ಮುಂಬೈ: ಹೊಸ ವರ್ಷದ ಅಂಗವಾಗಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ‘ಹ್ಯಾಪಿ ನ್ಯೂ ಇಯರ್’ ಹೆಸರಿನಲ್ಲಿ ಎರಡು ಹೊಸ ಪ್ಲಾನ್ ಪರಿಚಯಿಸಿದೆ. 199 ರೂ. ಮತ್ತು 299 ರೂ. ಪ್ಲಾನ್ ಪರಿಚಯಿಸಿದ್ದು, ಜಿಯೋ ಪ್ರೈಂ ಸದಸ್ಯರಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ.
199 ರೂ.
28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 1.2 ಜಿಬಿ ಹೈ ಸ್ಪೀಡ್ 4ಜಿ ಡೇಟಾ ಸಿಗುತ್ತದೆ. ಎಲ್ಲ ಹೊರ ಹೋಗುವ ಕರೆಗಳು ಉಚಿತವಾಗಿದ್ದು ಮಿತಿ ಇಲ್ಲದಷ್ಟು ಎಸ್‍ಎಂಎಸ್ ಗಳನ್ನು ಕಳುಹಿಸಬಹುದಾಗಿದೆ.
Advertisement
299 ರೂ.
28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 2 ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಎಲ್ಲ ಹೊರ ಹೋಗುವ ಕರೆಗಳು ಉಚಿತವಾಗಿದ್ದು ಮಿತಿ ಇಲ್ಲದಷ್ಟು ಎಸ್‍ಎಂಎಸ್ ಗಳನ್ನು ಕಳುಹಿಸಬಹುದಾಗಿದೆ.
Advertisement
Advertisement
ಈ ಹಿಂದೆ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಪ್ರತಿ ತಿಂಗಳು ಜಿಯೋ ಬಳಕೆದಾರರು 100 ಕೋಟಿ ಜಿಬಿ ಡೇಟಾವನ್ನು ಬಳಸುತ್ತಿದ್ದು, ಪ್ರತಿ ದಿನ ಜಿಯೋ ನೆಟ್ ವರ್ಕ್ ಮೂಲಕ ಒಟ್ಟು 3.3 ಕೋಟಿ ಜಿಬಿ ಡೇಟಾ ಬಳಕೆಯಾಗುತ್ತಿದೆ ಎಂದು ಹೇಳಿದ್ದರು.
Advertisement
ಈ ವರ್ಷದ ಫೆಬ್ರವರಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಪ್ರತಿ ತಿಂಗಳು 150 ಕೋಟಿ ಗಿಗಾಬೈಟ್ ಮೊಬೈಲ್ ಡೇಟಾವನ್ನು ಬಳಸುವ ವಿಶ್ವದಲ್ಲೇ ಮೊಬೈಲ್ ಡೇಟಾ ಬಳಸುವ ದೇಶಗಳ ಪೈಕಿ ಭಾರತ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮತ್ತು ಚೀನಾ ಎರಡನ್ನೂ ಸೇರಿಸಿದರೂ ಭಾರತದಲ್ಲೇ ಅತಿ ಹೆಚ್ಚು ಮೊಬೈಲ್ ಡೇಟಾ ಬಳಕೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದನ್ನೂ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು