– ಒಲಿಂಪಿಕ್ಸ್ ಆತಿಥ್ಯ ಭಾರತಕ್ಕೆ ಏಕೆ ಮುಖ್ಯ?
ಗಾಂಧಿನಗರ: 2036 ರ ಒಲಿಂಪಿಕ್ಸ್ (Olympics 2036) ಕ್ರೀಡಾಕೂಟವನ್ನ ಭಾರತಕ್ಕೆ ತರುವ ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ರಿಲಯನ್ಸ್ ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಎಂದು ಹೇಳಿದರು.
Speaking at the Vibrant Gujarat Regional Conference for Kutch and Saurashtra Region.
https://t.co/4LDjmAU1gy
— Narendra Modi (@narendramodi) January 11, 2026
ರಾಜ್‌ಕೋಟ್‌ನಲ್ಲಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದ (Vibrant Gujarat Summit) ಭಾಗವಾಗಿ ಆಯೋಜಿಸಲಾಗಿರುವ ʻಕಚ್-ಸೌರಾಷ್ಟ್ರಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ವ್ಯಾಪಾರ ಪ್ರದರ್ಶನʼವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಅವರು, ಪ್ರಧಾನಿಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಇದನ್ನೂ ಓದಿ: ಆರ್‌ಸಿಬಿ ತವರಿನ ಪಂದ್ಯಗಳು ರಾಯ್‌ಪುರ ಅಥವಾ ಇಂದೋರ್‌ಗೆ ಶಿಫ್ಟ್?
ಭಾರತಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟ ತರುವ ಮೋದಿ ಅವರ ದೃಷ್ಟಿಕೋನವನ್ನ ರಿಲಯಲ್ಸ್ ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದು ದೇಶದಲ್ಲಿರುವ ಜಾಗತೀಕ ಕ್ರೀಡಾ ಮಹತ್ವಾಕಾಂಕ್ಷಿಗಳಿಗೂ ದೊಡ್ಡ ವೇದಿಕೆಯಾಗಲಿದೆ ಎಂದು ಶ್ಲಾಘಿಸಿದರು.

ಅಲ್ಲದೇ ಗುಜರಾತ್ ಶೃಂಗ ಸಮ್ಮೇಳನದಲ್ಲಿ ಮೋದಿ ಅವರು ಪಾಲ್ಗೊಂಡಿದ್ದಕ್ಕೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಇದು ಸೌರಾಷ್ಟ್ರ ಮತ್ತು ಕಚ್ (Kutch and Saurashtra) ಜನರಿಗೆ ಸಿಕ್ಕ ದೊಡ್ಡ ಗೌರವವೂ ಹೌದು. ಪ್ರಧಾನಿ ಅವರ ಉಪಸ್ಥಿತಿಯು ಈ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಅವರಿಗೆ ಇರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಬ್ರಂಟ್-ಹರ್ಮನ್‌ಪ್ರೀತ್ ಸ್ಫೋಟಕ ಫಿಫ್ಟಿ ಆಟ; ಡೆಲ್ಲಿ ವಿರುದ್ಧ ಮುಂಬೈಗೆ 50 ರನ್‌ಗಳ ಭರ್ಜರಿ ಜಯ
ಒಲಿಂಪಿಕ್ಸ್ ಆತಿಥ್ಯ ಪಡೆಯುವುದು ಹೇಗೆ?
ವಿಶ್ವದ ಸುಮಾರು ರಾಷ್ಟ್ರಗಳು ಪಾಲ್ಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಸುಲಭದ ಕೆಲಸವಲ್ಲ. 45 ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಡ್, 56 ದೇಶಗಳು ಅಂಗಳಕ್ಕಿಳಿಯುವ ಕಾಮನ್‌ವೆಲ್ತ್, 10 ರಾಷ್ಟ್ರಗಳು ಆಡುವ ವಿಶ್ವಕಪ್ ಟೂರ್ನಿಗಿಂತ ಒಲಿಂಪಿಕ್ಸ್ ಕೂಟಕ್ಕೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅದಕ್ಕೆ ತಕ್ಕಂತೆ ಲಕ್ಷಕೋಟಿಗಟ್ಟಲೆ ವೆಚ್ಚವನ್ನೂ ಮಾಡಬೇಕಾಗುತ್ತದೆ. ಈ ಜಾಗತಿಕ ಕ್ರೀಡಾ ಹಬ್ಬವು ವಾಸ್ತವವಾಗಿ ಶತಕೋಟಿ ಡಾಲರ್‌ಗಳ ವಿಷಯ. ಸ್ಥಳ, ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಅಚ್ಚುಕಟ್ಟಾಗಿದ್ದರಷ್ಟೇ ಯಶಸ್ವಿಯಾಗಿ ಆಯೋಜನೆ ಮಾಡಲು ಸಾಧ್ಯ. ಇದಕ್ಕಾಗಿ ಆತಿಥೇಯ ದೇಶವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆಯೋಜನೆಯ ಪೈಪೋಟಿ ವೇಳೆ ಅತಿಹೆಚ್ಚು ಬಿಡ್ ಮಾಡುವ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯದ ಅವಕಾಶ ಲಭಿಸುತ್ತದೆ.

ಒಲಿಂಪಿಕ್ಸ್ ಆತಿಥ್ಯ ಭಾರತಕ್ಕೆ ಏಕೆ ಮುಖ್ಯ?
ಒಲಿಂಪಿಕ್ಸ್ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್ ಬಹುದೊಡ್ಡ ಬೂಸ್ಟರ್ ಡೋಸ್ ಆಗಿದ್ದು, ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತದೆ.

