-ಸಮಾಜಘಾತುಕ, ದೇಶದ್ರೋಹಿಗಳ ವಿರುದ್ಧ ಕ್ರಮ
ಮಂಡ್ಯ: ರಾಜ್ಯದಲ್ಲಿ ಮತಾಂತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ, ಈ ಮತಾಂತರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಮತಾಂತರ ಎಂಬುದು ಹೀನ ಕೃತ್ಯ, ಒಬ್ಬ ವ್ಯಕ್ತಿ ಯಾವ ಧರ್ಮದಲ್ಲಿ ಹುಟ್ಟಿರುತ್ತಾನೋ ಆ ಧರ್ಮದಲ್ಲಿ ಪೂಜೆ ಮಾಡುವುದು ಅವನ ಹಕ್ಕು. ಆದರೆ ವಿದೇಶದಿಂದ ಹಣತಂದು ಏಜೆಂಟ್‍ಗಳ ಮೂಲಕ ಹಣಕೊಟ್ಟು ಮತಾಂರಗೊಳ್ಳುವ ಆಮಿಷ ಹೊಡ್ಡುತ್ತಿದ್ದಾರೆ. ಹಸು, ಎಮ್ಮೆ ಕೊಡುತ್ತೇವೆ, ಆಸ್ಪತ್ರೆ ಖರ್ಚು ನೋಡಿಕೊಳ್ಳುತ್ತೇವೆ ಎಂದು ಲಕ್ಷಾಂತರ ಜನರನ್ನು ಮತಾಂತರ ಮಾಡಲು ಮುಂದಾಗುತ್ತಿದ್ದಾರೆ. ಇದು ದೊಡ್ಡ ಪಿಡುಗು, ನಮ್ಮ ರಾಜ್ಯದ ಎಲ್ಲಾ ಭಾಗದಲ್ಲಿ ಇದೆ, ಮಂಡ್ಯ ಜಿಲ್ಲೆಯಲ್ಲಿಯು ಈ ಪಿಡುಗು ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಸದ್ದಿಲ್ಲದೆ ನಡೀತಿದ್ಯಾ ಮತಾಂತರ?- ಬೆಂಗ್ಳೂರು ಸೇರಿ 5 ಕಡೆ ಮತಾಂತರ ಯತ್ನ
ಮತಾಂತರ ಮಾಡುವ ಸಮಾಜಘಾತುಕ, ದೇಶದ್ರೋಹಿ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಮತಾಂತರ ಮಾಡುವವರಿಗೆ ಒಂದು ಮತಾಂತರಕ್ಕೆ ಇಂತಿಷ್ಟು ಹಣ ಸಿಗುತ್ತಿದೆ. ಆ ಹಣದ ಆಸೆಗೆ ಮತಾಂತರ ಮಾಡುತ್ತಿರುವುದು ನಮಗೆ ಗೊತ್ತಾಗಿದೆ. ಬಿಜೆಪಿ ಸರ್ಕಾರ ಮತಾಂತರಕ್ಕೆ ಬ್ರೇಕ್ ಹಾಕುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೆ. ಈ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಬಂದ್ರೆ ಮಾಡಲ್ಲ, ನಮ್ಮ ಸರ್ಕಾರ ಮಾಡುತ್ತದೆ ಎಂದು ಸಚಿವರು ಭರವಸೆ ಕೊಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಪೇಜಾವರ ಶ್ರೀ ಒತ್ತಾಯ