ನವದೆಹಲಿ: ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ (Elon Musk) ಒಡೆತನದ ಸ್ಟಾರ್‌ಲಿಂಕ್‌ಗೆ (Starlink) ಅನುಮತಿ ನೀಡುವ ಮುನ್ನ ಸಂಭಾವ್ಯ ವ್ಯಾಪ್ತಿಯನ್ನು ಪರಿಶೀಲಿಸುವಂತೆ ಮುಕೇಶ್ ಅಂಬಾನಿ (Mukesh Ambani) ಒಡೆತನದ ರಿಲಯನ್ಸ್ ಜಿಯೋ (Reliance Jio) ಸರ್ಕಾರವನ್ನು ಕೇಳಿಕೊಂಡಿದೆ.
ಸ್ಟಾರ್‌ಲಿಂಕ್‌ಗೆ ಅನುಮತಿ ನೀಡಿದರೆ ದೇಶೀಯ ಕಂಪನಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕಾರಣ ನಿರ್ಧಾರವನ್ನು ಪರಿಶೀಲಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಜಿಯೋ ಪತ್ರ ಬರೆದಿದೆ.
Advertisement
ಮಸ್ಕ್ ಉಪಗ್ರಹ ಆಧಾರಿತ ಇಂಟರ್‌ನೆಟ್ ಕಂಪನಿ ಸ್ಟಾರ್‌ಲಿಂಕ್ ಸ್ಥಾಪಿಸಿದ್ದು ಈ ಕಂಪನಿ ಭಾರತದಲ್ಲಿ ಸೇವೆ ನೀಡಲು ಕೇಂದ್ರ ಸರ್ಕಾರವನ್ನು ಕೇಳಿದೆ. ಹಿಂದೆ ಕೇಂದ್ರ ಸರ್ಕಾರ ಸ್ಟಾರ್‌ಲಿಂಕ್ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಈಗ ಅನುಮತಿ ನೀಡಲು ಮುಂದಾಗಿದೆ. ಈ ಹಿಂದೆ ಪ್ರತಿಕ್ರಿಯಿ ನೀಡಿದ್ದ ಕೇಂದ್ರ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಸ್ಟಾರ್‌ಲಿಂಕ್ ಸರ್ಕಾರದ ಎಲ್ಲಾ ಷರತ್ತುಗಳನ್ನು ಅನುಸರಿಸಿದರೆ ನಾವು ಪರವಾನಗಿ ನೀಡುತ್ತೇವೆ ಎಂದು ಹೇಳಿದ್ದರು.
Advertisement
Advertisement
Advertisement
ಬಿಕ್ಕಟ್ಟು ಸೃಷ್ಟಿಯಾಗಿದ್ದು ಯಾಕೆ?
ವಿಶ್ವದಲ್ಲಿ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್ ಟೆಲಿಕಾಂ ಯೂನಿಯನ್(ITU) ನೋಡಿಕೊಳ್ಳುತ್ತದೆ. ಭಾರತದಲ್ಲಿ ಉಪಗ್ರಹಗಳ (Satellite) ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಂ ಹರಾಜು ಮೂಲಕವೇ ಹಂಚಿಕೆ ಮಾಡುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಜಿಯೋ ಹರಾಜು ಪ್ರಕ್ರಿಯೆ ಮೂಲಕವೇ ಪರವಾನಗಿ ಹಂಚಿಕೆಗೆ ಪಟ್ಟು ಹಿಡಿದಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ.
2ಜಿ ಹಗರಣ ಆರೋಪಗಳು ಕೇಳಿ ಬಂದ ನಂತ ಭಾರತದಲ್ಲಿ 2010ರ ನಂತರ ದೂರಸಂಪರ್ಕ ಕ್ಷೇತ್ರದಲ್ಲಿನ ಸೇವಾ ಅನುಮತಿಯನ್ನು ಹರಾಜು ಪ್ರಕ್ರಿಯೆ ಮೂಲಕವೇ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಂಚಿಕೆ ಮಾಡುತ್ತಿದೆ. ಜಿಯೋ ಈಗ ಹರಾಜು ಮೂಲಕವೇ ಹಂಚಿಕೆ ಹಂಚಿಕೆ ಮಾಡಬೇಕೆಂದು ಬೇಡಿಕೆ ಇರಿಸಿದ್ದರಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದನ್ನೂ ಓದಿ: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್
ಜಿಯೋದ ಆತಂಕ ಏನು?
