ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ ಹಿಂದೂಗಳಿಗೆ 5 ಲಕ್ಷ ಘೋಷಣೆ ಕೇಸ್‌ – ಯತ್ನಾಳ್‌ಗೆ ಕೋರ್ಟ್‌ ರಿಲೀಫ್‌

Public TV
1 Min Read
Yatnal

– ಶಾಸಕನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್‌ ಆದೇಶ

ವಿಜಯಪುರ: ಮುಸ್ಲಿಂ ಯುವತಿಯರನ್ನು ಮದುವೆಯಾದರೆ ಹಿಂದೂ ಯುವಕರಿಗೆ 5 ಲಕ್ಷ ರೂ. ನೀಡುವುದಾಗಿ ಘೋಷಿಸಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda Patil Yatnal) ರಿಲೀಫ್‌ ಸಿಕ್ಕಿದೆ.

ಯತ್ನಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕಲಬುರಗಿ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ರೂ. ಹೇಳಿಕೆ – ಶಾಸಕ ಯತ್ನಾಳ್‌ ವಿರುದ್ಧ FIR

ಕೊಪ್ಪಳ ನಗರದಲ್ಲಿ ಕಳೆದ ತಿಂಗಳು ಯತ್ನಾಳ್‌ ವಿವಾದಾತ್ಮಕ ಘೋಷಣೆಯೊಂದನ್ನು ಮಾಡಿದ್ದರು. ಅವರ ಹೇಳಿಕೆ ವಿರುದ್ಧ ಮೂರು ದೂರುಗಳು ದಾಖಲಾಗಿದ್ದವು. ವಿಜಯಪುರ, ಕಲಬುರ್ಗಿ ಹಾಗೂ ಕೊಪ್ಪಳದಲ್ಲಿ ದೂರುಗಳು ದಾಖಲಾಗಿದ್ದವು.

ವಿಜಯಪುರ, ಕಲಬುರಗಿಯಲ್ಲಿ ದಾಖಲಾಗಿದ್ದ ದೂರುಗಳನ್ನು ಪೊಲೀಸ್‌ ಇಲಾಖೆ ಕೊಪ್ಪಳಕ್ಕೆ ವರ್ಗಾಯಿಸಿತ್ತು. ಈ ದೂರುಗಳ ರದ್ದತಿ ಕೋರಿ ಕಲಬುರಗಿ ವಿಭಾಗೀಯ ಪೀಠಕ್ಕೆ ಯತ್ನಾಳ್‌ ಅರ್ಜಿ ಸಲ್ಲಿಸಿದ್ದರು. ಯತ್ನಾಳ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ನ್ಯಾಯಮೂರ್ತಿ ಎಂಐ ಅರುಣ್ ಅವರ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ: ಯತ್ನಾಳ್‌ ಘೋಷಣೆ

Share This Article