ನವದೆಹಲಿ: ಇನ್ನು ಮುಂದೆ ರಿಲಯನ್ಸ್ ಜಿಯೋ (Reliance Jio) ಕಂಪನಿಯ ಇಂಟರ್‌ನೆಟ್ ಸೇವೆ ಭಾರತದ ಮೂಲೆ ಮೂಲೆಗಳಲ್ಲಿ ಸಿಗಲಿದೆ. ಭಾರತದ ಮೊದಲ ಬಾರಿಗೆ ಉಪಗ್ರಹ ಆಧಾರಿತ ಇಂಟರ್‌ನೆಟ್ (Satellite Internet) ಸೇವೆಯನ್ನು ಜಿಯೋ ಅನಾವರಣಗೊಳಿಸಿದೆ.
ದೆಹಲಿಯಲ್ಲಿ ಇಂದಿನಿಂದ ಆರಂಭಗೊಂಡ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ (Mobile World Congress) ಜಿಯೋಸ್ಪೇಸ್‌ಫೈಬರ್ (JioSpaceFiber) ಗಿಗಾಬಿಟ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರದರ್ಶಿಸಿದೆ. ಈ ಸೇವೆಯು ದೇಶದ ಉದ್ದಗಲಕ್ಕೂ ಲಭ್ಯವಿದ್ದು, ದರ ಕೂಡ ಕೈಗೆಟುಕುವ ಮಟ್ಟದಲ್ಲೇ ಇರಲಿದೆ. ಈ ಸೇವೆಯಿಂದ ದೇಶದ ದೂರ ದೂರದ ಭಾಗಗಳಲ್ಲಿ ಜಿಯೋ ಟ್ರೂ 5ಜಿ ಲಭ್ಯತೆ ಮತ್ತು ಪ್ರಮಾಣವನ್ನು ಇನ್ನೂ ಹೆಚ್ಚು ಮಾಡಲಿದೆ.
Advertisement
Shri Akash Ambani, Chairman, Reliance Jio Infocomm Ltd, showcasing Jio’s indigenous technology & products and introducing JioSpaceFiber to the Hon. PM Shri Narendra Modi at the Jio pavilion at #IMC2023. #JioAtIMC #PMAtIMC2023 #JioSpaceFiber #Satellite #Jio #India #Technology pic.twitter.com/XYYBBRm4Ar
— Reliance Jio (@reliancejio) October 27, 2023
Advertisement
ಜಾಗತಿಕ ಮಟ್ಟದಲ್ಲಿ ಇವತ್ತಿಗೆ ಮುಖ್ಯವಾದಂಥ ಮೀಡಿಯಂ ಅರ್ಥ್ ಆರ್ಬಿಟ್ ಉಪಗ್ರಹ ತಂತ್ರಜ್ಞಾನ ಸಂಪರ್ಕಿಸುವುದಕ್ಕೆ ಎಸ್ಇಎಸ್ ಜತೆಗೆ ಜಿಯೋ ಪಾಲುದಾರಿಕೆ ಹೊಂದಿದೆ. ಇದು ವಿಶಿಷ್ಟ ಗಿಗಾಬಿಟ್, ಫೈಬರ್ ತರಹದ ಸೇವೆಗಳನ್ನು ಬಾಹ್ಯಾಕಾಶದಿಂದ ತಲುಪಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಎಂಇಒ ಸಮೂಹ ಆಗಿದೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ
Advertisement
ದೇಶದಲ್ಲಿ ಈ ತಂತ್ರಜ್ಞಾನದ ಸೇವೆಗಾಗಿ ಅತ್ಯಂತ ದೂರದ ಸ್ಥಳಗಳನ್ನು ಗುಜರಾತ್‌ನ ಗಿರ್, ಛತ್ತೀಸ್‌ಗಢದ ಕೊರ್ಬಾ, ಒಡಿಶಾದ ನಬರಂಗಪುರ, ಅಸ್ಸಾಂನ ಒಎನ್ ಜಿಸಿ- ಜೊರ್ಹಾತ್ ಸಂಪರ್ಕಿಸಲಾಗಿದೆ.
Advertisement
ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷರಾದ ಆಕಾಶ್ ಅಂಬಾನಿ (Akash Ambani) ಮಾತನಾಡಿ, ಇದೇ ಮೊದಲ ಬಾರಿಗೆ ಹತ್ತಾರು ಲಕ್ಷ ಕುಟುಂಬಗಳು, ವ್ಯವಹಾರಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಅನುಭವ ದೊರೆಯುವಂತೆ ಜಿಯೋ ಮಾಡಿದೆ. ಇನ್ನೂ ಇಂಟರ್‌ನೆಟ್ ವ್ಯಾಪ್ತಿಗೆ ಬಾರದವರನ್ನು ಜಿಯೋಸ್ಪೇಸ್ ಫೈಬರ್ ಮೂಲಕ ಸಂರ್ಪಕಿಸಲಾಗುತ್ತದೆ. ಇದು ಸರ್ಕಾರಿ ಆನ್ ಲೈನ್, ಶಿಕ್ಷಣ, ಆರೋಗ್ಯ, ಮತ್ತು ಮನರಂಜನಾ ಸೇವೆಗಳಿಗೆ ಸಂಪರ್ಕ ಪಡೆಯುವುದಕ್ಕೆ ಗಿಗಾಬಿಟ್ ಮೂಲಕ ಹೊಸ ಡಿಜಿಟಲ್ ಸಮಾಜಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.
Web Stories