ಮುಂದೊಂದು ದಿನ ಮೋದಿ ನಿವಾಸಕ್ಕೆ ಜನ ನುಗ್ಗುತ್ತಾರೆ: ನಾಲಗೆ ಹರಿಬಿಟ್ಟ ಕೈ ಹಿರಿಯ ನಾಯಕ

Public TV
2 Min Read
Sajjan Verma 1

ಭೋಪಾಲ್‌: ಬಾಂಗ್ಲಾದೇಶದಲ್ಲಿ (Bangladesh) ನಡೆದಂತೆ ಭಾರತದಲ್ಲೂ (India) ಮುಂದೊಂದು ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸಕ್ಕೆ ಜನರು ನುಗ್ಗುತ್ತಾರೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕ ಸಜ್ಜನ್ ಸಿಂಗ್ ವರ್ಮಾ (Madhya Pradesh Congress leader Sajjan Verma) ನಾಲಿಗೆ ಹರಿಬಿಟ್ಟಿದ್ದಾರೆ.

ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಆರೋಪದ ಹಗರಣಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.


ನರೇಂದ್ರ ಮೋದಿಯವರನ್ನು ನೆನಪಿಸಿಕೊಳ್ಳಿ, ನಿಮ್ಮ ತಪ್ಪು ನೀತಿಗಳಿಂದ ಮುಂದೊಂದು ದಿನ ಜನರು ನಿಮ್ಮ ನಿವಾಸವನ್ನು ಪ್ರವೇಶಿಸುತ್ತಾರೆ ಮತ್ತು ಅದನ್ನು ಆಕ್ರಮಿಸಿಕೊಳ್ಳುತ್ತಾರೆ. ಮೊದಲು ಶ್ರೀಲಂಕಾದಲ್ಲಿ (Srilanka) ನಡೆಯಿತು. ನಂತರ ಬಾಂಗ್ಲಾದೇಶದಲ್ಲಿ ನಡೆದಿದೆ. ಈಗ ಭಾರತದ ಸರದಿ ಎಂದು ಭವಿಷ್ಯ ನುಡಿದಿದ್ದಾರೆ.

ಸಜ್ಜನ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಯುವ ಮೋರ್ಚಾ ಆಕ್ಷೇಪ ವ್ಯಕ್ತಪಡಿಸಿದ್ದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದೆ. 140 ಕೋಟಿ ಭಾರತೀಯರ ಭಾವನೆಗೆ ದಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆವೈಎಂ ಇಂದೋರ್ ನಗರ ಅಧ್ಯಕ್ಷ ಸೌಗತ್ ಮಿಶ್ರಾ ದೂರು ನೀಡಿದ್ದಾರೆ.  ಇದನ್ನೂ ಓದಿ: ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

salman khurshid

ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ (Salam Khurshid) ಹೇಳಿಕೆಯ ನಂತರ ಈ ಹೇಳಿಕೆ ಬಂದಿದೆ. ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು, ಮೇಲ್ನೋಟಕ್ಕೆ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಕಾಣಿಸಬಹುದು. ಇಲ್ಲಿ ಎಲ್ಲವೂ ಸರಿಯಿದೆ ಎಂದು ಎಲ್ಲರೂ ಭಾವಿಸಬಹುದು. ಆದರೆ ವಾಸ್ತವ ಬೇರೆಯದ್ದೇ ಇದೆ.. ಬಾಂಗ್ಲಾದೇಶದಲ್ಲಿ ಸಂಭವಿಸಿದ್ದು, ನಮ್ಮ ದೇಶದಲ್ಲಿಯೂ ನಡೆಯಬಹುದು ಎಂದಿದ್ದಾರೆ.

 

Share This Article