ಮೈಸೂರು: ಮುರುಘಾ ಮಠ (Murugha Mutt) ದ ಶರಣರು ಬಳಸುತ್ತಿದ್ದ ಶೌಚಾಗೃಹ ಮತ್ತು ಸ್ನಾನಗೃಹದ ಫಿಟ್ ಗಳನ್ನು ತೆಗೆದು ಪರಿಶೀಲನೆ ನಡೆಸಿದರೆ ಮಾದಕ ದ್ರವ್ಯ ಬಳಸಿರುವುದರು ಕುರುಹು ಸಿಗಬಹುದು ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ (Stanley) ಹೇಳಿದ್ದಾರೆ.
ಮುರುಘಾ ಶರಣರ ವಿರುದ್ದ ಚಾರ್ಜ್ ಶೀಟ್ (ChargeSheet) ಸಲ್ಲಿಕೆ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 15 ವರ್ಷದ ಹಿಂದೆ ಸ್ವಾಮೀಜಿಗಳೇ ಮುಂದೆ ನಿಂತು ಫಿಟ್ ಕ್ಲೀನ್ ಮಾಡಿಸಿದ್ದರು. ಸ್ವಾಮೀಜಿಯೆ ಮುಂದೆ ನಿಂತು ಫಿಟ್ ಕ್ಲೀನ್ ಮಾಡಿಸಿದ್ದೇಕೆ?. ಫಿಟ್ ನಲ್ಲಿ ಸಿಕ್ಕ ವಸ್ತಗಳು ಪದಾರ್ಥಗಳನ್ನು ಯಾರಿಗೂ ಕಾಣದಂತೆ ಬಹು ದೂರಕ್ಕೆ ಎಸೆಯುವಂತೆ ಸೂಚಿಸಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಕೆಲ ಮಕ್ಕಳ ಕಳೆ ಬರಹ ಸಿಗಬಹುದು. ಸ್ವಾಮೀಜಿ ಮಾದಕ ದ್ರವ್ಯ ಬಳಸುತ್ತಿದ್ದ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಯಬೇಕು. ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸಲು ಸ್ವಾಮೀಜಿ ಮಾದಕ ದ್ರವ್ಯ ಬಳಸುತ್ತಾರೆ. ಮಾದಕ ದ್ರವ್ಯ ಬಳಸದೆ ಇಷ್ಟು ನಿರಂತರ ಲೈಂಗಿಕ ಕ್ರಿಯೆ ಕಷ್ಟ. ಮಾದಕ ದ್ರವ್ಯದ ಕೇಸ್ ಕೂಡ ದಾಖಲಾಗಬೇಕು ಎಂದು ಅವರು ಆಗ್ರಹಿಸಿದರು.
ಮಠದಲ್ಲಿ ಸಿಕ್ಕ ಕೆಲ ಅನಾಥ ಮಕ್ಕಳ ಡಿಎನ್ ಎ (DNA Test) ಟೆಸ್ಟ್ ನಡೆಯಬೇಕು. ಹಲವು ಮಕ್ಕಳ ಅತ್ಯಾಚಾರ ಕೊಲೆಯಾಗಿವೆ. ಇನ್ನಷ್ಟು ಮಕ್ಕಳ ಪ್ರಕರಣಗಳು ಶ್ರೀಗಳ ವಿರುದ್ಧ ದಾಖಲಾಗುತ್ತವೆ ಎಂದು ಸ್ಟ್ಯಾನ್ಲಿ ತಿಳಿಸಿದರು.