ಚಿಕ್ಕಬಳ್ಳಾಪುರ: ಸಾವಿನ ಸೂತಕದ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾದ ಮೂವರು ಸಂಬಂಧಿಕ ಯುವಕರನ್ನು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿ (Manchenahalli) ಪೊಲೀಸರು ಬಂಧಿಸಿದ್ದಾರೆ.
ಮನೆಯ ಮಾಲೀಕ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗಸ್ಟ್ 17 ರಂದು ಅಲಕಾಪುರ ಗ್ರಾಮದ ಸರ್ದಾರ್ ಭಾಷಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಸಂಬಂಧಿಕರೆಲ್ಲ ಸಾವಿನ ಮನೆಗೆ ಬರುತ್ತಿದ್ದರು. ಸರ್ದಾರ್ ಬಾಷಾ ಮೃತದೇಹವನ್ನ ಅವರ ಅಣ್ಣನ ಮನೆಯ ಮುಂದೆ ರಾತ್ರಿಪೂರ್ತಿ ಇಟ್ಟಿದ್ದರು. ಇತ್ತ ಸರ್ದಾರ್ ಬಾಷಾ ಮನೆಗೆ ಬೀಗ ಹಾಕಿದ್ದಾಗ, ಯಾರೂ ಇರಲಿಲ್ಲ. ಇದೇ ವೇಳೆಯಲ್ಲಿ ಮೂವರು ಸಂಬಂಧಿಕ ಯುವಕರು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: 2028 ರವರೆಗೆ ಅಭಿಮಾನಿಗಳು ಕಾಯಬೇಕು: ಸಿಎಂ ಸ್ಥಾನದ ಬಗ್ಗೆ ಸತೀಶ್ ಜಾರಕಿಹೊಳಿ ಮಾತು
Advertisement
Advertisement
ಬೀರುವಿನಲ್ಲಿದ್ದ ಚಿನ್ನದ ನೆಕ್ಲೆಸ್, ಚಿನ್ನದ ಸರ ಹಾಗೂ ಚಿನ್ನದ ಓಲೆಗಳನ್ನ ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: Jammu and Kashmir elections | ಬಿಜೆಪಿಯಿಂದ 10 ಅಭ್ಯರ್ಥಿಗಳನ್ನೊಳಗೊಂಡ 6ನೇ ಪಟ್ಟಿ ರಿಲೀಸ್
Advertisement
Advertisement
ಪ್ರಕರಣ ದಾಖಲಿಸಿಕೊಂಡ ಮಂಚೇನಹಳ್ಳಿ ಪೊಲೀಸರು ಅದೇ ಗ್ರಾಮದ ಸಿದ್ದಿಕ್, ಜಮೀರ್ ಹಾಗೂ ಇಲ್ಲು ಎಂಬಾತನನ್ನ ಬಂಧಿಸಿದ್ದಾರೆ. ಬಂಧಿತರು ಕಳವು ಮಾಡಿ ದೊಡ್ಡಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣವನ್ನ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್ – ಬಾಲಕ ಸ್ಥಳದಲ್ಲೇ ಸಾವು!