ಮುಂಬೈ: ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಪ್ರತಿ ಬಳಕೆದಾರನಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡ ಎರಡನೇ ತ್ರೈಮಾಸಿಕದಲ್ಲಿ 131.7 ರೂ. ಆದಾಯ ಗಳಿಸಿದೆ.
ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಜಿಯೋ ಶೇ.11 ರಷ್ಟು ಪ್ರಗತಿ ಸಾಧಿಸಿದ್ದು, 681 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ಆದಾಯದಲ್ಲಿ ಶೇ.13.9 ಏರಿಕೆಯಾಗಿದ್ದು 9,240 ಕೋಟಿ ರೂ. ಗಳಿಸಿದೆ. ಕಾರ್ಯಾಚರಣಾ ಲಾಭ ಶೇ.13.5 ಏರಿಕೆಯಾಗಿದ್ದು 3,563 ಕೋಟಿ ರೂ. ಗಳಿಸಿದೆ.
Advertisement
Advertisement
ಪ್ರತಿ ಬಳಕೆದಾರನಿಂದ 131.7 ರೂ. ಆದಾಯ ಬಂದಿದ್ದು, ಕಳೆದ 4 ತ್ರೈಮಾಸಿಕಕ್ಕೆ ಹೋಲಿಸಿದರೆ ಕಡಿಮೆ ಆದಾಯ ಬಂದಿದೆ. ಜಿಯೋ ಫೋನ್ ಮೂಲಕ ಗ್ರಾಹಕರನ್ನು ಹೆಚ್ಚಿಸಲು ಮುಂದಾಗಿದ್ದರ ಜೊತೆಗೆ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ ನೀಡಿದ ಪರಿಣಾಮ ಆದಾಯ ಕುಸಿದಿದೆ. ಇದರ ಜೊತೆಗೆ 501 ರೂ. ನೀಡಿ ಹೊಸ ಜಿಯೋ ಫೋನ್ ಖರೀದಿಸಲು ನೀಡಿದ ಆಫರ್ ನಿಂದಾಗಿಯೂ ಈ ಆದಾಯದಲ್ಲಿ ಕುಸಿತ ಕಂಡಿದೆ.
Advertisement
ಈ ಹಿಂದಿನ ನಾಲ್ಕು ತ್ರೈಮಾಸಿಕದಲ್ಲಿ ಜಿಯೋ ಅನುಕ್ರಮವಾಗಿ 156 ರೂ., 154 ರೂ., 137 ರೂ., 135 ರೂ., ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರನಿಂದ 131.7 ರೂ. ಆದಾಯಗಳಿಸಿದೆ.
Advertisement
ಎರಡನೇ ತ್ರೈಮಾಸಿಕದಲ್ಲಿ ಒಟ್ಟು 3 ಕೋಟಿ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 25.2 ಕೋಟಿ ಜಿಯೋ ಗ್ರಾಹಕರಿದ್ದಾರೆ. ಫೀಚರ್ ಫೋನ್‍ಗಳ ಪೈಕಿ ಈಗ 4ಜಿ ಜಿಯೋ ಫೋನ್2 ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಈ ಸೆಟ್ ವಾಟ್ಸಪ್, ಫೇಸ್‍ಬುಕ್, ಯೂ ಟ್ಯೂಬ್ ಅಪ್ಲಿಕೇಶನ್ ಗಳನ್ನೂ ಸಪೋರ್ಟ್ ಮಾಡುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv