ಚಿಕ್ಕೋಡಿ: ಕಾಂಗ್ರೆಸ್ (Congress) ಪಕ್ಷ ರಾಮಮಂದಿರ (Ram Mandir) ಉದ್ಘಾಟನೆಯ ಆಮಂತ್ರಣವನ್ನು ತಿರಸ್ಕಾರ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಶ್ರೀರಾಮ ಸೇನೆ (Sri Ram Sena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ಶ್ರೀರಾಮ ಮಂದಿರ ಉದ್ಘಾಟನೆ ಆಮಂತ್ರಣ ಕಾಂಗ್ರೆಸ್ ಪಕ್ಷದಿಂದ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉದ್ಘಾಟನೆಗೆ ಹೋಗುವುದು ಬಿಜೆಪಿಗೆ ಆರ್‌ಎಸ್‌ಎಸ್‌ಗೆ ನಮಸ್ಕಾರ ಮಾಡಲು ಅಲ್ಲ. ರಾಮನಿಗೆ ನಮಸ್ಕಾರ ಮಾಡಲು ಹೋಗುವುದು. 500 ವರ್ಷಗಳ ನಂತರ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗದೇ ಇರುವುದು ನಿಮ್ಮ ದೌರ್ಭಾಗ್ಯ. ನಿಜವಾಗಿಯೂ ಹಿಂದೂಗಳ ರಾಮನ ಶಾಪ ನಿಮಗೆ ತಟ್ಟುತ್ತದೆ. ಭಾಗವಹಿಸಿದ್ದರೆ ನೀವು ಹಿಂದೂ ಸಮಾಜದ ಜೊತೆ ಒಂದಾಗುತಿದ್ದರೆ ನಿಮಗೂ ರಾಮನ ಕೃಪೆ ಸಿಗುತ್ತಿತ್ತು. ಪಾಪಿಷ್ಟರ ಜೊತೆ ರಾವಣನ ಮನಸ್ಥಿತಿಯವರು ನೀವು ತಿರಸ್ಕಾರ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಅಕ್ಷಮ್ಯ ಅಪರಾಧ ಮಾಡಿ ಕಾಂಗ್ರೆಸ್‌ನವರು ತಪ್ಪು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ತಾನು ರಾಮ ವಿರೋಧಿ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ: ವೇದವ್ಯಾಸ್ ಕಾಮತ್
Advertisement
Advertisement
ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ರಾಜಕೀಯ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಹಿಂದೂಗಳ ಪರವಾಗಿಲ್ಲ. ಮುಸ್ಲೀಮರ ತುಷ್ಟೀಕರಣ ಮಾಡುವುದರಲ್ಲೇ ಕಾಂಗ್ರೆಸ್ ಪಕ್ಷ ಬೆಳೆದು ಬಂದಿದೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅವರು ರಾಮಮಂದಿರಕ್ಕಾಗಿ ಕಲ್ಲು ಹೊತ್ತಿದ್ದೇವೆ. ಲಾಠಿ ಏಟು ತಿಂದಿದ್ದೇವೆ, ಜೈಲಿಗೆ ಹೋಗಿ ಬಂದಿದ್ದೇವೆ. ಬಾಬರನ ಅನ್ಯಾಯದ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ್ದೇವೆ. ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡಲು ನಮಗೆ ಹಕ್ಕಿದೆ. ಕಾಂಗ್ರೆಸ್ ಪಕ್ಷ ರಾಮ ಮಂದಿರ ವಿಚಾರದಲ್ಲಿ ಅಧರ್ಮ ದೇಶ ವಿರೋಧಿ ರಾಜಕೀಯ ಮಾಡುತ್ತಿದೆ. ಬಿಜೆಪಿ, ಆರ್‌ಎಸ್‌ಎಸ್ ರಾಜಕೀಯ ಮಾಡುತ್ತಿದೆ ಎನ್ನಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಾಣ ಪ್ರತಿಷ್ಠಾಪನೆಗೆ ಗೈರಾಗಲು ಕಾಂಗ್ರೆಸ್ ತೀರ್ಮಾನ ದುರ್ದೈವದ ಸಂಗತಿ: ಯಡಿಯೂರಪ್ಪ
Advertisement