ಚೀನಾ ಕೈಯಿಂದ ನಾರ್ವೆಯ ಸೋಲಾರ್‌ ಕಂಪನಿ ಖರೀದಿಸಿದ ರಿಲಯನ್ಸ್‌

Public TV
1 Min Read
mukesh ambani

ಮುಂಬೈ: ನಾರ್ವೆಯ ಆರ್‌ಇಸಿ ಸೋಲಾರ್‌ ಹೋಲ್ಡಿಂಗ್ಸ್‌ ಕಂಪನಿಯನ್ನು ರಿಲಯನ್ಸ್‌ ಕಂಪನಿ 771 ದಶಲಕ್ಷ ಡಾಲರ್‌ಗೆ (ಅಂದಾಜು 5,792 ಕೋಟಿ ರೂ.) ಖರೀದಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾದ ರಿಲಯನ್‌ ನ್ಯೂ ಎನರ್ಜಿ ಲಿಮಿಟೆಡ್‌ ಚೀನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿಯಲ್ಲಿದ್ದ ಆರ್‌ಇಸಿ ಕಂಪನಿಯ ಶೇ.100 ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಬಿಎಸ್‌ಇಗೆ(ಬಾಂಬೆ ಸ್ಟಾಕ್‌ ಎಕ್ಸ್‌ಚೆಂಜ್‌)ಮಾಹಿತಿ ನೀಡಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

Reliance Industries

1996 ರಲ್ಲಿ ಆರ್‌ಇಸಿ ಕಂಪನಿ ಸ್ಥಾಪನೆಯಾಗಿದ್ದು ಸಿಂಗಾಪುರದಲ್ಲಿ ತನ್ನ ಕಾರ್ಯಕಾರಿ ಕೇಂದ್ರವನ್ನು ಹೊಂದಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. 2015 ರಲ್ಲಿ ಚೀನಾ 419 ದಶಲಕ್ಷ ಯುರೋಗೆ ಆರ್‌ಇಸಿ ಕಂಪನಿಯನ್ನು ಖರೀದಿಸಿತ್ತು.

ಕಂಪನಿ ಬಳಿ 600 ಕ್ಕೂ ಹೆಚ್ಚು ಯುಟಿಲಿಟಿ ಮತ್ತು ವಿನ್ಯಾಸದ ಪೇಟೆಂಟ್‌ಗಳನ್ನು ಹೊಂದಿದ್ದು, ಅದರಲ್ಲಿ 446 ಮಂಜೂರು ಮಾಡಲಾಗಿದೆ ಮತ್ತು ಉಳಿದವು ಮೌಲ್ಯಮಾಪನದಲ್ಲಿದೆ. ಹೆಚ್ಚಾಗಿ ಈ ಕಂಪನಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಪಾಲಿಸಿಲಿಕಾನ್, ಬಿಲ್ಲೆಗಳು, ಸೌರ ಕೋಶಗಳು(ಸೋಲಾರ್‌ ಸೆಲ್‌), ಸೌರ ಘಟಕಗಳನ್ನು(ಸೋಲಾರ್‌ ಮಾಡ್ಯೂಲ್ಸ್‌) ಆರ್‌ಇಸಿ ಕಂಪನಿ ತಯಾರಿಸುತ್ತದೆ.  ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

rec reliance

ಮುಂದಿನ ಮೂರು ವರ್ಷದಲ್ಲಿ 10.1 ಶತಕೋಟಿ ಡಾಲರ್‌ ಅನ್ನು ನವೀಕರಿಸಬಹುದಾದ ಶಕ್ತಿಯ ಮೇಲೆ ಹೂಡಿಕೆ ಮಾಡುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಈ ಹಿಂದೆ ಘೋಷಿಸಿದ್ದು, ಇದರ ಭಾಗವಾಗಿ ಈ ಕಂಪನಿಯನ್ನು ಖರೀದಿ ಮಾಡಿದೆ.

ರಿಲಯನ್ಸ್‌ ಕಂಪನಿ ಸೌರ ಕೋಶಗಳು ಮತ್ತು ಮಾಡ್ಯೂಲ್‌ಗಳು, ಬ್ಯಾಟರಿಗಳು, ಇಂಧನ ಕೋಶಗಳು ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯ ಸಂಬಂಧ ನಾಲ್ಕು ಗಿಗಾ ಫ್ಯಾಕ್ಟರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

Share This Article
Leave a Comment

Leave a Reply

Your email address will not be published. Required fields are marked *