ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದ SenseHawk ಕಂಪನಿಯನ್ನು 32 ದಶಲಕ್ಷ ಡಾಲರ್(ಅಂದಾಜು 255 ಕೋಟಿ ರೂ.) ನೀಡಿ ಖರೀದಿಸಲು ಮುಂದಾಗಿದೆ.
ಕ್ಯಾಲಿಫೋರ್ನಿಯಾ ಮೂಲದ ಸೆನ್ಸ್‌ಹಾಕ್ 2018ರಲ್ಲಿ ಸ್ಥಾಪನೆಯಾಗಿದ್ದು, ಸೌರ ಶಕ್ತಿ ಉದ್ಯಮಕ್ಕೆ ಸಾಫ್ಟ್‌ವೇರ್ ಆಧಾರಿತ ನಿರ್ವಹಣಾ ಸಾಧನಗಳನ್ನು ಡೆವಲಪ್ ಮಾಡುವ ಕಂಪನಿಯಾಗಿದೆ.
Advertisement
Advertisement
ಶೇ.79.4 ಷೇರು ಖರೀದಿ ಸಂಬಂಧ ರಿಲಯನ್ಸ್ ಇಂಡಸ್ಟ್ರೀಸ್ ಸೆನ್ಸ್‌ಹಾಕ್ ಒಪ್ಪಂದ ಮಾಡಿಕೊಂಡಿದೆ. 2022, 2021 ಮತ್ತು 2022 ರ ಹಣಕಾಸು ವರ್ಷದಲ್ಲಿ ಸೆನ್ಸ್‌ಹಾಕ್ ಕ್ರಮವಾಗಿ 23,26,369 ಡಾಲರ್, 11,65,926 ಡಾಲರ್ ಮತ್ತು 12,92,063 ಡಾಲರ್ ಆದಾಯ ಗಳಿಸಿದೆ ಎಂದು ರಿಲಯನ್ಸ್ ತಿಳಿಸಿದೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್ ಕಂಪನಿ ಖರೀದಿಸಿದ ರಿಲಯನ್ಸ್
Advertisement
ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತೊಡಗಿದೆ. ರಿಲಯನ್ಸ್‌ನ ಸುಮಾರು ಶೇ.60 ರಷ್ಟು ಆದಾಯವು ತೈಲ-ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಉದ್ಯಮದಿಂದ ಬರುತ್ತದೆ. ತೈಲ ಸಂಸ್ಕರಣೆಯ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ರಿಲಯನ್ಸ್ ಚಿಲ್ಲರೆ ವ್ಯಾಪಾರ, ದೂರಸಂಪರ್ಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ.
Advertisement
ಈಗ ಗ್ರೀನ್ ಎನರ್ಜಿಯತ್ತ ರಿಲಯನ್ಸ್ ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ಮುಂದಿನ 10-15 ವರ್ಷಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಮೇಲೆ 80 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ.
ಗುಜರಾತಿನ ಜಾಮ್‌ನಗರದಲ್ಲಿರುವ ತೈಲ ಸಂಸ್ಕರಣಾ ಘಟಕದ ಬಳಿಯೇ 5 ಸಾವಿರ ಎಕ್ರೆ ಜಾಗದಲ್ಲಿ ಹೊಸ ಸಂಕೀರ್ಣ ನಿರ್ಮಾಣ ಮಾಡಲಿದೆ. ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನಲ್ಲಿ 4 ಗಿಗಾ ಘಟಕಗಳು ಸ್ಥಾಪನೆಯಾಗಲಿದೆ. ಇಲ್ಲಿ ವಿಶ್ವದರ್ಜೆಯ ಸೌರ ಫಲಕಗಳು, ಶಕ್ತಿ ಸಂಗ್ರಹ ವ್ಯವಸ್ಥೆಗಳು, ಎಲೆಕ್ಟ್ರೋಲೈಸರ್‌ಗಳು ಮತ್ತು ಇಂಧನ ಕೋಶಗಳನ್ನು ಉತ್ಪಾದನೆ ಮಾಡಲಾಗುತ್ತದೆ.