ಈಗಾಗಲೇ ಜಿಯೋ ಸ್ಪೆಕ್ಟ್ರಂ ಖರೀದಿಗಾಗಿ ಭಾರೀ ಪ್ರಮಾಣದ ಬಂಡವಾಳವನ್ನು ಹೂಡಿದೆ. ಒಂದು ವೇಳೆ ಸ್ಯಾಟ್‌ಲೈಟ್ ಆಧಾರಿತ ಕಂಪನಿಗಳು ಭಾರತವನ್ನು ಪ್ರವೇಶಿಸಿದರೆ ದೇಶೀಯ ಟೆಲಿಕಾಂ ಕಂಪನಿಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕವನ್ನು ಜಿಯೋ ಹೊರ ಹಾಕಿದೆ.
ಮಸ್ಕ್ ವಾದ ಏನು?
ವಿಶ್ವದಲ್ಲಿ ಸರ್ಕಾರಗಳು ಆಡಳಿತಾತ್ಮಕ ಹಂಚಿಕೆಯ ಮೂಲಕ ಸರ್ಕಾರ ಉಪಗ್ರಹ ಆಧಾರಿತ ಇಂಟರ್‌ನೆಟ್‌ಗೆ ಸೇವೆಗೆ ಅನುಮತಿ ನೀಡುತ್ತದೆ. ಆದರೆ ಭಾರತದಲ್ಲಿ ಹರಾಜು ಮೂಲಕ ಹಂಚಿಕೆ ಮಾಡುವುದು ಸರಿಯಲ್ಲ. ಹರಾಜು ಪ್ರಕ್ರಿಗೆ ಗೆದ್ದು ಇಂಟರ್‌ನೆಟ್ ಸೇವೆ ನೀಡಿದರೆ ಬೆಲೆ ಬಹಳ ದುಬಾರಿಯಾಗುತ್ತದೆ. ಕಡಿಮೆ ಬೆಲೆಗೆ ದೂರದ ಪ್ರದೇಶಗಳಿಗೆ ಗುಣಮಟ್ಟದ ಇಂಟರ್‌ನೆಟ್ ಸೇವೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮತ್ತೆ ದರ ಸಮರ ಆಗುತ್ತಾ?
ಒಂದು ವೇಳೆ ಸ್ಟಾರ್‌ಲಿಂಕ್ ಸೇರಿದಂತೆ ಬೇರೆ ಉಪಗ್ರಹ ಆಧಾರಿತ ಕಂಪನಿಗಳಿಗೆ ಭಾರತದಲ್ಲಿ ಅನುಮತಿ ನೀಡಿದರೆ ಮತ್ತೊಮ್ಮೆ ಡೇಟಾ ಸಮರ ಆರಂಭವಾಗುವ ಸಾಧ್ಯತೆಯಿದೆ. ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಜನರನ್ನು ಸೆಳೆಯಲು ಒಂದೊಂದು ದೇಶದಲ್ಲಿ ಒಂದೊಂದು ಡೇಟಾ ಪ್ಲ್ಯಾನ್ ರಿಲೀಸ್ ಮಾಡಿದೆ. ಅಮೆರಿಕದಲ್ಲಿ ಪ್ರತಿ ತಿಂಗಳಿಗೆ 120 ಡಾಲರ್ (ಅಂದಾಜು 10,000 ರೂ) ವಿಧಿಸಿದ್ದರೆ ಕೀನ್ಯಾದಲ್ಲಿ ಪ್ರತಿ ತಿಂಗಳಿಗೆ 10 ಡಾಲರ್ (ಅಂದಾಜು 844 ರೂ.) ದರವನ್ನು ವಿಧಿಸಿದೆ. ಸ್ಟಾರ್‌ಲಿಂಕ್ ಒಟ್ಟು 6,400 ಉಪಗ್ರಹವನ್ನು ಹಾರಿಸಿದ್ದು ವಿಶ್ವದಲ್ಲಿ 40 ಲಕ್ಷ ಗ್ರಾಹಕರಿದ್ದಾರೆ.