ಕೊಲಂಬೊ: ನಾಕೌಟ್ ಪಂದ್ಯದಲ್ಲಿ ಪಾಕಿಸ್ತಾನ (Pakistan), ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಎಲ್ಲರೂ ಪಾಕ್ ತಂಡವನ್ನ ಟೀಕಿಸುತ್ತಿದ್ದರು. ಆದ್ರೆ ಭಾರತ ಬಾಂಗ್ಲಾದೇಶದ ವಿರುದ್ಧ ಸೋತಿದ್ದು ನನಗೆ ಮತ್ತು ಪಾಕಿಸ್ತಾನ ತಂಡಕ್ಕೆ ಸಮಾಧಾನ ತರಿಸಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಹೇಳಿದ್ದಾರೆ.
ಶುಕ್ರವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ (Team Bangladesh) 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತ್ತು. 266 ರನ್‌ಗಳ ಗುರಿ ಬೆನ್ನತ್ತಿದ ಭಾರತ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಗುವ ಮೂಲಕ 6 ರನ್‌ಗಳ ವಿರೋಚಿತ ಸೋಲನುಭವಿಸಿತು. ಟೂರ್ನಿಯಲ್ಲಿ ಈಗಾಗಲೇ ಭಾರತ ಫೈನಲ್ ತಲುಪಿಯಾಗಿದೆ. ಹೀಗಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಂತಿಮ ಸೂಪರ್-4 ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಎದುರು 6 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಈ ಕುರಿತು ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಅಖ್ತರ್, ನಾಕೌಟ್ ಪಂದ್ಯದಲ್ಲಿ ಶ್ರೀಲಂಕಾ ಪಾಕಿಸ್ತಾನ ತಂಡವನ್ನ ಸೋಲಿಸುವ ಮೂಲಕ ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಎಚ್ಚರಿಕೆಯ ಗಂಟೆ ನೀಡಿದೆ. ಕೆಲವು ಪಂದ್ಯಗಳನ್ನು ಗೆದ್ದ ಮಾತ್ರಕ್ಕೆ ಉಳಿದ ತಂಡಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನ ಬಾಂಗ್ಲಾದೇಶ ಸಾಬೀತು ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: World Cup 2023: ಇಂದಿನಿಂದ ಸೆಮಿಫೈನಲ್, ಫೈನಲ್ ಪಂದ್ಯ ಆನ್‌ಲೈನ್ ಟಿಕೆಟ್ ಮಾರಾಟ – ಬುಕ್ ಮಾಡೋದು ಹೇಗೆ?
ಇದೇ ವೇಳೆ ವಿಶ್ವಕಪ್ ಕುರಿತು ಮಾತನಾಡಿದ ಅವರು, ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಸೆಮಿಸ್ ತಲುಪುವ ಫೇವರೆಡ್ ಎಂದು ಹೇಳುತ್ತಿದ್ದೇವೆ. ಇದರೊಂದಿಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕೂಡ ಸೆಮಿಸ್ ತಲುಪಲಿವೆ. ಆದ್ರೆ ಭಾರತದಂತಹ ಬಲಿಷ್ಠ ತಂಡವನ್ನೇ ಬಾಂಗ್ಲಾದೇಶ ಸೋಲಿಸಿದೆ. ಶುಭಮನ್ ಗಿಲ್ ಅವರ ಶತಕ ಕೂಡ ಪ್ರಯೋಜನವಾಗಿಲ್ಲ. ಹೀಗೆ ನೋಡಿದ್ರೆ ವಿಶ್ವಕಪ್ ಯಾರ ಆಟ ಎಂದು ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್‌ಗಳ ಭರ್ಜರಿ ಜಯ
ಗಿಲ್ ವಿಶೇಷ ಸಾಧನೆ: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಗೆಲುವಿಗಾಗಿ ಅದ್ಭುತ ಹೋರಾಟ ನಡೆಸಿದ ಶುಭಮನ್ ಗಿಲ್, ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ವೃತ್ತಿಬದುಕಿನ 5ನೇ ಶತಕ ಬಾರಿಸಿದರು. ಆದರೆ, ತಂಡವನ್ನು ಜಯದ ದಡ ಮುಟ್ಟಿಸುವಲ್ಲಿ ವಿಫಲರಾದರು. ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ದಾಖಲೆ ಹೊಂದಿರುವ ಶುಭಮನ್ ಗಿಲ್, ಇದೀಗ ತಮ್ಮ 5ನೇ ಒಡಿಐ ಶತಕದ ಮೂಲಕ 2023ರ ಸಾಲಿನಲ್ಲಿ ಏಕದಿನ ಕ್ರಿಕೆಟ್ ಒಂದರಲ್ಲೇ 1000ಕ್ಕೂ ಹೆಚ್ಚು ರನ್ ಗಳಿಸಿದ ವಿಶೇಷ ಸಾಧನೆಯನ್ನೂ ಮಾಡಿದ್ದಾರೆ.
ಬಾಂಗ್ಲಾದೇಶ ತಂಡದ ಸ್ಪಿನ್ನರ್‌ಗಳ ಎದುರು ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ಕಷ್ಟ ಪಟ್ಟರೆ, ಲೀಲಾಜಾಲವಾಗಿ ಬ್ಯಾಟ್ ಬೀಸಿದ ಗಿಲ್, 8 ಬೌಂಡರಿ ಮತ್ತು 5 ಸಿಕ್ಸರ್‌ಗಳ ಬಲದಿಂದ 133 ಎಸೆತಗಳಲ್ಲಿ 121 ರನ್ ಸಿಡಿಸಿದರು. ತಂಡಕ್ಕೆ ಜಯ ತಂದುಕೊಡಲೇ ಬೇಕೆಂಬ ದಿಟ್ಟತನದಲ್ಲಿ ಬ್ಯಾಟ್ ಮಾಡಿದ್ದ ಗಿಲ್, ಮೆಹ್ದಿ ಹಸನ್ ಬೌಲಿಂಗ್‌ನಲ್ಲಿ ಲಾಂಗ್ ಆಫ್ ಕಡೆಗೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು.
Web Stories