Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್‌ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್‌ ಮಾಡಿದ್ರೆ ಫ್ರೀ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್‌ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್‌ ಮಾಡಿದ್ರೆ ಫ್ರೀ?

Cricket

ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್‌ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್‌ ಮಾಡಿದ್ರೆ ಫ್ರೀ?

Public TV
Last updated: March 17, 2025 1:05 pm
Public TV
Share
4 Min Read
jiohotstar ipl jio
SHARE

ಮುಂಬೈ: ಈ ಬಾರಿಯ ಐಪಿಎಲ್‌ ಕ್ರಿಕೆಟ್‌ (IPL Cricket) ಪಂದ್ಯಗಳನ್ನು ನೀವು ಉಚಿತವಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ (Jiohotstar) ವೀಕ್ಷಿಸಲು ಸಾಧ್ಯವಿಲ್ಲ. ಆದರೆ ಜಿಯೋ ಬಳಕೆದಾರರು ಐಪಿಎಲ್‌ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಐಪಿಎಲ್‌ ಡಿಜಿಟಲ್‌ ರೈಟ್ಸ್‌ ಅನ್ನು ಜಿಯೋ ಪಡೆದ ನಂತರ ಕ್ರಿಕೆಟ್‌ ಪ್ರೇಮಿಗಳು ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದಾಗಿತ್ತು. ಆದರೆ ಈಗ ಜಿಯೋ ಮತ್ತು ಹಾಟ್‌ಸ್ಟಾರ್‌ ವಿಲೀನಗೊಂಡಿದೆ. ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಸ್ಟಾರ್ ಆಗಿ ಬದಲಾಗಿದೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಜಿಯೋ ಪ್ಯಾಕ್‌ ಹಾಕಿದವರು 4K ವಿಡಿಯೋದೊಂದಿಗೆ ಟಿವಿ/ಮೊಬೈಲ್‌ನಲ್ಲಿ 90 ದಿನಗಳ ಉಚಿತವಾಗಿ ಐಪಿಎಲ್‌ ವೀಕ್ಷಣೆ ಮಾಡಬಹುದು. ಮಾರ್ಚ್‌ 22 ರಿಂದ ಮೇ 25 ರವರೆಗೆ ಐಪಿಎಲ್‌ ಟೂರ್ನಿ ನಡೆಯಲಿದೆ. ಇದನ್ನೂ ಓದಿ: IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

ವಯಾಕಾಮ್18 ಸಂಸ್ಥೆ 2023-27 ಅವಧಿಯ ಒಟ್ಟು 410 ಪಂದ್ಯಗಳ ಡಿಜಿಟಲ್‌ ಹಕ್ಕನ್ನು 23,758 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. ಕಳೆದ ಎರಡು ವರ್ಷಗಳ ಐಪಿಎಲ್‌ ಟೂರ್ನಿಯನ್ನು ಜಿಯೋಸಿನಿಮಾದಲ್ಲಿ (Jio Cinema) ಉಚಿತವಾಗಿ ವೀಕ್ಷಣೆ ಮಾಡಬಹುದಿತ್ತು.

ಜಿಯೋ ಸಿಮ್‌ ಹೊಂದಿರದ ಕ್ರಿಕೆಟ್‌ ಪ್ರೇಮಿಗಳು ಜಿಯೋಹಾಟ್‌ಸ್ಟಾರ್‌ ಸಬ್‌ಸ್ಕ್ರಿಪ್ಶನ್‌ ಪಡೆಯುವ ಮೂಲಕ ಐಪಿಲ್‌ ಕ್ರಿಕೆಟ್‌ ವೀಕ್ಷಣೆ ಮಾಡಬಹುದು.

jiohotsar ipl

ಜಿಯೋದಲ್ಲಿ ಉಚಿತ ಹೇಗೆ?
ಮಾರ್ಚ್‌ 17 ರಿಂದ ಮಾರ್ಚ್‌ 31ರ ಒಳಗಡೆ ಹೊಸ ಸಿಮ್‌ ಪಡೆಯಬೇಕು/ ರಿಚಾರ್ಜ್‌ ಮಾಡಬೇಕಾಗುತ್ತದೆ.

1) ಹಾಲಿ ಜಿಯೋ ಬಳಕೆದಾರರು: 299 ರೂ.(1.5 ಜಿಬಿ/ದಿನ ಅಥವಾ ಹೆಚ್ಚು) ರಿಚಾರ್ಜ್‌ ಅಥವಾ ಇದಕ್ಕಿಂತ ಹೆಚ್ಚಿನ ಪ್ಲ್ಯಾನ್‌ ರಿಚಾರ್ಜ್‌ ಮಾಡಬೇಕು.

