ಮೈಸೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ತಮ್ಮನೆ ಒಡಹುಟ್ಟಿದ ಅಣ್ಣ ಮತ್ತು ಅಣ್ಣನ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿ ನಡೆದಿದೆ.
ಮನೋಹರ್ ಎಂಬಾತ 20 ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಿದ್ದಾರೆ ಎಂದು ಯದುನಂದನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯದುನಂದನ್, ನನ್ನ ತಮ್ಮ ಮನೋಹರ್ ಮತಾಂತರಗೊಂಡು 20 ವರ್ಷವಾಗಿತ್ತು. ಈ ಹಿಂದೆ ಮನೋಹರ್ ಬೇರೆ ಊರಿನಲ್ಲಿ ನೆಲೆಸಿದ್ದ ಆ ಬಳಿಕ 7 ವರ್ಷಗಳ ಹಿಂದೆ ಬಳಿಕ ಈ ಊರಿಗೆ ಬಂದಿದ್ದಾನೆ. ಇಲ್ಲಿಗೆ ಬಂದು ಮತಾಂತರಕ್ಕೆ ಯತ್ನಿಸುತ್ತಿದ್ದಾನೆ. ಆತ ನಮ್ಮ ಹಿಂದೂ ದೇವರ ಫೋಟೋಗಳು ಅಪ್ರಯೋಜಕ. ಏಸು ದೇವರು ಒಬ್ಬರೇ ನಿಜವಾದ ದೇವರು ಎಂದು ನಮಗೆ ಮತಾಂತರವಾಗಲು ನಿರಂತರ ಕಿರುಕುಳ ನೀಡಿದ್ದಾನೆ. ನಾವು ಪ್ರತಿಬಾರಿ ಮತಾಂತರವಾಗಲು ಒಪ್ಪಿಕೊಂಡಿಲ್ಲ. ಹಾಗಾಗಿ ನಮಗೆ ಕಿರುಕುಳ ಕೊಡುತ್ತಿದ್ದಾನೆ. ಕೆಲದಿನಗಳ ಹಿಂದೆ ಮನೋಹರ್ ಏಕಾಏಕಿ ಮನೆಗೆ ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ
ಮನೋಹರ್ ಎಚ್.ಡಿ. ಕೋಟೆಯಲ್ಲಿ ಹಲವು ಜನರನ್ನು ಮತಾಂತರ ಮಾಡಿದ್ದಾನೆ. ಹಾಗಾಗಿ ಈತನ ಬಗ್ಗೆ ನಾವು ದೂರನ್ನು ನೀಡಿದ್ದೇವೆ ಆದರು ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ ಬಲವಂತದ ಮತಾಂತರಕ್ಕೆ ಯತ್ನಿಸಿ ಹಲ್ಲೆ ಮಾಡಿದ ಸಹೋದರ ಮನೋಹರ್ ವಿರುದ್ಧ ಯದುನಂದನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಏಳು ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.