ರಾಯಚೂರು: 2013ರ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ಭೀತಿ ಎದುರಿಸುತ್ತಿದ್ದ ನಟಿ ಪೂಜಾಗಾಂಧಿಗೆ ಕೋರ್ಟ್ ಜಾಮೀನು ನೀಡಿದೆ.
ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು.
Advertisement
ಈ ಹಿನ್ನೆಲೆಯಲ್ಲಿ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಇಂದು ವಿಚಾರಣೆ ವೇಳೆ ನ್ಯಾಯಾಧೀಶರು ಪೂಜಾಗಾಂಧಿಯನ್ನು ಸುಮಾರು 6 ಗಂಟೆ ಕಾಲ ಕೋರ್ಟ್ ಕಸ್ಟಡಿಗೆ ಒಳಪಡಿಸಿದ್ದರು. ನ್ಯಾಯಾಲಯವು ಪೂಜಾಗಾಂಧಿಗೆ ಒಂದು ಲಕ್ಷ ರೂ. ಶ್ಯೂರಿಟಿ ಹಾಗೂ ಮುಂದಿನ ವಿಚಾರಣೆಗೆ ತಪ್ಪದೆ ಹಾಜರಾಗುವಂತೆ ಎಚ್ಚರಿಕೆ ನೀಡಿ ಷರತ್ತುಬದ್ಧ ಜಾಮೀನು ನೀಡಿದೆ. ಮುಂದಿನ ವಿಚಾರಣೆಯನ್ನ ನವೆಂಬರ್ 3 ಕ್ಕೆ ಮುಂದೂಡಿದೆ.
Advertisement
ಕಸ್ಟಡಿಗೆ ಒಳಪಡಿಸಿದ ವೇಳೆ ಪೂಜಾಗಾಂಧಿ ಇಂದು ಮಧ್ಯಾಹ್ನ ಊಟ ಬಿಟ್ಟು ಚಾಕೋಲೇಟ್ ತಿಂದು ಹೊಟ್ಟೆ ತುಂಬಿಸಿಕೊಂಡರು.
Advertisement
ಇದನ್ನೂ ಓದಿ: ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