ಮುಂಬೈ: ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಸೇರ್ಪಡೆಯಾಗುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ಏರ್‍ಟೆಲ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿದೆ.
ಎಷ್ಟು ಮೊತ್ತಕ್ಕೆ ಈ ಖರೀದಿ ಒಪ್ಪಂದ ನಡೆದಿದೆ ಎನ್ನುವ ಮಾಹಿತಿ ಪ್ರಕಟಗೊಂಡಿಲ್ಲ. ಟೆಲಿನಾರ್ ಕಂಪೆನಿ ಈಗ ಗುಜರಾತ್, ಬಿಹಾರ್, ಮಹಾರಾಷ್ಟ್ರ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಅಸ್ಸಾಂ, ಆಂಧ್ರಪ್ರದೇಶದಲ್ಲಿ ಸರ್ಕಲ್ ಹೊಂದಿದೆ.
Advertisement
ಇದನ್ನೂ ಓದಿ: ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!
Advertisement
2016ರ ಡಿಸೆಂಬರ್‍ನಲ್ಲಿ ದೇಶದಲ್ಲಿ ಒಟ್ಟು 3.8 ಕೋಟಿ ಟೆಲಿನಾರ್ ಗ್ರಾಹಕರಿದ್ದರು. ಈ ಗ್ರಾಹಕರೆಲ್ಲರು ಇನ್ನು ಮುಂದೆ ಏರ್‍ಟೆಲ್ ಗ್ರಾಹಕರಾಗಲಿದ್ದಾರೆ.
Advertisement
ಭಾರತದಲ್ಲಿ ಹೂಡಿದ್ದ ಬಂಡವಾಳಕ್ಕೆ ತಕ್ಕಷ್ಟು ಆದಾಯಗಳಿಸದ ಹಿನ್ನೆಲೆಯಲ್ಲಿ ಕಂಪೆನಿಯನ್ನು ಏರ್‍ಟೆಲ್ ಜೊತೆ ವಿಲೀನಗೊಳಿಸುತ್ತಿದ್ದೇವೆ ಎಂದು ಟೆಲಿನಾರ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿಗ್ವೆ ಬ್ರೆಕ್ಕಿ ಹೇಳಿದ್ದಾರೆ.
Advertisement
ಟೆಲಿನಾರ್ ಏರ್‍ಟೆಲ್ ಖರೀದಿ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಮುಂಬೈ ಷೇರು ಪೇಟೆಯಲ್ಲಿ ಏರ್‍ಟೆಲ್ ಭಾರತಿ ಷೇರುಗಳಲ್ಲಿ ಶೇ. 11 ರಷ್ಟು ಏರಿಕೆ ಕಂಡುಬಂದಿತ್ತು.
ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