ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕಂಪೆನಿಯನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ತನ್ನ ಷೇರಿನ ಬೆಲೆ 2.4% ಏರಿಕೆಯಾದ ಹಿನ್ನೆಲೆಯಲ್ಲಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ರಿಲಯನ್ಸ್ ಷೇರಿನ ಬೆಲೆ 2.4% ಏರಿಕೆಯಾದ ಪರಿಣಾಮ ಮಂಗಳವಾರ ಒಂದು ಷೇರಿನ ಬೆಲೆ 1,177 ರೂ. ಇದ್ದರೆ, ಟಿಸಿಎಸ್ ಒಂದು ಷೇರಿನ ಬೆಲೆ 1,930 ರೂ. ಇತ್ತು. ಟಿಸಿಎಸ್ 7.39 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿದ್ದರೆ ರಿಲಯನ್ಸ್ ಈಗ 7.46 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿದೆ.
Advertisement
ಕಳೆದ ಎರಡು ತಿಂಗಳಿನಿಂದ ರಿಲಯನ್ಸ್ ಷೇರು ಏರಿಕೆ ಕಾಣುತ್ತಿದ್ದು, ವಿಶೇಷವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಜಿಯೋದಿಂದಾಗಿ ಏರಿಕೆಯಾಗುತ್ತಿದೆ.
Advertisement
ಶುಕ್ರವಾರ ರಿಲಯನ್ಸ್ ಕಂಪೆನಿ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ 9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಸಂಸ್ಥೆ ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು. ಇದನ್ನೂ ಓದಿ: ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!
Advertisement
Advertisement
#CNBCTV18Market | Reliance Industries is now the highest valued company, surpasses @TCS in market capitalisation pic.twitter.com/KU8kLkuJ5s
— CNBC-TV18 (@CNBCTV18Live) July 31, 2018
#BQMarketsNow | Reliance Industries overtakes TCS as most valuable Indian company.https://t.co/izFRtNFVwj pic.twitter.com/Bh3xxpQWop
— BQ Prime (@bqprime) July 31, 2018