ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಬಹುಮುಖಿ ತಾಣವಾದ ಜಿಯೋ ವರ್ಲ್ಡ್ ಸೆಂಟರ್ ಅನ್ನು ತೆರೆಯುವುದಾಗಿ ಘೋಷಿಸಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ 18.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶವನ್ನು ಹೊಂದಿದ್ದು, ಭಾರತದ ನಾಗರಿಕರಿಗೆ ವ್ಯಾಪಾರ, ವಾಣಿಜ್ಯ ಮತ್ತು ಸಂಸ್ಕೃತಿಯ ಅನುಭವ ನೀಡುವ ತಾಣವಾಗುವ ಮೂಲಕ ವಿಶ್ವದರ್ಜೆಯ ಗುಣಮಟ್ಟವನ್ನು ಒದಗಿಸಲು ಸಿದ್ಧವಾಗಿದೆ.
Advertisement
Advertisement
ಸಾಂಸ್ಕೃತಿಕ ಕೇಂದ್ರ, ಸಂಗೀತ ಕಾರಂಜಿ, ಉನ್ನತ ಮಟ್ಟದ ರಿಟೇಲ್ ಅನುಭವ, ಕೆಫೆಗಳು ಮತ್ತು ಉತ್ತಮ ಭೋಜನದ ರೆಸ್ಟೋರೆಂಟ್‌ಗಳು, ಸರ್ವಿಸ್ಡ್ ಅಪಾರ್ಟ್ಮೆಂಟ್‌ಗಳು ಮತ್ತು ಕಛೇರಿಗಳು, ಸ್ಟೇಟ್-ಆಫ್ ದಿ- ಆರ್ಟ್ ಸೌಲಭ್ಯಗಳನ್ನು ಒಳಗೊಂಡಿರುವ ಭಾರತದ ಮೊದಲ ತಾಣ ಜಿಯೋ ವರ್ಲ್ಡ್ ಸೆಂಟರ್ ಆಗಿರಲಿದೆ.
Advertisement
ಒಬೆರಾಯ್ 360 ಸೇರಿದಂತೆ ಹಲವು ಹೊಸ ಹಾಗೂ ನವೀನ ಜಾಗತಿಕ ಪಾಕಶಾಲೆಯ ಪರಿಕಲ್ಪನೆಯನ್ನು ಕನ್ವೆನ್ಶನ್ ಸೆಂಟರ್ ಒಳಗೊಂಡಿರಲಿದೆ. ಇಂಡಿಯಾ ಆಕ್ಸೆಂಟ್ ನಂಥ ವಿಶ್ವ ದರ್ಜೆಯ ಶಾಪಿಂಗ್ ಅನುಭವ ಮತ್ತು ಐಷಾರಾಮಿ ಬ್ರಾಂಡ್‌ಗಳು ಇಲ್ಲಿ ಲಭ್ಯವಿರಲಿವೆ. ಸಾಂಸ್ಕೃತಿಕವಾಗಿ ಮನಸೂರೆಗಳ್ಳುವ ಅನುಭವಗಳ ಸಾಂಸ್ಕೃತಿಕ ಕೇಂದ್ರಬಿಂದುವಾಗಿ, ಕಲಾತ್ಮಕ ಸಮುದಾಯದ ಭಾಗವಾಗಿ ಇದು 2023ರಲ್ಲಿ ಆರಂಭವಾಗಲಿದೆ. ಇದನ್ನೂ ಓದಿ: ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ
Advertisement
ಈ ಕೇಂದ್ರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ನೀತಾ ಅಂಬಾನಿ, “ಜಿಯೋ ವರ್ಲ್ಡ್ ಸೆಂಟರ್ ನಮ್ಮ ಭವ್ಯ ರಾಷ್ಟ್ರದ ಗೌರವ ಮತ್ತು ನವ ಭಾರತದ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಅತಿದೊಡ್ಡ ಸಮಾವೇಶಗಳನ್ನು ನಡೆಸಲು ಅನುಕೂಲ ಕಲ್ಪಿಸುವುದರಿಂದ ಹಿಡಿದು ಸಾಂಸ್ಕೃತಿಕ ಅನುಭವಗಳವರೆಗೆ ಚಿಲ್ಲರೆ ವ್ಯಾಪಾರ ಮತ್ತು ಊಟದ ಸೌಲಭ್ಯಗಳವರೆಗೆ, ಜಿಯೋ ವರ್ಲ್ಡ್ ಸೆಂಟರ್ ಮುಂಬೈನ ಹೊಸ ಹೆಗ್ಗುರುತಾಗಲಿದೆ. ಭಾರತದ ಬೆಳವಣಿಗೆಯ ಕಥೆಯ ಮುಂದಿನ ಅಧ್ಯಾಯವನ್ನು ಬರೆಯಲು ನಾವು ಒಟ್ಟಿಗೆ ಸೇರಲಿದ್ದೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ
ಧೀರೂಭಾಯಿ ಅಂಬಾನಿ ಚೌಕ
