– ಕಂಪನಿಯ ಏಕೀಕೃತ ಆದಾಯ 10 ಲಕ್ಷ ಕೋಟಿ
– ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಸುಮಾರು 3 ಲಕ್ಷ ಕೋಟಿ ಮೌಲ್ಯದ ರಫ್ತು
– ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿ 1,592 ಕೋಟಿ ಖರ್ಚು
– ರಿಲಯನ್ಸ್ ಇಂಡಸ್ಟ್ರೀಸ್‌ನಿಂದ 1,86,000 ಕೋಟಿ ರೂ. ಹೆಚ್ಚು ತೆರಿಗೆ ಪಾವತಿ
ನವದೆಹಲಿ: ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ನೇತೃತ್ವದ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) 2023-24ನೇ ಸಾಲಿನ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಒಟ್ಟು 1,86,440 ಕೋಟಿ (1.86 ಲಕ್ಷ ಕೋಟಿ) ರೂಪಾಯಿಯನ್ನು ತೆರಿಗೆಯಾಗಿ ಠೇವಣಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 9 ಸಾವಿರ ಕೋಟಿ ರೂಪಾಯಿ ಅಧಿಕವಾಗಿದೆ ಎಂಬುದು ಕಂಪನಿಯ ವಾರ್ಷಿಕ ವರದಿಯಲ್ಲಿ ತಿಳಿದುಬಂದಿದೆ.
Advertisement
ದೇಶದ ಆರ್ಥಿಕತೆಗೆ ರಿಲಯನ್ಸ್ ಕೊಡುಗೆ ಮಹತ್ವದ್ದಾಗಿದೆ. 2023-24ರ ಹಣಕಾಸು ವರ್ಷದಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ದಾಟಿದ ಭಾರತದ ಮೊದಲ ಕಂಪನಿ ಎಂದೆನಿಸಿಕೊಂಡಿದೆ ರಿಲಯನ್ಸ್. ಈ ಅಂಕಿ-ಅಂಶವನ್ನು ಇಲ್ಲಿಯವರೆಗೆ ಯಾವುದೇ ಕಂಪನಿ ತಲುಪುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇ.27ರಷ್ಟು ಜಿಗಿತ ಕಂಡಿದೆ. ಮಾರುಕಟ್ಟೆ ಬಂಡವಾಳ ಮೌಲ್ಯದ ವಿಚಾರಕ್ಕೆ ಬಂದಲ್ಲಿ ರಿಲಯನ್ಸ್ ವಿಶ್ವದ 48ನೇ ಕಂಪನಿಯಾಗಿದ್ದು, ಕಂಪನಿಯ ಏಕೀಕೃತ ಆದಾಯ 10 ಲಕ್ಷ ಕೋಟಿ ರೂ. ಗಡಿ ದಾಟಿದೆ. ಇದನ್ನೂ ಓದಿ: ರಾಹುಲ್ ಸೇರಿದಂತೆ 7 ಸಂಸದರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ ಪಾಕ್ ಹೈಕಮಿಷನ್
Advertisement
Advertisement
ರಫ್ತಿನಲ್ಲೂ ರಿಲಯನ್ಸ್ ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ. ಕಳೆದ ಹಣಕಾಸು ವರ್ಷದಲ್ಲಿ ರಿಲಯನ್ಸ್ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೌಲ್ಯದಷ್ಟು ರಫ್ತು ಮಾಡಿದೆ. ಅಷ್ಟೇ ಅಲ್ಲ, ಕಂಪನಿಯು ದೇಶದಲ್ಲಿ ಬಂಡವಾಳ ಆಸ್ತಿಗಳ ಸೃಷ್ಟಿಯಲ್ಲಿಯೂ ಖಾಸಗಿ ವಲಯದ ಅತಿದೊಡ್ಡ ಕೊಡುಗೆದಾರರಲ್ಲಿ ಒಂದಾಗಿದೆ. ವಾರ್ಷಿಕ ವರದಿಯ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ರಿಲಯನ್ಸ್ 1,35,000 ಕೋಟಿ ರೂಪಾಯಿ ಕೊಡುಗೆ ನೀಡಿದೆ.
Advertisement
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ವಾರ್ಷಿಕ ವರದಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ, ಕಳೆದ ದಶಕದಲ್ಲಿ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ಭಾರತದ ಪ್ರಾಮುಖ್ಯತೆ ಹಲವು ಪಟ್ಟು ಹೆಚ್ಚಾಗಿದೆ. ಅಸ್ಥಿರತೆ ಮತ್ತು ಅನಿಶ್ಚಿತತೆಯ ಈ ಜಗತ್ತಿನಲ್ಲಿ ಭಾರತವು ಸ್ಥಿರತೆ ಮತ್ತು ಸಮೃದ್ಧಿಯ ಸಂಕೇತವಾಗಿ ಕಾಣುತ್ತಿದೆ. 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದ ಫಲವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಬಲವಾದ ಬೆಳವಣಿಗೆ ಆಗಿದೆ. ಭಾರತ ಮತ್ತು ಭಾರತೀಯತೆಯ ಈ ಚೈತನ್ಯವೇ ರಿಲಯನ್ಸ್ ಅನ್ನು ನಿರಂತರವಾಗಿ ಹೊಸತನ್ನು ಕಂಡುಕೊಳ್ಳಲು ಮತ್ತು ಪ್ರತಿ ಪ್ರಯತ್ನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಿಸುತ್ತದೆ. ರಿಲಯನ್ಸ್ ಕುಟುಂಬವು ಭಾರತದ ಬೆಳವಣಿಗೆಯ ಯಶೋಗಾಥೆ ಭಾಗವಾಗುವುದು ಮತ್ತು ಅದರ ಅದ್ಭುತ ಬೆಳವಣಿಗೆಗೆ ಕೊಡುಗೆ ನೀಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ
ಕಂಪನಿಯು ಸಾಮಾಜಿಕ ಜವಾಬ್ದಾರಿಗಾಗಿ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಒಟ್ಟು 1,592 ಕೋಟಿ ರೂ. ವೆಚ್ಚ ಮಾಡಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 300 ಕೋಟಿ ರೂಪಾಯಿ ಹೆಚ್ಚಾಗಿದೆ. ಲಾಭ ಗಳಿಸುವಲ್ಲಿಯೂ ಕಂಪನಿ ಮೊದಲ ಸ್ಥಾನದಲ್ಲಿದ್ದು, 2023-24ನೇ ಹಣಕಾಸು ವರ್ಷದಲ್ಲಿ ತೆರಿಗೆ ನಂತರದ ಲಾಭ 79 ಸಾವಿರ ಕೋಟಿ ರೂಪಾಯಿ ಗಳಿಸಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ ಗಳಿಸಿದ್ದ 73 ಸಾವಿರದ 670 ಕೋಟಿ ರೂಪಾಯಿಗಿಂತ ಶೇ.7.3ರಷ್ಟು ಹೆಚ್ಚಾಗಿದೆ.