ವಾರದ ಹಿಂದೆ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದ ನಂತರ ಹೃದಯಾಘಾತದಿಂದ ನಿಧನರಾದ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಹಾಡಿದ ಕೊನೆಯ ಹಾಡು ರಿಲೀಸ್ ಆಗಿದೆ. ಇನ್ನಷ್ಟೇ ತೆರೆ ಕಾಣಬೇಕಿರುವ ಶೆರ್ಡಿಲ್ : ದಿ ಪಿಲಿಭೀತ್ ಸಾಗಾ ಸಿನಿಮಾದ ‘ಧೂಪ್ ಪಾನಿ ಹಹ್ನೆ ದೇ’ ಹಾಡನ್ನು ಇಂದು ಟಿ ಸೀರೀಸ್ ರಿಲೀಸ್ ಮಾಡಿದೆ.
Advertisement
ಶಂತನು ಮೊಯಿತ್ರಾ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ಪ್ರಕೃತಿ ಮಾತೆಯ ಕುರಿತಾದ ಹಾಡು ಇದಾಗಿದೆ. ಪರಿಸರವನ್ನು ಉಳಿಸಲು ಕೇಳಿಕೊಳ್ಳುವಂತಹ ಸಾಲುಗಳು ಈ ಹಾಡಿನಲ್ಲಿವೆ. ಹೀಗಾಗಿ ಒಂದೊಳ್ಳೆ ಹಾಡಿಗೆ ದನಿಯಾಗುವ ಮೂಲಕ ಪರಿಸರಕ್ಕೆ ತಮ್ಮ ಋಣ ತೀರಿಸಿದ್ದಾರೆ ಎಂದು ಅಭಿಮಾನಿಗಳು ಕೆಕೆ ಅವರನ್ನು ಭಾವುಕರಾಗಿ ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ
Advertisement
Advertisement
ಪಂಕಜ್ ತ್ರಿಪಾಠಿ ಸೇರಿದಂತೆ ಹಲವು ನಟರು ಈ ಸಿನಿಮಾದಲ್ಲಿದ್ದು, ಮೆಲೊಡಿ ಕಿಂಗ್ ಹಾಡಿನಿಂದಾಗಿ ಈ ಸಿನಿಮಾ ಮತ್ತಷ್ಟು ಜನರಿಗೆ ತಲುಪಲಿ ಎಂದು ಚಿತ್ರತಂಡ ಕೆಕೆ ಅವರನ್ನು ನೆನಪಿಸಿಕೊಂಡಿದೆ. ಈ ಮೂಲ ಅಗಲಿದ ಕೆಕೆಯ ಹಾಡನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದೆ. ಅಭಿಮಾನಿಗಳು ಈ ಹಾಡಿಗೆ ಫಿದಾ ಆಗಿದ್ದು, ಹಾಡು ಕೇಳುತ್ತಲೇ ಕಣ್ಣಿರು ಹಾಕುತ್ತಿದ್ದಾರೆ. ಕೆಕೆ ಅವರ ಕೊನೆಯ ಹಾಡು ಇದಾಗಿದ್ದರಿಂದ, ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಗೀತೆ ಕೇಳಿದ್ದಾರೆ.