ಧೀರೂಭಾಯಿ ಅಂಬಾನಿ ಚೌಕವು ಫೌಂಟೇನ್ ಆಫ್ ಜಾಯ್ ಸುತ್ತಲೂ ನಿರ್ಮಾಣವಾಗಲಿದೆ. ಇದು ನೀರು, ದೀಪಗಳು ಮತ್ತು ಸಂಗೀತದ ಅದ್ಭುತ ಕಾರಂಜಿ ಪ್ರದರ್ಶನಗಳ ಸರಣಿಯಾಗಿರಲಿದೆ. ಕಾರಂಜಿ ಭಾರತ ಹಾಗೂ ಅದರ ಹಲವು ಬಣ್ಣಗಳನ್ನು ಸಂಕೇತಿಸಲಿದೆ. ಎಂಟು ಫೈರ್ ಶೂಟರ್‌ಗಳು, 392 ವಾಟರ್ ಜೆಟ್‌ಗಳು ಮತ್ತು 600 ಕ್ಕೂ ಹೆಚ್ಚು ಎಲ್ಇಡಿ ದೀಪಗಳು ಸಂಗೀತದ ಮಾಧುರ್ಯಕ್ಕೆ ನೃತ್ಯ ಮಾಡುವ ಹೂವಿನ ದಳಗಳಾಗಿ ಬದಲಾಗಲಿದೆ. ಚೌಕವು ಪ್ರತಿದಿನ ಸಂಜೆಯ ಪ್ರದರ್ಶನಗಳೊಂದಿಗೆ ಆರಂಭಗೊಳ್ಳುತ್ತದೆ. ಉಚಿತ ಪ್ರವೇಶ ಪಾಸ್‌ಗಳನ್ನು www.dhirubhaiambanisquare.com ನಲ್ಲಿ ಬುಕ್ ಮಾಡಬಹುದು.
ಕನ್ವೆನ್ಷನ್ ಸೆಂಟರ್‌ನಲ್ಲಿ ಏನಿದೆ?
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್, ಭಾರತದ ಅತ್ಯುತ್ತಮ, ಬೃಹತ್ ಸಮಾವೇಶ ಮತ್ತು ಪ್ರದರ್ಶನ ಸೌಲಭ್ಯಗಳನ್ನು ನೀಡುತ್ತದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಸಮಾವೇಶ ಮತ್ತು ಪ್ರದರ್ಶನಗಳ ಪರಿಸರ ವ್ಯವಸ್ಥೆಯಲ್ಲಿ ಭಾರತವನ್ನು ದೃಢವಾಗಿ ಇರಿಸುವ ಗುರಿಯನ್ನು ಹೊಂದಿದೆ. ಇದು ಭಾರತ ಮತ್ತು ಮುಂಬೈ ನಗರಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ.
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಗ್ರಾಹಕರ ಪ್ರದರ್ಶನಗಳು, ಸಮ್ಮೇಳನಗಳು, ಎಕ್ಸಿಬಿಷನ್, ಮೆಗಾ ಕನ್ಸರ್ಟ್ಗಳು, ಗಾಲಾ ಔತಣಕೂಟಗಳು ಮತ್ತು ವಿವಾಹಗಳು ಸೇರಿದಂತೆ ವಿಶಿಷ್ಟ ವ್ಯಾಪಾರ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
1,61,460 ಚದರ ಅಡಿ ವಿಸ್ತೀರ್ಣದ 3 ಪ್ರದರ್ಶನ ಸಭಾಂಗಣಗಳು, 16,500 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. 1,07,640 ಚದರ ಅಡಿಗಳ ಒಟ್ಟು 2 ಕನ್ವೆನ್ಶನ್ ಸಭಾಂಗಣದಲ್ಲಿ 10,640 ಅತಿಥಿಗಳು ಕುಳಿತುಕೊಳ್ಳಬಹುದು.
ಭವ್ಯವಾದ 32,290 ಚದರ ಅಡಿ ಬಾಲ್ ರೂಂ, 3200 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಒಟ್ಟು 29,062 ಚದರ ಅಡಿ ವಿಸ್ತೀರ್ಣದೊಂದಿಗೆ 25 ಸಭಾ ಕೊಠಡಿಗಳು,
ಹೈಬ್ರಿಡ್ ಮತ್ತು ಡಿಜಿಟಲ್ ಅನುಭವಗಳಿಗಾಗಿ 5G ನೆಟ್ವರ್ಕ್, ದಿನಕ್ಕೆ 18,000 ಕ್ಕೂ ಹೆಚ್ಚು ಊಟವನ್ನು ಪೂರೈಸುವ ಸಾಮರ್ಥ್ಯ ಹೊಂದಿರುವ ದೊಡ್ಡ ಅಡುಗೆ ಮನೆ ಇರುವುದು ವಿಶೇಷ.
5,000 ಕಾರುಗಳ ನಿಲುಗಡೆಗೆ ಸಾಮರ್ಥ್ಯವಿರುವ ಕನ್ವೆನ್ಶನ್ ಸೆಂಟರ್ ಭಾರತದ ಅತಿದೊಡ್ಡ ಆನ್-ಸೈಟ್ ಪಾರ್ಕಿಂಗ್ ಆಗಲಿದೆ.