ಮುಂಬೈ: ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ಜಿಯೋ ಈಗ ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದೆ. ಆರಂಭಗೊಂಡ ಎರಡೂವರೆ ವರ್ಷದಲ್ಲಿ 36 ಕೋಟಿ ಗ್ರಾಹಕರನ್ನು ಸಂಪಾದಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾರ್ಚ್ 2 ರಂದು ಜಿಯೋ ಈ ಸಾಧನೆ ನಿರ್ಮಿಸಿದೆ. ಈ ಸಾಧನೆ ನಿರ್ಮಿಸಿದ್ದಕ್ಕೆ ಐಪಿಎಲ್ ಕ್ರಿಕೆಟ್ ಪ್ರಸಾರದ ವೇಳೆ 300 ದಶಲಕ್ಷ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಎಂದು ಜಿಯೋ ಟಿವಿ ಜಾಹೀರಾತು ನೀಡುತ್ತಿದೆ.
Advertisement
ಅಧಿಕೃತವಾಗಿ ಆರಂಭಗೊಂಡ 170 ದಿನದಲ್ಲಿ 10 ಲಕ್ಷ ಗ್ರಾಹಕರು ಜಿಯೋ ಸಂಪಾದಿಸಿತ್ತು. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ 10 ಲಕ್ಷ ಗ್ರಾಹಕರನ್ನು ಸಂಪಾದಿಸಿದ ವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿತ್ತು.
Advertisement
Advertisement
ಭಾರತಿ ಏರ್‌ಟೆಲ್ ಅಧಿಕೃತವಾಗಿ ಆರಂಭಗೊಂಡ 19 ವರ್ಷದಲ್ಲಿ 30 ಕೋಟಿ ಗ್ರಾಹಕರನ್ನು ಸಂಪಾದಿಸಿತ್ತು.
Advertisement
ಐಡಿಯಾ ಜೊತೆಗೆ ವಿಲೀನದಿಂದಾಗಿ ವೋಡಾಫೋನ್ ಕಂಪನಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದ್ದು, 40 ಕೋಟಿ ಗ್ರಾಹಕರಿದ್ದಾರೆ. ಏರ್‍ಟೆಲ್ 34 ಕೋಟಿ ಗ್ರಾಹಕರನ್ನು ಹೊಂದಿದೆ.
2007 ಫೆ.15 ರಂದು ಜಿಯೋ ಕಂಪನಿ ಆರಂಭಗೊಂಡಿದ್ದರೂ ಅಧಿಕೃತವಾಗಿ 2016ರ ಸೆ.5 ರಂದು ಆರಂಭಗೊಂಡಿತ್ತು. ಆರಂಭದ ಮೂರು ತಿಂಗಳು ಉಚಿತ ಡೇಟಾ ನೀಡಿ ಗ್ರಾಹಕರ ಸಂಖ್ಯೆಯನ್ನು ಜಿಯೋ ಹೆಚ್ಚಿಸಿಕೊಂಡಿತ್ತು.