ಚೆನ್ನೈ: ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ಇಂದು ರದ್ದುಪಡಿಸಿದೆ.
Advertisement
ಇವರಿಬ್ಬರೂ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಸಂತೋಷ್ ಕುಮಾರ್ ಈ ತೀರ್ಪು ಪ್ರಕಟಿಸಿದ್ದು, ಪ್ರಕರಣವನ್ನು ರದ್ದುಪಡಿಸಿದ್ದಾರೆ. ಚಿತ್ರದಲ್ಲಿ ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ನಗರದ ಚೆನ್ನೈ ಮೂಲದ ವಕೀಲ ಕೆ. ಸಂತೋಷ್ ಮೆಟ್ರೋಪಾಲಿಯನ್ ಮ್ಯಾಜಿಸ್ಟ್ರೇಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ
Advertisement
Advertisement
ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ ಮೇ 6 ರಂದು ಆದೇಶ ಹೊರಡಿಸಿತ್ತು. ನಂತರ ವೆಲಾಚೇರಿ ಪೊಲೀಸರು ಮೇ 17 ರಂದು ಸೂರ್ಯ ಮತ್ತು ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ನಾನು ಯಾವಾಗಲೂ ಮೂಡ್‌ನಲ್ಲಿರುತ್ತೇನೆ ಎಂದ ಸೋನು ಶ್ರೀನಿವಾಸ್ ಗೌಡ
Advertisement
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ. ಚಂದ್ರು ಅವರು ವಕೀಲರಾಗಿದ್ದಾಗ ನಡೆಸಿದ ಕೇಸ್ ವೊಂದರ ಆಧಾರದ ಮೇಲೆ ಈ ಸಿನಿಮಾ ಮಾಡಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಕೆ ಚಂದ್ರು, ಮಾಜಿ ಐಪಿಪಿ ಪೆರುಮಾಳ ಸ್ವಾಮಿ ಹೆಸರು ಹೊರತುಪಡಿಸಿದರೆ ಉಳಿದ ಎಲ್ಲಾ ಪಾತ್ರಗಳ ಹೆಸರುಗಳನ್ನು ಬದಲಾಯಿಸಲಾಗಿದೆ.