735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

Public TV
1 Min Read
Luxury Hotel

ನವದೆಹಲಿ: ರಿಲಯನ್ಸ್ ನ್ಯೂಯಾರ್ಕ್‍ನ ಐಷಾರಾಮಿ ಹೋಟೆಲ್ ಮ್ಯಾಂಡರಿನ್ ಓರಿಯಂಟಲ್ ಅನ್ನು 735 ಕೋಟಿ ರೂ. ಗೆ ಖರೀದಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL) ಭಾರತದಲ್ಲಿಯೇ ಅತೀ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾಗಿದೆ. ಈ ಸಂಸ್ಥೆ ಹೆಚ್ಚು ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದ ಮೂಲಕ ಭಾರತದಲ್ಲಿ ಅತಿದೊಡ್ಡ ಸಂಸ್ಥೆಯಾಗಿದೆ. ಪ್ರಸ್ತುತ ರಿಲಯನ್ಸ್ ಕೊಲಂಬಸ್ ಸೆಂಟರ್ ಕಾರ್ಪೊರೇಷನ್, ಕೇಮನ್ ದ್ವೀಪಗಳ ಸಂಪೂರ್ಣ ಷೇರು ಬಂಡವಾಳವನ್ನು 98.15 ಮಿಲಿಯನ್(735 ಕೋಟಿ) ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.

mukesh ambani

ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದಲ್ಲಿ RIL ಇದೆ. ಈಗ ಈ ಸಂಸ್ಥೆ ಕೊಲಂಬಸ್ ಸೆಂಟರ್ ನ್ಯೂಯಾರ್ಕ್ ನಗರದ ಪ್ರೀಮಿಯಂ ಐಷಾರಾಮಿ ಹೋಟೆಲ್‍ಗಳಲ್ಲಿ ಒಂದಾದ ಮ್ಯಾಂಡರಿನ್ ಓರಿಯಂಟಲ್ ನ್ಯೂಯಾರ್ಕ್‍ನಲ್ಲಿ 73.37 ಶೇಕಡಾ ಪಾಲನ್ನು ಪರೋಕ್ಷವಾಗಿ ಹೊಂದಿದೆ. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧ

ಮ್ಯಾಂಡರಿನ್ ಓರಿಯಂಟಲ್‍ನ ನ್ಯೂಯಾರ್ಕ್ ಆಸ್ತಿಯು ನ್ಯೂಯಾರ್ಕ್ ನಗರದ ಪ್ರಸಿದ್ಧ ಸ್ಥಳವಾದ ಸೆಂಟ್ರಲ್ ಪಾರ್ಕ್ ಬಳಿ ಇದೆ. ಈ ಐಕಾನಿಕ್ ಐಷಾರಾಮಿ ಹೋಟೆಲ್‍ನ್ನು 2003 ರಲ್ಲಿ ಸ್ಥಾಪಿಸಲಾಗಿತ್ತು.

Reliance

RIL ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್ ಮೆಂಟ್ಸ್ ಮತ್ತು ಹೋಲ್ಡಿಂಗ್ಸ್ ಲಿಮಿಟೆಡ್(RIIHL) ಇಂದು ಕೊಲಂಬಸ್ ಸೆಂಟರ್ ಕಾರ್ಪೊರೇಷನ್(ಕೇಮನ್) ಕಂಪನಿಯಲ್ಲಿ ಬಿಡುಗಡೆಯಾದ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ. ಇದನ್ನೂ ಓದಿ: ನೀವು ಸರಿಯಾಗಿ ಮಾಸ್ಕ್ ಧರಿಸಿದ್ರೆ ಲಾಕ್‍ಡೌನ್ ಮಾಡಲ್ಲ: ಅರವಿಂದ್ ಕೇಜ್ರಿವಾಲ್

ಒಂದು ವರ್ಷದೊಳಗೆ ರಿಲಯನ್ಸ್‍ನಿಂದ ಐಕಾನಿಕ್ ಹೋಟೆಲ್‍ನ ಎರಡನೇ ಸ್ವಾಧೀನ ಇದು. ಕಳೆದ ವರ್ಷ ಏಪ್ರಿಲ್‍ನಲ್ಲಿ, ರಿಲಯನ್ಸ್ ಯುಕೆಯಲ್ಲಿ ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿತು.

Share This Article
Leave a Comment

Leave a Reply

Your email address will not be published. Required fields are marked *