ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುವ ವಿಮಾನ ಪ್ರಯಾಣಿಕರು (International Passengers) ಈ ಹಿಂದೆ ಕಡ್ಡಾಯವಾಗಿ ಭರ್ತಿ ಮಾಡಬೇಕಿದ್ದ ಏರ್ ಸುವಿಧಾ (Air Suvidha) ಪೋರ್ಟಲ್ ಇನ್ನು ಮುಂದೆ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಈ ನಿಯಮ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟನೆ ನೀಡಿದ್ದು, ಕೋವಿಡ್-19 (Covid 19) ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸಿದ್ದು, ವ್ಯಾಪಕ ಸುಧಾರಣೆಯಾಗಿದೆ. ಇನ್ನು ಮುಂದೆ ವಿದೇಶಗಳಿಂದ ಭಾರತಕ್ಕೆ ಬರುವ ವಿಮಾನ ಪ್ರಯಾಣಿಕರು ಕೋವಿಡ್-19 ಲಸಿಕೆಗಳನ್ನು ಪಡೆದಿರುವ ಬಗ್ಗೆ ದೃಢೀಕರಣವನ್ನು ನೀಡಲಾಗುವ ಏರ್ ಸುವಿಧಾ ಫಾರ್ಮ್ ಅನ್ನು ಭರಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ.
Advertisement
Advertisement
ಏನಿದು ಏರ್ ಸುವಿಧಾ?
ಏರ್ ಸುವಿಧಾ ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ತಿಳಿಸಲು ಕಡ್ಡಾಯವಾದ ಸ್ವಯಂ ಘೋಷಣಾ ಫಾರ್ಮ್ ಆಗಿದೆ. ಇದನ್ನು ಪ್ರಯಾಣಿಕರು ಆನ್‌ಲೈನ್‌ನಲ್ಲಿ ಭರಿಸಲು ವ್ಯವಸ್ಥೆ ಮಾಡಲಾಗಿದೆ. ಇದೀಗ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಈ ನಿಯಮವನ್ನು ಪರಿಶೀಲಿಸಿದೆ. ಇದನ್ನೂ ಓದಿ: ಚಿಲುಮೆ ವಿರುದ್ಧ ಕೇಸ್: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ
Advertisement
ವಿಮಾನಯಾನ ಸಚಿವಾಲಯದ ಏರ್ ಸುವಿಧಾ ಪೋರ್ಟಲ್ ಅನ್ನು ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಭರ್ತಿ ಮಾಡಬೇಕಿತ್ತು. ಅದರಲ್ಲಿ ಪ್ರಯಾಣಿಕರು ತಾವು ತೆಗೆದುಕೊಂಡಿರುವ ಕೋವಿಡ್ ಲಸಿಕೆಗಳ ಸಂಖ್ಯೆ ಹಾಗೂ ದಿನಾಂಕಗಳನ್ನೊಳಗೊಂಡಂತೆ ತಮ್ಮ ಪ್ರಸ್ತುತ ಆರೋಗ್ಯದ ಸ್ಥಿತಿಗಳನ್ನು ತಿಳಿಸಬೇಕಿತ್ತು.
Advertisement
ಇದೀಗ ಕೇಂದ್ರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಇನ್ನು ಮುಂದೆ ಅಂತಾರಾಷ್ಟ್ರೀಯ ಪ್ರಯಾಣಿಕರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ. ಕೆಲವು ದಿನಗಳ ಹಿಂದೆ, ಸರ್ಕಾರ ವಿಮಾನ ಪ್ರಯಾಣಿಕರಿಗೆ ವಿಮಾನಗಳಲ್ಲಿ ಅಥವಾ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಮಾಸ್ಕ್ ಧಾರಣೆಗೆ ಸಡಿಲಿಕೆ ನೀಡಿತ್ತು. ಇದನ್ನೂ ಓದಿ: ಹಿಜಬ್ ವಿವಾದ – ಫಿಫಾ ವಿಶ್ವಕಪ್‍ನಲ್ಲಿ ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್