– ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀ. ಜಾಗ ಪ್ರವೇಶಿಸದಂತೆ ಷರತ್ತು
ಬೆಂಗಳೂರು: ಕೆ.ಆರ್.ನಗರ(K R Nagar) ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ(Bhavani Revanna) ಅವರಿಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದ್ದು, ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಿದೆ.
ಭವಾನಿ ರೇವಣ್ಣ ಅವರು ಮೈಸೂರು(Mysuru) ಮತ್ತು ಹಾಸನ(Hassan) ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಹೈಕೋರ್ಟ್(HighCourt) ಈ ಹಿಂದೆ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಷರತ್ತನ್ನು ಸಡಿಲಿಸಿದ್ದು, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀ. ಸುತ್ತಳತೆಯಲ್ಲಿ ಪ್ರವೇಶಿಸುವಂತಿಲ್ಲ ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಹೊಸ ಷರತ್ತು ವಿಧಿಸಿದೆ. ಇದನ್ನೂ ಓದಿ: ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ
ಏನಿದು ಪ್ರಕರಣ?
ತನ್ನ ತಾಯಿ ಕಣ್ಮರೆಯಾಗಿದ್ದಾರೆಂದು ಸಂತ್ರಸ್ತೆ ಪುತ್ರ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ಇದನ್ನೂ ಓದಿ: ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್ ಕ್ರಶ್ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್!
ದೂರಿನನ್ವಯ ತನಿಖೆ ನಡೆಸಿದ್ದ ಪೊಲೀಸರು, ಹೆಚ್.ಡಿ.ರೇವಣ್ಣ(H D Revanna) ಅವರಿಗೆ ಸಂಬಂಧಿಸಿದ್ದೆಂದು ಹೇಳಲಾದ ತೋಟದ ಮನೆಯೊಂದರಿಂದ ಆಕೆಯನ್ನು ರಕ್ಷಿಸಿದ್ದರು. ಅಪಹರಣಕ್ಕೆ ಭವಾನಿ ರೇವಣ್ಣ ಅವರ ಕಾರು ಬಳಕೆಯಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಭವಾನಿ ರೇವಣ್ಣ ಹಾಗೂ ಅವರ ಕಾರು ಚಾಲಕ ಅಜಿತ್ ವಿರುದ್ಧವೂ ದೂರು ದಾಖಲಾಗಿತ್ತು. ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ – ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ
ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಆದ್ರೆ ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು.