ಮುಂಬೈ: ಕಳೆದ ತ್ರೈಮಾಸಿಕದಲ್ಲಿ 40.9 ಎಕ್ಸಾಬೈಟ್ ಡೇಟಾ ಟ್ರಾಫಿಕ್ (Data Traffic) ದಾಖಲಾಗುವ ಮೂಲಕ ರಿಲಯನ್ಸ್ ಜಿಯೋ (Reliance Jio) ಮೈಲಿಗಲ್ಲು ಬರೆದಿದೆ.
ಮೊಬೈಲ್ ಸೇವೆಗಳ ಬಗ್ಗೆ ಅಧ್ಯಯನ ನಡೆಸುವ Tefficient ಕಂಪನಿ ಈ ವರದಿ ಪ್ರಕಾರ ಜಿಯೋ 40.9 ಎಕ್ಸಾಬೈಟ್ ಡೇಟಾ ಬಳಕೆಯಾಗಿದ್ದರೆ ಇಲ್ಲಿಯವರೆಗೆ ನಂಬರ್ 1 ಸ್ಥಾನದಲ್ಲಿದ್ದ ಚೀನಾದ ಚೀನಾ ಮೊಬೈಲ್ (China Mobile) 38 ಎಕ್ಸಾಬೈಟ್ ಡೇಟಾ ದಾಖಲಾಗಿದೆ.
Advertisement
ಜಿಯೋ 10.8 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ 5ಜಿ ಗ್ರಾಹಕರ ಪೈಕಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಸದ್ಯ ಜಿಯೋದ 28% ಆದಾಯ 5ಜಿ ಸೇವೆಯಿಂದ ಬರುತ್ತಿದೆ.
Advertisement
Advertisement
ಜಿಯೋದ ಏರ್‌ಫೈಬರ್ ಸೇವೆ 5,900 ನಗರದಲ್ಲಿ ಇದೆ. ಜಿಯೋ ಏರ್‌ಫೈಬರ್‌ನಲ್ಲಿ ಪ್ರತಿದಿನ 13 ಗಿಗಾಬೈಟ್ ಡೇಟಾ ಬಳಕೆ ಆಗುತ್ತಿದ್ದು, ಜಿಯೋ ಫೈಬರ್‌ಗೆ ಹೋಲಿಸಿದರೆ 30% ಹೆಚ್ಚಿದೆ
Advertisement
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ಯಶಸ್ಸಿನ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ, ಎಲ್ಲಾ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ದಾಖಲಿಸಿದ್ದು ಹರ್ಷದಾಯಕವಾಗಿದೆ ಎಂದಿದ್ದಾರೆ.
5ಜಿ ಸೇವೆಗಳ ಪ್ರಾರಂಭದ ನಂತರ, ರಿಲಯನ್ಸ್ ಜಿಯೊದ ಡೇಟಾ ಬಳಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 35.2ರಷ್ಟು ಜಿಗಿತವನ್ನು ಕಂಡಿದೆ.