ನವದೆಹಲಿ: ಡೇಟಾ ಪ್ಯಾಕ್‍ನಲ್ಲಿ ಜಿಯೋ ದರ ಸಮರ ಆರಂಭಿಸಿದ ಬಳಿಕ ಏರ್‍ಟೆಲ್, ಐಡಿಯಾಗಳು ಡೇಟಾ ಪ್ಯಾಕ್‍ನಲ್ಲಿ ಆಫರ್ ಘೋಷಿಸಿತ್ತು. ಈಗ ಬಿಎಸ್‍ಎನ್‍ಎಲ್ 339 ರೂ. ರಿಚಾರ್ಜ್ ಮಾಡಿದ್ರೆ ಒಂದು ದಿನಕ್ಕೆ 3ಜಿ ವೇಗದ 2 ಜಿಬಿ ಡೇಟಾ ಇರುವ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್ ಪ್ರಕಟಿಸಿದೆ.
ಈ ಆಫರ್‍ನಲ್ಲಿ ಪ್ರತಿದಿನ ಬಿಎಸ್‍ಎನ್‍ಎಲ್‍ನಿಂದ ಬಿಎಸ್‍ಎನ್‍ಎಲ್ ನೆಟ್‍ವರ್ಕಿಗೆ ಹೋಗುವ ಎಲ್ಲ ಕರೆ ಉಚಿತವಾಗಿದ್ದು, 25 ನಿಮಿಷಗಳ ಕಾಲ ಇತರೆ ನೆಟ್‍ವರ್ಕಿಗೆ ಹೋಗುವ ಕರೆ ಉಚಿತವಾಗಿದೆ. 25 ನಿಮಿಷ ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 25 ಪೈಸೆ ಚಾರ್ಜ್ ಮಾಡುತ್ತದೆ. ಅದರೆ ಈ ಆಫರ್ 90 ದಿನಗಳ ಅವಧಿಗೆ ಮಾತ್ರ ಸೀಮಿತವಾಗಿದೆ.
Advertisement
ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ನೀಡಲು ಈ ಆಫರನ್ನು ಪರಿಚಯಿಸಿದ್ದೇವೆ ಎಂದು ಬಿಎಸ್‍ಎನ್‍ಎಲ್‍ನ ಗ್ರಾಹಕ ಮೊಬಿಲಿಟಿ ವಿಭಾಗದ ನಿರ್ದೇಶಕ ಆರ್.ಕೆ. ಮಿತ್ತಲ್ ಹೇಳಿದ್ದಾರೆ.
Advertisement
ಜಿಯೋ ಪ್ಲಾನ್ ಹೇಗಿದೆ?
ಜಿಯೋದ ಹ್ಯಾಪಿ ನ್ಯೂ ಇಯರ್ ಪ್ಲಾನ್ ಮಾರ್ಚ್ 31ಕ್ಕೆ ಅಂತ್ಯವಾಗಲಿದ್ದು, ಏಪ್ರಿಲ್‍ನಿಂದ ಗ್ರಾಹಕರು ಪ್ರತಿ ದಿನ 1 ಜಿಬಿ ಡೇಟಾ ಪಡೆಯಬೇಕಾದರೆ 99 ರೂ. ನೀಡಿ ಪ್ರೈಮ್ ಸದಸ್ಯರಾಗಬೇಕಾಗುತ್ತದೆ. ಈ ಪ್ರೈಮ್ ಸದಸ್ಯತ್ವದ ಅವಧಿ 12 ತಿಂಗಳು ಆಗಿದ್ದು, ಸದಸ್ಯರಾದವರು 303 ರೂ. ಮತ್ತು ಅದಕ್ಕಿಂತಲೂ ಹೆಚ್ಚಿನ ರೂ. ಆಫರ್ ರಿಚಾರ್ಜ್ ಮಾಡಿದ್ರೆ ಅವರಿಗೆ ಪ್ರತಿ ದಿನ 4ಜಿ ವೇಗದಲ್ಲಿ 1 ಜಿಬಿ ಡೇಟಾ ಸಿಗುತ್ತದೆ. ಅಷ್ಟೇ ಅಲ್ಲದೇ ಜಿಯೋ ನ್ಯೂಸ್, ಜಿಯೋ ಸಿನಿಮಾ, ಜಿಯೋ ಟಿವಿ ಆಗಿರುವ ಜಿಯೋ ಮೀಡಿಯಾ ಸರ್ವಿಸ್ ಉಚಿತವಾಗಿ ದೊರೆಯಲಿದೆ.
Advertisement
ಪ್ರೈಮ್ ಆಫರ್ ನಂತರ ಜಿಯೋ ಬೈ ಒನ್ ಗೆಟ್ ಒನ್ ಆಫರ್ ಬಿಡುಗಡೆ ಮಾಡಿತ್ತು. ಈ ಆಫರ್ ನಲ್ಲಿ 303 ರೂ. ರಿಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ 5 ಜಿಬಿ ಡೇಟಾ ನೀಡುವುದಾಗಿ ಪ್ರಕಟಿಸಿದೆ. ಇದರಿಂದಾಗಿ ಗ್ರಾಹಕರು 28 ದಿನಗಳ ಅವಧಿಯಲ್ಲಿ ಒಟ್ಟು 33 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಇನ್ನು 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದ್ರೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ಸಿಗಲಿದೆ. ಈ ಹೆಚ್ಚುವರಿ ಡೇಟಾಗಳು ಹೇಗೆ ಸೇರ್ಪಡೆಯಾಗುತ್ತದೆ ಎನ್ನುವ ಪ್ರಶ್ನೆಗೆ ಜಿಯೋ ಆಟೋಮ್ಯಾಟಿಕ್ ಆಗಿ ಗ್ರಾಹಕರ ಖಾತೆಗೆ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದೆ. 303 ರೂ.ಗಿಂತ ಹೆಚ್ಚಿನ ರಿಚಾರ್ಜ್ ಮಾಡಿದ ಪ್ರೈಮ್ ಗ್ರಾಹಕರಿಗೆ ಮಾತ್ರ ಈ ಆಫರ್ ಸಿಗಲಿದೆ.
Advertisement
ಜಿಯೋಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