ಬೆಂಗಳೂರು: ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಶುರುಮಾಡಿದೆ. ರಾಜ್ಯ ಸರ್ಕಾರ ಬೆಂಗಳೂರಿನ ಯಲಹಂಕದ ಮೇಡಿ ಅಗ್ರಹಾರದ ಸರ್ವೇ ನಂಬರ್ 24ರಲ್ಲಿ ಎರಡು ಎಕರೆ ಗೋಮಾಳ ಜಮೀನನ್ನು ಕ್ರಿಶ್ಚಿಯನ್ನರ ಸ್ಮಶಾನಕ್ಕೆ ಅಂತ ಮಂಜೂರು ಮಾಡಿದೆ.
Advertisement
2013 ರಿಂದಲೂ ದಲಿತರಿಗೆ ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಹೀಗಾಗಿ ಜಾಗ ಕೊಡಿ ಅಂತ ದಲಿತ ಯುವಕರ ಸೇವಾದಳ ಮನವಿ ಸಲ್ಲಿಸಿದಾಗ, ನಮ್ಮ ಬಳಿ ಜಾಗವಿಲ್ಲ ಅಂತ ಉತ್ತರ ನೀಡಿದ್ದ ತಹಶೀಲ್ದಾರ್ ಈಗ ಸಂಸದ ವೀರಪ್ಪ ಮೊಯ್ಲಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್, ಮುಖ್ಯ ಸಚೇತಕ ಐವಾನ್ ಡಿಸೋಜಾ ಪತ್ರ ಬರೆದ ಮೇಲೆ ಕ್ರಿಶ್ಚಿಯನ್ನರಿಗೆ ಜಮೀನು ಮಂಜೂರು ಮಾಡಿದ್ದಾರೆ.
Advertisement
Advertisement
ಕ್ರಿಶ್ಚಿಯನ್ನರ ಸ್ಮಶಾನಕ್ಕೆ ಜಾಗ ಕೊಡಿ ಅಂತ 2017ರ ನವೆಂಬರ್ 11ರಂದು ಸಂಸದ ವೀರಪ್ಪ ಮೊಯ್ಲಿ, ಡಿಸೆಂಬರ್ 12ರಂದು ಮುಖ್ಯ ಸಚೇತಕ ಐವಾನ್ ಡಿಸೋಜ, 2018ರ ಫೆಬ್ರವರಿ 09ರಂದು ಸಚಿವ ಕೆಜೆ ಜಾರ್ಜ್ ಪತ್ರ ಬರೆದು ಒತ್ತಡ ಹೇರಿದ್ದರು. ಇವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಶಂಕರ್ ಸೂಚನೆ ಮೇರೆಗೆ ತಹಶೀಲ್ದಾರ್ ಮಂಜುನಾಥ್ ಎರಡು ಎಕರೆ ಗೋಮಾಳ ಜಮೀನನ್ನು ಕ್ರಿಶ್ಚಿಯನ್ನರ ಸ್ಮಶಾನಕ್ಕೆ ಮಂಜೂರು ಮಾಡಿದ್ದಾರೆ ಎಂದು ತಿಳಿದುಬಂದಿದೆ.