2) ಹೊಸ ಜಿಯೋ ಸಿಮ್‌ ಬಳಕೆದಾರರು: ಹೊಸ ಬಳಕೆದಾರರು 299 ರೂ.(1.5 ಜಿಬಿ/ದಿನ ಅಥವಾ ಹೆಚ್ಚು) ಅಥವಾ ಇದಕ್ಕಿಂತ ಹೆಚ್ಚಿನ ರಿಚಾರ್ಜ್‌ ಮಾಡಬೇಕು.

ಇತರ ಆಫರ್ ನಿಯಮಗಳು:
1) ಮಾರ್ಚ್ 17 ರ ಮೊದಲು ರೀಚಾರ್ಜ್ ಮಾಡಿದ ಗ್ರಾಹಕರು 100 ರೂ.ಗಳ ಆಡ್-ಆನ್ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು.

2) ಜಿಯೋ ಹಾಟ್‌ಸ್ಟಾರ್ ಪ್ಯಾಕ್ ಅನ್ನು ಐಪಿಎಲ್‌ನ ಆರಂಭಿಕ ಪಂದ್ಯ ಮಾರ್ಚ್ 22 ರಿಂದ 90 ದಿನಗಳವರೆಗೆ ಸಕ್ರಿಯಗೊಳಿಸಲಾಗುತ್ತದೆ.

ಈಗಲೂ ಪ್ರವೇಶಿಸಬಹುದು:
ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದ ಚಂದಾದಾರರು ತಮ್ಮ ಯೋಜನೆಗಳು ಮತ್ತು ಪ್ರಯೋಜನಗಳನ್ನು ಈಗಲೂ ಪಡೆದುಕೊಳ್ಳಬಹುದು. ಜಿಯೋ ಸಿನಿಮಾ ಸಬ್‌ಸ್ಕ್ರೈಬ್‌ ಮಾಡಿದ ಚಂದದಾರರು ಈಗಲೂ ಆಪ್‌ ಪ್ರವೇಶಿಸಬಹುದು. ಆದರೆ ಕಂಟೆಂಟ್‌ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ಲೇ ಆಗುತ್ತದೆ. ಸಕ್ರಿಯ ಜಿಯೋಸಿನಿಮಾ ಚಂದಾದಾರಿಕೆಗಳನ್ನು ಹೊಂದಿರುವವರು ತಮ್ಮ ಯೋಜನೆಯ ಅವಧಿ ಮುಗಿಯುವವರೆಗೆ ಕಾಯಬೇಕು ಅಥವಾ ಹೊಸ ಪ್ಲಾಟ್‌ಫಾರ್ಮ್‌ಗೆ ಬದಲಾಯಿಸಬೇಕು. ಹೀಗಾಗಿ ಈಗಾಗಲೇ ಚಂದಾದಾರರಾಗಿರುವ ಬಳಕೆದಾರರು ತಮ್ಮ ಚಂದಾದಾರಿಕೆಗಳನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅವರ ಆಯಾ ಪ್ಲ್ಯಾನ್‌ ಮುಗಿಯವರೆಗೂ ಜಿಯೋಹಾಟ್‌ಸ್ಟಾರ್ ಅನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ

jio hotstar plan

ಭಾರೀ ಮೊತ್ತಕ್ಕೆ ಖರೀದಿ:
2017-22ರ ಅವಧಿಯ ಐಪಿಎಲ್‌ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. 2023ರಲ್ಲಿ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ವಿಂಗಡನೆ ಮಾಡಲಾಗಿತ್ತು. 2023-27ರ 410 ಪಂದ್ಯಗಳಿಗೆ ಡಿಜಿಟಲ್‌ ಹಕ್ಕುಗಳನ್ನು 23,758 ಕೋಟಿ ರೂ.ಗೆ ವಯಾಕಾಮ್ 18 ಪಡೆದುಕೊಂಡಿದ್ದರೆ, ಟಿವಿ ಹಕ್ಕುಗಳನ್ನು ವಾಲ್ಟ್ ಡಿಸ್ನಿ ಕಂಪನಿ 23,575 ಕೋಟಿ ರೂ. ನೀಡಿ ಖರೀದಿಸಿತ್ತು.

