ಒಟ್ಟಾವಾ: ಕೆನಡಾದ (Canada) ಸರ್ಕಾರ ಭಾರತದಲ್ಲಿರುವ (India) ತನ್ನ ನಾಗರಿಕರಿಗೆ ಜಾಗರೂಕರಾಗಿರುವಂತೆ ಸಲಹೆಯನ್ನು ನೀಡಿದೆ.
ಕೆನಡಾ ಹಾಗೂ ಭಾರತದ ನಡುವೆ ಇತ್ತೀಚೆಗೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟು ಹಿನ್ನೆಲೆ ಕೆನಡಾ ಸರ್ಕಾರ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆನಡಾದ ಬಗ್ಗೆ ಪ್ರತಿಭಟನೆಗಳು ಹಾಗೂ ಕೆಲವು ನಕಾರಾತ್ಮಕ ಭಾವನೆಗಳಿಗೆ ಕರೆ ನೀಡಲಾಗಿದೆ ಎಂದು ತಿಳಿಸಿದೆ.
Advertisement
Advertisement
ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬಳಿಕ ಭಾರತ ಹಾಗೂ ಕೆನಡಾದ ನಡುವೆ ಉದ್ವಿಗ್ನದ ಸ್ಥಿತಿ ನಿರ್ಮಾಣವಾಗಿದೆ. ಕೆನಡಾದ ಈ ಆರೋಪವನ್ನು ಭಾರತ ತಿರಸ್ಕರಿಸಿದೆ.
Advertisement
Advertisement
ಕೆನಡಾ ಸರ್ಕಾರ ತನ್ನ ಪ್ರಯಾಣಿಕರಿಗೆ ನೀಡಿದ ಸಲಹೆಯಲ್ಲಿ, ಕೆನಡಾ ಮತ್ತು ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಿಗೆ ಕರೆಗಳು ಹಾಗೂ ಕೆನಡಾದ ಬಗ್ಗೆ ಕೆಲವು ನಕಾರಾತ್ಮಕ ಭಾವನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ದಯವಿಟ್ಟು ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ ಎಂದು ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್
ಕಳೆದ ವಾರ ಭಾರತ ಕೆನಡಾದಲ್ಲಿ ವಾಸವಿರುವ ತನ್ನ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಇದೇ ರೀತಿಯ ಸಲಹೆಯನ್ನು ನೀಡಿತು. ಕಳೆದ ಬುಧವಾರ ಭಾರತೀಯ ಪ್ರಜೆಗಳು, ಕೆನಡಾದಲ್ಲಿರುವ ವಿದ್ಯಾರ್ಥಿಗಳು ಮತ್ತು ದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ಕಂಡಿರುವ ಪ್ರದೇಶಗಳು ಮತ್ತು ಸಂಭಾವ್ಯ ಸ್ಥಳಗಳಿಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ
Web Stories