ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರಿಗೆ ರೋಟರಿ ಕ್ಲಬ್ ಆಫ್ ಬಾಂಬೆ (Rotary Club Bombay) ಪ್ರತಿಷ್ಠಿತ ‘ಸಿಟಿಜನ್ ಆಫ್ ಮುಂಬೈ 2023-24’ (Citizen of Mumbai 2023-24) ಪ್ರಶಸ್ತಿ ನೀಡಿ ಗೌರವಿಸಿದೆ.
ರಿಲಯನ್ಸ್ ಫೌಂಡೇಶನ್ (Reliance Foundation) ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ ಕ್ಷೇತ್ರಗಳಲ್ಲಿ ಪರಿವರ್ತನಾಶೀಲ ಸಂಸ್ಥೆಗಳನ್ನು ರಚಿಸಿ, ನಿರಂತರ ಕೊಡುಗೆಗಳನ್ನು ನೀಡಿದ ನೀತಾ ಅಂಬಾನಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
Advertisement
Advertisement
ರೋಟರಿಯೊಂದಿಗೆ ನನ್ನ ಕುಟುಂಬದ ಒಡನಾಟ ದಶಕಗಳಷ್ಟು ಹಳೆಯದು. 1969ರಲ್ಲಿ ನನ್ನ ಮಾವ ಧೀರೂಭಾಯಿ ಅಂಬಾನಿ ರೋಟರಿಯನ್ ಆಗಿದ್ದರು. ನಂತರ 2003ರಲ್ಲಿ ಮುಖೇಶ್ ಆದರು. ರೋಟರಿಯನ್ ಆಗಿ ಇದು ನನ್ನ 25ನೇ ವರ್ಷ. ನಾನು ಈ ಪ್ರಯಾಣವನ್ನು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ನೀತಾ ಅಂಬಾನಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: Asian Games 2023- ಮಹಿಳಾ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ
Advertisement
Advertisement
ಸಿಟಿಜನ್ ಆಫ್ ಮುಂಬೈ ಪ್ರಶಸ್ತಿ ರೋಟರಿ ಕ್ಲಬ್ ಆಫ್ ಬಾಂಬೆ ನೀಡುವ ಪ್ರತಿಷ್ಠಿತ ಗೌರವ. ಇದನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹಕೊಡುಗೆ ನೀಡಿದವರಿಗೆ ಪ್ರತಿ ವರ್ಷ ನೀಡಲಾಗುತ್ತದೆ. ಇದನ್ನೂ ಓದಿ: ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್- 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
Web Stories