ಯಾರ ಬಳಿ ಯಾವ ಹಕ್ಕು?
ರಿಲಯನ್ಸ್‌ ಜಿಯೋ ಸಿನಿಮಾ ಐಪಿಎಲ್‌ ಕ್ರಿಕೆಟ್‌, ಚಳಿಗಾಲದ ಒಲಿಂಪಿಕ್ಸ್‌, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಹಕ್ಕು ಹೊಂದಿದೆ. ಡಿಸ್ನಿ ಹಾಟ್‌ಸ್ಟಾರ್‌ ಐಸಿಸಿ ಆಯೋಜಿಸುವ ಕ್ರಿಕೆಟ್‌ ಪಂದ್ಯಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್, ದೇಶೀಯ ಪ್ರೊ ಕಬಡ್ಡಿ ಲೀಗ್‌ನ ಹಕ್ಕುಗಳನ್ನು ಹೊಂದಿದೆ. ವಿಲೀನಗೊಂಡ ಬಳಿಕ ಎಲ್ಲಾ ಕ್ರೀಡೆಗಳನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ವೀಕ್ಷಿಸಬೇಕಾದರೆ ಸಬ್‌ಸ್ಕ್ರೈಬ್‌ ಆಗಬೇಕಿತ್ತು. ಆದರೆ 2023 ರಲ್ಲಿ ಜಿಯೋ ರೈಟ್ಸ್‌ ಪಡೆದ ನಂತರ ಐಪಿಎಲ್‌ ಲೈವ್‌ ಸ್ಟ್ರೀಮಿಂಗ್‌ ಉಚಿತವಾಗಿ ನೀಡಿತ್ತು. ಇದರಿಂದಾಗಿ ಐಪಿಎಲ್‌ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

IPL 4

ಜಂಟಿ ಉದ್ಯಮಕ್ಕೆ ಸಹಿ:
2024ರ ಫೆಬ್ರವರಿಯಲ್ಲಿ ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ 70 ಸಾವಿರ ಕೋಟಿ ರೂ. ಮೊತ್ತದ ಜಂಟಿ ಉದ್ಯಮಕ್ಕೆ ಸಹಿ ಹಾಕಿದ್ದವು. ಈ ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಅನುಮತಿ ಸಿಕ್ಕಿತ್ತು.

ರಿಲಯನ್ಸ್ ಇಂಡಸ್ಟ್ರೀಸ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನದ ಭಾಗವಾಗಿ ಪರವಾನಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್‌ 27 ರಂದು ಅನುಮೋದನೆ ನೀಡಿತ್ತು. ಪರವಾನಗಿ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದು ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು.

ಡಿಸ್ನಿ ಮತ್ತು ರಿಲಯನ್ಸ್ ನಡುವಿನ ವಿಲೀನ ಒಪ್ಪಂದದಿಂದಾಗಿ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ.

TAGGED:ಜಿಯೋ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

wild elephant attack on bike in chikkamagaluru
Chikkamagaluru

ಬೈಕ್ ಅಡ್ಡಗಟ್ಟಿ ತುಳಿದು ಹಾಕಿದ ಪುಂಡಾನೆ – ಸವಾರ ಜಸ್ಟ್ ಮಿಸ್

Public TV
By Public TV
14 minutes ago
Russia Military Plane
Latest

Russian Military Plane Crash – ವಿಮಾನದಲ್ಲಿದ್ದ 29 ಪ್ರಯಾಣಿಕರು ಸಾವು, ತಾಂತ್ರಿಕ ದೋಷ ಶಂಕೆ

Public TV
By Public TV
19 minutes ago
ABVP Gopi Rangaswamy
Bengaluru City

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು: ಎಬಿವಿಪಿ

Public TV
By Public TV
23 minutes ago
calcutta high court
Court

West Bengal SIR | 60 ಲಕ್ಷ ಆಕ್ಷೇಪಣೆಗಳಲ್ಲಿ 47 ಲಕ್ಷ ಅರ್ಜಿ ಇತ್ಯರ್ಥ – ಸುಪ್ರೀಂಗೆ ಹೈಕೋರ್ಟ್ ವರದಿ

Public TV
By Public TV
50 minutes ago
Munirabad PSI Suspend
Districts

ಅಕ್ರಮಗಳಿಗೆ ಬ್ರೇಕ್ ಹಾಕದೇ ಕರ್ತವ್ಯ ಲೋಪ – ಮುನಿರಾಬಾದ್ ಪಿಎಸ್‌ಐ ಅಮಾನತು

Public TV
By Public TV
56 minutes ago
S.S Mallikarjun
Davanagere

ಸಮರ್ಥ್ ಗೆಲುವಿಗಾಗಿ ಕೆಂಡ ತುಳಿದು ವಿಶೇಷ ಪೂಜೆ ಸಲ್ಲಿಸಿದ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?