ಮುಂಬೈ: ಉಚಿತ ಡೇಟಾ (Free Data Pack) ನೀಡಿ ಭಾರತದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ಜಿಯೋ ಈಗ ಕ್ಲೌಡ್ ಸ್ಟೋರೇಜ್‌ನಲ್ಲೂ (Cloud Storage) ಕ್ರಾಂತಿ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.
ರಿಲಯನ್ಸ್ ಇಂಡಸ್ಟ್ರೀಸ್ 47ನೇ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸ್ಟೋರೇಜ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Advertisement
ಜಿಯೋ ಎಐ ಕ್ಲೌಡ್ ವೆಲಕಂ ಆಫರ್ ಈ ವರ್ಷದ ದೀಪಾವಳಿಗೆ ಬಿಡುಗಡೆ ಮಾಡುತ್ತೇವೆ. ಜಿಯೋ ಬಳಕೆದಾರರು 100 ಜಿಬಿವರೆಗೆ ಡೇಟಾವನ್ನು ಸ್ಟೋರ್ ಮಾಡಬಹುದು. ಎಲ್ಲಾ ಫೋಟೋ, ವಿಡಿಯೋ, ಡಾಕ್ಯುಮೆಂಟ್, ಡಿಜಿಟಲ್ ಕಂಟೆಟ್‌ಗಳನ್ನು ಸುರಕ್ಷಿತವಾಗಿ ಸ್ಟೋರ್ ಮಾಡಬಹುದು ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಪತ್ನಿಯ ಖಾಸಗಿ ಕ್ಷಣ ವೀಡಿಯೋ ಮಾಡಿ ಹಂಚಿಕೊಂಡ ಪತಿ!
Advertisement
Advertisement
ಕ್ಲೌಡ್‌ನಲ್ಲಿ ದರ ಸಮರ:
ಸದ್ಯ ಗೂಗಲ್ ಒನ್‌ನಲ್ಲಿ (Google One) ಉಚಿತವಾಗಿ 15 ಜಿಬಿ ಡೇಟಾವನ್ನು ಸ್ಟೋರ್ ಮಾಡಬಹುದು. ಇನ್ನು ಹೆಚ್ಚಿನ ಡೇಟಾವನ್ನು ಸಂಗ್ರಹ ಮಾಡಬೇಕಾದರೆ ಹೆಚ್ಚಿನ ಹಣವನ್ನು ಪಾವತಿಸಬೇಕು. 100 ಜಿಬಿ ಡೇಟಾಗೆ ತಿಂಗಳಿಗೆ 130 ರೂ. ಇದ್ದರೆ 200 ಜಿಬಿ ಡೇಟಾಗೆ ತಿಂಗಳಿಗೆ 210 ರೂ. ದರ ನಿಗದಿಯಾಗಿದೆ.
Advertisement
ಆಪಲ್ ಐಕ್ಲೌಡ್‌ನಲ್ಲಿ (Apple iCloud) 50 ಜಿಬಿ ಡೇಟಾಗೆ ತಿಂಗಳಿಗೆ 75 ರೂ. ಇದ್ದರೆ 200 ಜಿಬಿ ಡೇಡಾಗೆ 219 ರೂ. ದರ ನಿಗದಿ ಮಾಡಿದೆ. ತನ್ನ ಎಲ್ಲಾ ಬಳಕೆದಾರಿಗೆ ಜಿಯೋ 100 ಜಿಬಿ ವರೆಗೆ ಉಚಿತವಾಗಿ ಫ್ರೀ ಸ್ಟೋರೇಜ್ ನೀಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ಲೌಡ್‌ನಲ್ಲೂ ದರ ಸಮರ ಆರಂಭವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿಗೆ ಕೋವಿಡ್ ಉರುಳು | ಔಷಧ, ವೈದ್ಯಕೀಯ ಉಪಕರಣ ಹಗರಣ – ಇಂದು ಸಿಎಂಗೆ ವರದಿ ಸಲ್ಲಿಕೆ
ಜಿಯೋ ಸೇವೆ ಆರಂಭವಾಗುವ ಮೊದಲು ಭಾರತದಲ್ಲಿ 1 ಜಿಬಿ ಮೊಬೈಲ್ ಇಂಟರ್‌ನೆಟ್ ಡೇಟಾಗೆ 250 ರೂ. ದರ ನಿಗದಿಯಾಗಿತ್ತು. ಆದರೆ ಜಿಯೋ ಉಚಿತವಾಗಿ ಡೇಟಾ ನೀಡಿದ್ದರಿಂದ ಡೇಟಾ ಸಮರ ಆರಂಭವಾಗಿತ್ತು. ಪರಿಣಾಮ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ದರವನ್ನು ಇಳಿಕೆ ಮಾಡಿದ್ದವು. ಪರಿಣಾಮ ವಿಶ್ವದಲ್ಲೇ ಭಾರತದಲ್ಲಿ ಕಡಿಮೆ ದರದಲ್ಲಿ (1 ಜಿಬಿಗೆ 14 ರೂ.) ಇಂಟರ್‌ನೆಟ್ ಸೇವೆ ಲಭ್ಯವಿದೆ.