ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ಮುಕೇಶ್ ಅಂಬಾನಿ 2018 ರ ವಾರ್ಷಿಕ ಮಹಾಸಭೆಯಲ್ಲಿ ಜಿಯೋ ಗಿಗಾ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಅನಾವಣಗೊಳಿಸಿದ್ದರು. ಈಗ ಈ ಗಿಗಾಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯ ಪ್ರಿವ್ಯೂ ಆಫರ್ ಪ್ರಕಟಗೊಂಡಿದೆ.
ಆಫರ್ ನಲ್ಲಿ ಏನಿರುತ್ತೆ?
ಜಿಯೋ ಗಿಗಾ ಫೈಬರ್ ಪ್ರಿವ್ಯೂ ಆಫರ್ ಒಟ್ಟು 90 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ. ಈ ವೇಳೆ ಗ್ರಾಹಕರಿಗೆ 300 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇದರ ಪ್ರಕಾರ ಪ್ರತಿ ತಿಂಗಳಿಗೆ 100 ಜಿಬಿ ಡೇಟಾ ಸಿಗುತ್ತದೆ. ಇದಲ್ಲದೇ ಪ್ರಿವ್ಯೂ ಆಫರ್ ನಲ್ಲಿರುವ ಗ್ರಾಹಕರಿಗೆ ತನ್ನ ಮೈ ಜಿಯೋ ಆ್ಯಪ್ ಮೂಲಕ ಹೆಚ್ಚುವರಿಯಾಗಿ 40 ಜಿಬಿ ಡೇಟಾ ಸಿಗುತ್ತದೆ. 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಡೌನ್‍ಲೋಡ್ ಸ್ಪೀಡ್ ಹಾಗೂ 100 ಎಂಬಿಪಿಎಸ್(ಮೆಗಾ ಬೈಟ್ ಪರ್ ಸಕೆಂಡ್) ಅಪ್ಲೋಡ್ ಸ್ಪೀಡ್‍ನ್ನು ಹೊಂದಿರುತ್ತದೆ ಎಂದು ಜಿಯೋ ಹೇಳಿದೆ. ಜಿಯೋ ಹೇಳಿದಷ್ಟೇ ವೇಗದಲ್ಲಿ ನೆಟ್ ಸಿಕ್ಕಿದರೆ 2 ಜಿಬಿ ಫೈಲ್ ಗಳು ಕೆಲವೇ ಸೆಕೆಂಡ್ ನಲ್ಲಿ ಡೌನ್ ಲೋಡ್ ಆಗಲಿದೆ.
Advertisement
Advertisement
ಬೆಲೆ ಎಷ್ಟು?
ಜಿಯೋ ಈ ಆಫರ್ ರನ್ನು ಉಚಿತವಾಗಿ ನೀಡಲಿದ್ದು, ಕೇವಲ ತನ್ನ ಬ್ರಾಡ್‍ಬ್ಯಾಂಡ್ ರೂಟರ್ ಗಳ ಭದ್ರತಾ ಠೇವಣಿಯಾಗಿ 4,500 ರೂಪಾಯಿಗಳನ್ನು ಪಾವತಿಸಬೇಕು. ಅಷ್ಟೇ ಅಲ್ಲದೇ ಇನ್ಸ್ಟಾಲೇಷನ್ ಹಾಗೂ ಇತರೆ ಯಾವುದೇ ವೆಚ್ಚಗಳು ಇರುವುದಿಲ್ಲ. ಈ ಹಣವನ್ನು ಕ್ರೆಡಿಟ್, ಡೆಬಿಟ್ ಕಾರ್ಡ್, ಜಿಯೋ ಮನಿ, ಪೇಟಿಂಎ ಮೂಲಕ ಪಾವತಿಸಬೇಕಾಗುತ್ತದೆ. ಬಳಕೆ ಮಾಡಿದ ಬಳಿಕ ಈ ರೂಟರ್ ಬೇಡ ಎಂದಾದರೆ ನಿಮ್ಮ ಖಾತೆಗೆ 4,500 ರೂ. ಜಮೆ ಆಗುತ್ತದೆ.
Advertisement
Advertisement
ಗಿಗಾ ಫೈಬರ್ ನೋಂದಣಿ ಹೇಗೆ?
ಗ್ರಾಹಕರ ಜಿಯೋ ಫೈಬರ್ www.gigafiber.jio.com ನ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಅಲ್ಲದೇ ತಮ್ಮ ಸ್ಥಳಗಳನ್ನು ಗೂಗಲ್ ಮ್ಯಾಪ್ ಸಹಾಯದೊಂದಿಗೆ ಸರಿಯಾಗಿ ಗುರುತಿಸಬೇಕು. ನಂತರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಹಾಕಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಇದಾದ ನಂತರ ನಿಮಗೆ ಜಿಯೋ ಕಡೆಯಿಂದ ನೋಂದಣಿಯಾದ ಸಂದೇಶ ಬರುತ್ತದೆ. ಸದ್ಯಕ್ಕೆ ಗಿಗಾ ಫೈಬರ್ ಎಲ್ಲ ನಗರಗಳಲ್ಲಿ ಲಭ್ಯವಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv