶ್ವ ಗುರು ಅಂತಾ ಬಿಜೆಪಿಯವರು ಹೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು.
Advertisement
ಡಿಕೆ ಶಿವಕುಮಾರ್ ಅವರಿಗೆ ಎರಡು ಹುದ್ದೆಗಳನ್ನು ಕೊಟ್ಟಿದ್ದಕ್ಕೆ ಕೆಎನ್ ರಾಜಣ್ಣ ಅಸಮಾಧಾನ ವಿಚಾರಕ್ಕೆ ಸಂಬಂಧಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಇಂತಹ ಬಿನ್ನಾಭಿಪ್ರಾಯ ಬಂದಾಗ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.
Advertisement