ಬಹುಕೋಟಿ ವಂಚನೆ ಆರೋಪದಲ್ಲಿ ಜೈಲುಪಾಲಾಗಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೊತೆಗಿನ ಸಂಬಂಧವನ್ನು ಮತ್ತೆ ನಿರಾಕರಿಸಿದ್ದಾರೆ ಬಾಲಿವುಡ್ ನಟಿ ನೋರಾ ಫತೇಹಿ. ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಸುಖಾಸುಮ್ಮನೆ ಎಳೆತಂದಿರುವ ಮತ್ತೋರ್ವ ನಟಿ ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಅವರು ಹೂಡಿದ್ದಾರೆ.
- Advertisement -
ಈ ವಿಚಾರವಾಗಿ ದೆಹಲಿಯ ಪಟಿಯಾಲ ಹೌಸ್ ಕೋರ್ಟಿಗೆ ಬಂದಿದ್ದ ನೋರಾ, ‘ಸುಕೇಶ್ ನನಗೆ ಪರಿಚಯವೇ ಇಲ್ಲ. ಈ ಪ್ರಕರಣವನ್ನು ಬೇರೆ ಕಡೆ ತಿರುಗಿಸುವ ಉದ್ದೇಶದಿಂದ ನನ್ನ ಹೆಸರನ್ನು ತಳುಕು ಹಾಕಿದ್ದಾರೆ. ಇದರಿಂದಾಗಿ ನಾನು ಮಾನಸಿಕವಾಗಿ ನೊಂದಿದ್ದೇನೆ. ಸಿನಿಮಾ ಅವಕಾಶಗಳನ್ನೂ ಕಳೆದುಕೊಂಡಿದ್ದೇನೆ. ನನ್ನ ಗೌರವವನ್ನು ಹಾಳು ಮಾಡಿದ ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದರು.
- Advertisement -
- Advertisement -
ಸುಕೇಶ್ ಬರೆದ ಲವ್ ಲೆಟರ್
- Advertisement -
ಈ ಹಿಂದೆ ತಮ್ಮ ಇಬ್ಬರು ಗರ್ಲ್ ಫ್ರೆಂಡ್ ಬಗ್ಗೆ ಪತ್ರವೊಂದನ್ನು ಬರೆದಿದ್ದ ಸುಕೇಶ್ . ಆ ಪತ್ರವನ್ನು ಮಾಧ್ಯಮ ಪ್ರಕಟಣೆಗೆ ನೀಡಿದ್ದ. ಸುಕೇಶ್ ಬರೆದ ಪತ್ರದಲ್ಲಿ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮತ್ತು ನೋರಾ (Nora) ಬಗೆಗಿನ ಸಂಬಂಧವನ್ನು ಹೇಳಿಕೊಂಡಿದ್ದ. ಜಾಕ್ವೆಲಿನ್ ಕಂಡರೆ ನೋರಾಗೆ ಹೊಟ್ಟೆಉರಿ. ಹಾಗಾಗಿ ಜಾಕ್ವೆಲಿನ್ ಬಗ್ಗೆ ಸಲ್ಲದ ಆರೋಪಗಳನ್ನು ಆಕೆ ಮಾಡುತ್ತಿದ್ದಾಳೆ ಎಂದು ಹೇಳಿದ್ದ.
ಸುಕೇಶ್ ವಿರುದ್ಧ ಕೋರ್ಟ್ (Court) ಮೆಟ್ಟಿಲು ಏರಿದ್ದ ಜಾಕ್ವೆಲಿನ್, ಬಾಯ್ ಫ್ರೆಂಡ್ ಸುಕೇಶ್ ಬಗ್ಗೆ ಒಂದಷ್ಟು ಆರೋಪ ಮಾಡಿದ್ದಳು. ತನ್ನ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಹಾಳಾಗಿದ್ದು ಸುಕೇಶ್ ನಿಂದ. ಅವನು ಮಹಾ ಮೋಸಗಾರ ಎಂದೂ ಮಾತನಾಡಿದ್ದರು. ಈತನ ಬಗ್ಗೆ ಎಲ್ಲವೂ ಗೊತ್ತಿದ್ದರೂ, ನೂರಾ ಅದೆಲ್ಲವನ್ನೂ ಬಚ್ಚಿಟ್ಟಿದ್ದಳು ಎಂದು ಆಕೆಯ ಮೇಲೂ ಹರಿಹಾಯ್ದಿದ್ದಳು.
ಜಾಕ್ವೆಲಿನ್ ಮಾತನಾಡಿದ ಬೆನ್ನಲ್ಲೇ ಸುಕೇಶ್ ಪತ್ರವೊಂದನ್ನು ತಮ್ಮ ವಕೀಲರ ಮೂಲಕ ಬಿಡುಗಡೆ ಮಾಡಿಸಿದ್ದ. ‘ಜಾಕ್ವೆಲಿನ್ ಜೊತೆ ನನ್ನ ಸ್ನೇಹ ಮುರಿಯಬೇಕು ಎಂದು ಹಲವಾರು ಬಾರಿ ನೋರಾ ಪ್ರಯತ್ನಿಸಿದಳು. ಜಾಕ್ವೆಲಿನ್ ಜೊತೆ ನಾನು ಇರುವುದು ಆಕೆಗೆ ಇಷ್ಟವಿರಲಿಲ್ಲ. ಜಾಕ್ವೆಲಿನ್ ಜೊತೆ ಹೋಗಲು ನೋರಾ ಬಿಡುತ್ತಿರಲಿಲ್ಲ. ನಾನು ಕಾಲ್ ರಿಸೀವ್ ಮಾಡದೇ ಇದ್ದರೆ ಪದೇ ಪದೇ ಕಾಲ್ ಮಾಡುತ್ತಿದ್ದಳು. ಜಾಕ್ವೆಲಿನ್ ಜೊತೆಗಿನ ಸ್ನೇಹವನ್ನು ಮುರಿದುಕೋ ಎಂದು ಹೇಳುತ್ತಿದ್ದಳು’ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದ.
ನೋರಾ ಏನೆಲ್ಲ ಇಷ್ಟ ಪಡುತ್ತಿದ್ದಳೋ ಅದೆಲ್ಲವನ್ನೂ ಕೊಟ್ಟಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದ ಸುಕೇಶ್. ಬ್ಯಾಗ್, ಒಡವೆ ಇತ್ಯಾದಿ ಫೋಟೋಗಳನ್ನು ನೋರಾ ಕಳುಹಿಸುತ್ತಿದ್ದಳು. ಆಕೆ ಏನೆಲ್ಲ ಕೇಳುತ್ತಿದ್ದಳೋ ಅದೆಲ್ಲವನ್ನೂ ನಾನು ಕಳುಹಿಸಿದ್ದೇನೆ. ಎರಡು ಕೋಟಿ ರೂಪಾಯಿಗೂ ಅಧಿಕ ವಸ್ತುಗಳನ್ನು ನೋರಾಗೆ ಕೊಟ್ಟಿದ್ದೇನೆ ಎಂದು ಅವನು ಪತ್ರದಲ್ಲಿ ಬರೆದಿದ್ದ. ಈ ಪತ್ರ ಬರೆಯುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟ ಪಡಿಸದೇ ಇದ್ದರೂ, ಪತ್ರವಂತೂ ಭಾರೀ ಸದ್ದು ಮಾಡಿತ್ತು.
Web Stories