ಮುಂಬೈ: ಪ್ರೀಮಿಯಂ ಕೊಡುಗೆಗಳ ಜೊತೆಗೆ ರಿಲಯನ್ಸ್ ಸ್ಮಾರ್ಟ್ (Reliance Retail Smart) ಹಾಗೂ ಸ್ಮಾರ್ಟ್ ಬಜಾರ್ (Smart Bazaar) ತಮ್ಮ ಉತ್ಪನ್ನಗಳ ಪೋರ್ಟ್ ಫೋಲಿಯೋ ವೈವಿಧ್ಯಗೊಳಿಸುತ್ತಿದೆ.
ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ವಿಲಾಸಿ ಗುಣಮಟ್ಟದ ದೇಹ ಸುಗಂಧ (ಲಘುವಾದ ಹಾಗೂ ಹೆಚ್ಚು ಘಾಟಿಲ್ಲದಂತೆ ವಾಸನೆ ಬೀರುವಂಥ ದ್ರವ್ಯ- ಬಾಡಿ ಮಿಸ್ಟ್) ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದ, ಹಗುರವಾದ ಚರ್ಮ ರಕ್ಷಕ ಉತ್ಪನ್ನಗಳು (ಸೆರಮ್) ಒಳಗೊಂಡಂತೆ ವಿವಿಧ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ರಿಲಯನ್ಸ್ ರಿಟೇಲ್ ಸಿಎಫ್ಒ ಆದ ದಿನೇಶ್ ತಲುಜಾ ಅವರು ಪ್ರೀಮಿಯಂ ವಸ್ತುಗಳ ಕಡೆಗೆ ಏರುತ್ತಿರುವ ಟ್ರೆಂಡ್‌ನ ಬಗ್ಗೆ ಗಮನ ಸೆಳೆದಿದ್ದಾರೆ. ಅದರಿಂದಾಗಿ ಹೆಚ್ಚುತ್ತಿರುವ ಸರಾಸರಿ ಬಿಲ್ ಮೌಲ್ಯ ಹಾಗೂ ಉತ್ತಮ ಮಾರ್ಜಿನ್‌ಗಳ ಬಗ್ಗೆಯೂ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ
Advertisement
Advertisement
ಸ್ಮಾರ್ಟ್ ಹಾಗೂ ಸ್ಮಾರ್ಟ್ ಬಜಾರ್‌ನ ಇತ್ತೀಚಿನ ‘ಫುಲ್ ಪೈಸಾ ವಸೂಲ್ ಸೇಲ್’ ಮಾರಾಟವು ವರ್ಷದಿಂದ ವರ್ಷಕ್ಕೆ 21%ರಷ್ಟು ಮಾರಾಟ ಹೆಚ್ಚಳವನ್ನು ಕಂಡಿದೆ. ಈ ವೇಳೆ ಗೃಹೋಪಯೋಗಿ ಮತ್ತು ಪರ್ಸನಲ್ ಕೇರ್ ವಸ್ತುಗಳು ಹೆಚ್ಚು ಮಾರಾಟವಾಗಿವೆ. ಅವರ ಪ್ರಾದೇಶಿಕ ಅಸ್ತಿತ್ವವು ಬೆಳವಣಿಗೆಯ ಅವಕಾಶಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
Advertisement
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 2023-24ರ ನಾಲ್ಕನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳ ಪ್ರಕಟಣೆ ವೇಳೆ ದಿನೇಶ್ ತಲುಜಾ ಅವರು ಮಾತನಾಡಿ, ನಾವು ದೇಶದಲ್ಲಿ ತಳ ಮಟ್ಟದಲ್ಲೂ ಮಳಿಗೆಗಳ ಪ್ರಾದೇಶಿಕ ಜಾಲವನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ನೆಹರೂ ಕುಟುಂಬದಲ್ಲಿ ಹುಟ್ಟಿದ್ದಾರಾ? ಡಿಎನ್‌ಎ ಪರಿಶೀಲಿಸಬೇಕು: ಕೇರಳ ಶಾಸಕ ಅನ್ವರ್
Advertisement
ರಿಲಯನ್ಸ್ ರಿಟೇಲ್‌ನಿಂದ ದಿನಸಿ ಹೊಸ ವಾಣಿಜ್ಯ ವಿಭಾಗದಿಂದ ನಡೆಸಿದ ‘ಮೆಟ್ರೋ ಕಿರಾಣಾ ಉತ್ಸವ’ದಂಥ ಉಪಕ್ರಮಗಳಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಆದರೆ ಹೋಟೆಲ್-ರೆಸ್ಟೋರೆಂಟ್-ಕೆಫೆ/ಕ್ಯಾಟರಿಂಗ್ (HoReCa) ವಿಭಾಗದಲ್ಲಿನ ಸಾಂಸ್ಥಿಕ ಗ್ರಾಹಕರೊಂದಿಗೆ ಪಾಲುದಾರಿಕೆಯು ವೈವಿಧ್ಯಮಯ ಆದಾಯದ ಹರಿವುಗಳನ್ನು ಹೊಂದಿದೆ.